ತುಮಕೂರು:ಸಾವರ್ಕರ್​ ಫೋಟೋ-ಫ್ಲೆಕ್ಸ್​ ಅಳವಡಿಕೆ ವಿಚಾರ ರಾಜ್ಯದೆಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ವಿನಾಯಕ ದಾಮೋದರ್​ ಸಾವರ್ಕರ್​ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿವಿ ಸಿಂಡಿಕೇಟ್​ ಸಭೆಯಲ್ಲಿ ಶುಕ್ರವಾರ ಒಪ್ಪಿಗೆ ನೀಡಲಾಗಿದೆ.
ವಿವಿಯಲ್ಲಿ 14 ಅಧ್ಯಯನ ಪೀಠಗಳಿದ್ದು, ಸಿಎಂ ಬಸವರಾಜು ಬೊಮ್ಮಾಯಿ ಕೂಡ ಅಗ್ನಿ ಬನ್ನಿಗರಾಯ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಪ್ರಸ್ತುತ ಪೀಠಗಳ ಸಂಖ್ಯೆ 16ಕ್ಕೇರಿದೆ. ವಿವಿ ಸಿಂಡಿಕೇಟ್​ ಸದಸ್ಯ ಟಿ.ಡಿ.ವಿನಯ್​ ಶುಕ್ರವಾರ ನಡೆದ ಸಭೆಯ ಟೇಬಲ್​ ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.
ಪೀಠ ಸ್ಥಾಪನೆಗೆ ಕಾರಣರಾಗಿರುವ ಸಿಂಡಿಕೇಟ್​ ಸದಸ್ಯ ಟಿ.ಡಿ.ವಿನಯ್​ 1 ಲಕ್ಷ ರೂ. ಮೂಲ ಠೇವಣಿ ಕೂಡ ನೀಡಿದ್ದು, ಪೀಠ ಸ್ಥಾಪನೆಗೆ ಒಪ್ಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ವಿನಾಯಕ ದಾಮೋದರ್​ ಸಾವರ್ಕರ್​ ಪೀಠ ಸ್ಥಾಪನೆಗೆ ಅಗತ್ಯವಿರುವ ಕರಡು ಪರಿನಿಯಮಗಳನ್ನೂ ಸಿದ್ಧಪಡಿಸಲಾಗಿದೆ. ಪೀಠ ಕಾರ್ಯಾರಂಭಕ್ಕೆ ಅಗತ್ಯವಿರುವ 25 ಲಕ್ಷ ರೂಪಾಯಿಯನ್ನು ದಾನಿಗಳಿಂದ ಕೊಡುಗೆಯಾಗಿ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿವಿಯಲ್ಲಿ ಸಾವರ್ಕರ್​ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ದೇಶದಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ.
ವಿನಾಯಕ ದಾಮೋದರ್​ ಸಾವರ್ಕರ್​ ಭಾರತದ ಹೆಮ್ಮೆಯ ಪುತ್ರರಾಗಿದ್ದು, ರಾಜಕಾರಣಿ, ಕ್ರಾಂತಿಕಾರಿ ಹಾಗೂ ಬರಹಗಾರರಾಗಿದ್ದಾರೆ. ಅವರು ರಾಷ್ಟ್ರೀಯ ಸಿದ್ಧಾಂತ ಪ್ರತಿಪಾದಕರಾಗಿದ್ದು, ಜಿಲ್ಲೆಯ ಯುವಜನರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಪೀಠ ಸ್ಥಾಪನೆಗೆ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದ ಪ್ರಸ್ತಾಪಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.| ಟಿ.ಡಿ.ವಿನಯ್ಸಿಂಡಿಕೇಟ್​ ಸದಸ್ಯ
ಹೈಕೋರ್ಟ್​ನ ಮೂರೂ ಪೀಠಗಳಿಗೆ ಆ.29ರಂದು ರಜೆ

ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕ ಪ್ರಕಟ: ಪ್ರಧಾನಿ ಮೋದಿ ಮತ್ತೊಮ್ಮೆ ನಂ.1

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
