ಮಂಡ್ಯ:ತುಂಡರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯರಿಬ್ಬರ ಅರ್ಧ ದೇಹಗಳು ಪತ್ತೆಯಾಗಿದ್ದು, ಮಂಡ್ಯ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಪಾಂಡವಪುರ ತಾಲೂಕಿನಲ್ಲಿ ಒಬ್ಬ ಮಹಿಳೆಯ ಅರ್ಧ ಶವ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದೆ. ಇಬ್ಬರು ಮಹಿಳೆಯರನ್ನು ಒಂದೇ ರೀತಿ ಹತ್ಯೆ ಮಾಡಲಾಗಿದ್ದು, ತಲೆ, ಎದೆ, ಕೈಗಳು ಇಲ್ಲದೆ ಸೊಂಟದಿಂದ ಕೆಳ ಭಾಗ ಮಾತ್ರ ಪತ್ತೆಯಾಗಿದೆ. ಕಾಲುಗಳನ್ನು ಕಟ್ಟಿ ದೇಹವನ್ನು ತುಂಡರಿಸಿ ಅರ್ಧಭಾಗವನ್ನ ಕಾಲುವೆಗಳಿಗೆ ಎಸೆದಿದ್ದಾರೆ.
ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಒಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಚಿಕ್ಕ ದೇವರಾಜ ಕಾಲುವೆಯಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದೆ. ಬೇಬಿ ಗ್ರಾಮದ ಕಾಲುವೆಯಲ್ಲಿ ಸಿಕ್ಕ ಅರ್ಧ ಶವ ಸುಮಾರು 30 ವರ್ಷ ವಯಸ್ಸಿನ ಮಹಿಳೆಯದ್ದು, ಅರಕೆರೆ ಗ್ರಾಮದ ಕಾಲುವೆಯಲ್ಲಿ ಪತ್ತೆಯಾದ ಶವ 40 ರಿಂದ 45 ವಯಸ್ಸಿನ ಮಹಿಳೆಯದ್ದು ಎನ್ನಲಾಗಿದೆ.
ಇಬ್ಬರು ಮಹಿಳೆಯರನ್ನು ಒಂದೇ ಮಾದರಿಯಲ್ಲಿ ಕೊಲೆ ಮಾಡಿರುವ ಹಂತಕರು, ಬೇರೆ ಬೇರೆ ಕಡೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ದೇಹ ತುಂಡರಿಸಿ, ಒಂದು ಭಾಗವನ್ನ ನಾಲೆಗಳಿಗೆ ಎಸೆದು, ಸೊಂಟದಿಂದ ಮೇಲ್ಭಾಗ ಏನು ಮಾಡಿದ್ದಾರೆ ಎಂಬುದು ಇನ್ನೂ ಗೊತ್ತಾಗಿದೆ. ಮಹಿಳೆಯರನ್ನು ಭೀಕರವಾಗಿ ಯಾಕೆ ಕೊಂದದ್ದು? ಯಾರು ಕೊಂದದ್ದು? ಈ ಮಹಿಳೆಯರು ಯಾರು? ಎಂಬ ಸುಳಿವು ಇನ್ನೂ ಸಿಕ್ಕಿಲ್ಲ. ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ಮುಂದುವರಿಸಿದ್ದಾರೆ. ಅರಕೆರೆ ಹಾಗೂ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four + 18 =
Remember me
