ರಾಯಚೂರು:ಸೆಲ್ಫಿ ಹುಚ್ಚಾಟಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನ ರಾಯಚೂರು ತಾಲೂಕಿನ ಕಲ್ಮಲ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾದ ವೈಭವ್​(17) ಮತ್ತು ಸುಜೀತ್ (17) ಮೃತ ದುರ್ದೈವಿಗಳು. ವೈಭವ್​, ಸುಜೀತ್​, ನಾಗೇಂದ್ರ ಮತ್ತು ತರುಣ್ ಸೇರಿ ನಾಲ್ವರು ಸ್ನೇಹಿತರು ಭಾನುವಾರ ರಜೆ ಹಿನ್ನೆಲೆ ಪಿಕ್​ನಿಕ್​ಗೆಂದು ತೆರಳಿದ್ದರು. ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಿದ್ದು, ಈ ವೇಳೆ ಕಾಲು ಜಾರಿ ನಾಲ್ವರೂ ಕಾಲುವೆಗೆ ಬಿದ್ದಿದ್ದಾರೆ.
ಕಾಲುವೆಗೆ ಬಿದ್ದ ನಾಲ್ವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ, ಸುಜಿತ್ ಮತ್ತು ವೈಭವ್ ನೀರಲ್ಲಿ ಕೊಚ್ಚಿ ಹೋಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ರಾಜ್ಯದಲ್ಲಿರೋದು ಚಂಬಲ್​ ಕಣಿವೆ ಡಕಾಯಿತರ ಆಡಳಿತ, ಖಜಾನೆ ಲೂಟಿ ಆಗ್ತಿದೆ: ಎಚ್​ಡಿಕೆ ಆಕ್ರೋಶ

ಹುಳಿಯಾರು ಠಾಣೆ ಮಹಿಳಾ ಪೇದೆ ಕೊಲೆ: ಸ್ನೇಹಿತನ ಜತೆ ಸೇರಿ ಗಂಡನನ್ನು ಕೊಂದಿದ್ದಳಾ ಅಕ್ಕ? ಡೆತ್​ನೋಟಲ್ಲಿದೆ ಆಘಾತಕಾರಿ ವಿಷ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
