ಬೆಂಗಳೂರು:ಕನ್ನಡ ಕಿರುತೆರೆ ಕಲಾವಿದ ಮಂಡ್ಯ ರವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಂಡ್ಯ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷರೂ ಆದ ನಿವೃತ್ತ ಪ್ರಾಧ್ಯಾಪಕ ಎಚ್​.ಎಸ್​.ಮುದ್ದೇಗೌಡ ಅವರ ಪುತ್ರ ರವಿ. ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಂಡ್ಯ ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳು ಜಾನಕಿ, ಮಿಂಚು, ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ಓಂ ಶಕ್ತಿ ಓಂ ಶಾಂತಿ, ವರಲಕ್ಷ್ಮೀ ಸ್ಟೋರ್ಸ್​ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ​ಕಾಫಿತೋಟ, ಘಜಲ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪೂರ್ಣ ಹೆಸರು ರವಿ ಪ್ರಸಾದ್​ ಎಂ. ಚಿತ್ರರಂಗದಲ್ಲಿ ಮಂಡ್ಯ ರವಿ ಎಂದೇ ಚಿರಪರಿಚಿತ.
ಮಂಡ್ಯ ರವಿ ಅವರು ಎಂಎ(ಇಂಗ್ಲಿಷ್​), ಎಲ್​ಎಲ್​ಬಿ ಓದಿದರೂ ಬಣ್ಣದ ಲೋಕದತ್ತ ಆಕರ್ಷಿತರಾಗಿ ನಟನೆಯತ್ತ ಆಗಮಿಸಿದರು. 1996ರಲ್ಲಿ ‘ಜನದನಿ’ ಎಂಬ ಹವ್ಯಾಸಿ ನಾಟಕ ತಂಡ ಸೇರಿದರು. ಟಿ.ಎಸ್​.ನಾಗಾಭರಣ ನಿರ್ದೇಶನದ ‘ಮಾಹಾಮಾಯಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. ‘ಮಗಳು ಜಾನಕಿ’ ಧಾರಾವಾಹಿಯ ಚಂದು ಭಾರ್ಗಿ ಪಾತ್ರಧಾರಿಯಾಗಿ ಮಂಡ್ಯ ರವಿ ನಟಿಸಿ ವೀಕ್ಷಕರ ಮನಕ್ಕೆ ಮತ್ತಷ್ಟು ಹತ್ತಿರವಾಗಿದ್ದರು. ಇವರು ಶೀಘ್ರ ಗುಣಮುಖವಾಗಲೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಮೈಸೂರು ಅರಮನೆಯಲ್ಲಿ ಮರಿಗೆ ಜನ್ಮ ನೀಡಿದ ಲಕ್ಷ್ಮೀ ಆನೆ! ಆನೆ ಗರ್ಭಿಣಿ ಎಂಬುದು ನಮ್ಗೆ ಗೊತ್ತೇ ಇರಲಿಲ್ಲ… ಎಂದ ಅಧಿಕಾರಿಗಳು

ರೋಗಿಯ ಜೀವ ಉಳಿಸಲು ಬೆಂಗಳೂರಿನ ಟ್ರಾಫಿಕ್​ನಲ್ಲಿ 3 ಕಿ.ಮೀ. ಓಡಿದ ಡಾಕ್ಟರ್​! ವಿಡಿಯೋ ವೈರಲ್​, ಎಲ್ಲೆಡೆ ಮೆಚ್ಚುಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
