ಕಡೂರು:ಒಬ್ಬಳೇ ಯುವತಿಯನ್ನು ಮದುವೆಯಾದ ಯುವಕರಿಬ್ಬರ ನಡುವಿನ ಜಗಳ ಇದು. ಆಕೆಯ ಮೊದಲ ಗಂಡನನ್ನು ಅಪಹರಿಸಿ ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಪ್ರಕರಣ?: ಚಿಕ್ಕಮಗಳೂರು ಜಿಲ್ಲೆ ಕಡೂರು ಸಿಪಿಸಿ ಕಾಲನಿಯ ದಿನಸಿ ವ್ಯಾಪಾರಿ ಮೋಹನ್​ರಾಮ್​ ಐದು ವರ್ಷದ ಹಿಂದೆ ರಾಜಸ್ಥಾನದ ಮಂಜುಳಾ ಎಂಬಾಕೆಯನ್ನು ಜೋಧ್​ಪುರದಲ್ಲಿಯೇ ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕಡೂರಿಗೆ ಕರೆತಂದಿದ್ದ. ಎರಡು ತಿಂಗಳ ನಂತರ ಮಂಜುಳಾ ತವರಿಗೆ ಹೋಗಿದ್ದಳು. ಕೆಲ ದಿನಗಳ ನಂತರ ಪತ್ನಿಯನ್ನು ಕರೆತರಲು ಮೋಹನ್​ ರಾಮ್​ ಹೋಗಿದ್ದ. ಆದರೆ ಆಕೆ ಬರಲು ಒಪ್ಪಲಿಲ್ಲ. ಬೇಸತ್ತು ಸುಮ್ಮನಾಗಿದ್ದ.
ಕಳೆದ ತಿಂಗಳು ಮಂಜುಳಾರನ್ನು ಹರಿಯಾಣದ ಓಂಪ್ರಕಾಶ್​ ಎಂಬಾತನ ಜತೆ ಮದುವೆ ಮಾಡಿಕೊಟ್ಟಿರುವುದು ಮೋಹನ್​ಗೆ ಗೊತ್ತಾಗಿದೆ. ಇತ್ತೀಚೆಗೆ ಮಂಜುಳಾಗೆ ಮೆಸೇಜ್​ ಮಾಡಿ ಮದುವೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮೋಹನ್​ರಾಮ್​ ಯತ್ನಿಸುತ್ತಿದ್ದ. ಇದನ್ನು ಸಹಿಸದ ಓಂಪ್ರಕಾಶ್​, ತನ್ನ ಪತ್ನಿಯ ಮೊದಲ ಗಂಡನಿಗೆ ಗತಿ ಕಾಣಿಸಬೇಕು ಎಂದು ಸಂಚು ರೂಪಿಸಿದ್ದ.
ಅದರಂತೆ ತನ್ನ ತಂಡದೊಂದಿಗೆ ಕಾರಿನಲ್ಲಿ ಆ.28ರ ರಾತ್ರಿ ಕಡೂರು ಪಟ್ಟಣಕ್ಕೆ ಬಂದು ಮೋಹನ್​ರಾಮ್​ನನ್ನು ಅಪಹರಿಸಿ, ಕಾರಿನಲ್ಲಿಯೇ ಕೊಲೆಗೆ ಯತ್ನಿಸಿದ್ದ. ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರನ್ನು ಚೇಸ್​ ಮಾಡಿಕೊಂಡು ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಮತಿಘಟ್ಟ ಬಳಿ ಕಾರು ಕೆಟ್ಟುನಿಂತಿತ್ತು. ಅಷ್ಟರಲ್ಲಿ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಆರೋಪಿಗಳಾದ ಓಂಪ್ರಕಾಶ್​ ಹಾಗೂ ಆತನ ಸಹಚರರಾದ ಶೈಲೇಂದ್ರ, ಪ್ರದೀಪ್​, ದಲ್ಲಾರಾಮ್​, ಜಿತೇಂದ್ರ, ಶಂಕರ್​ ಪಾಟೀಲ್​ ಹಾಗೂ ದಿನೇಶ್​ ಬಂಧಿತರು.
ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ

ಧರ್ಮಸ್ಥಳದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಭಿನ್ನಕೋಮಿನ ಜೋಡಿಗೆ ಮಾರ್ಗದಲ್ಲೇ ಕಾದಿತ್ತು ಶಾಕ್​

ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
