ಮಂಡ್ಯ:ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಹಿಳೆಯರಿಬ್ಬರ ಅರ್ಧ ದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ವಿಳಾಸ ಹಾಗೂ ಆರೋಪಿಗಳ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್​ ಇಲಾಖೆ ಘೋಷಣೆ ಮಾಡಿದೆ.
ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಸಮೀಪ ಕೆರೆಯಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಸುಮಾರು 30ರಿಂದ 32 ವರ್ಷದ ಮಹಿಳೆಯ ಅರ್ಧ ದೇಹ ಪತ್ತೆಯಾಗಿತ್ತು. ಅಂತೆಯೇ ಶ್ರೀರಂಗಪಟ್ಟಣ ತಾಲೂಕು ಮಾಡರಹಳ್ಳಿ ರಸ್ತೆಯ ಬಳಿ ಸಿಡಿಎಸ್​ ನಾಲೆಗೆ ಸಂಪರ್ಕಿಸುವ ಸಾರೋಡು ಹಳ್ಳದ ಪಕ್ಕದ ಜಮೀನಿನಲ್ಲಿ 40ರಿಂದ 45 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಅರ್ಧ ಶವ ಸಿಕ್ಕಿತ್ತು. ಇಬ್ಬರು ಮಹಿಳೆಯರನ್ನು ಒಂದೇ ರೀತಿ ಹತ್ಯೆ ಮಾಡಲಾಗಿದ್ದು, ತಲೆ, ಎದೆ, ಕೈಗಳು ಇಲ್ಲದೆ ಸೊಂಟದಿಂದ ಕೆಳ ಭಾಗ ಮಾತ್ರ ಪತ್ತೆಯಾಗಿತ್ತು.
ಈ ಇಬ್ಬರನ್ನೂ ಯಾರೋ ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಶವಗಳನ್ನು ಕತ್ತರಿಸಿ ಎರಡೂ ದೇಹದ ಅರ್ಧಭಾಗವನ್ನು ನೀರಿನಲ್ಲಿ ಬೀಸಾಡಿ ಹೋಗಿದ್ದರು. ದ್ದಾರೆ. ಪ್ರಕರಣ ಸಂಬಂಧ ಮಹಿಳೆಯರ ವಿಳಾಸ, ಗುರುತು ಹಾಗೂ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು. ಅಂತೆಯೇ ಇಲಾಖೆಗೆ ನೀಡುವ ಮಾಹಿತಿಗಳ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎನ್​.ಯತೀಶ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಹದ ಮೇಲ್ಭಾಗ ಇನ್ನೂ ಪತ್ತೆಯಾಘಿಲ್ಲ. ಮಂಡ್ಯ ಮತ್ತು ಮೈಸೂರು ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಪೊಲೀಸರು ಸುತ್ತಾಡಿದರೂ, 15 ದಿನ ಕಳೆದರೂ ಮೃತ ಮಹಿಳೆಯರ ಗುರುತು ಪತ್ತೆಯಾಗಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕೊಲೆಯಾದ ಮಹಿಳೆಯರ ಗುರುತಿನ ಬಗ್ಗೆ ಸುಳಿವು ನೀಡಿದ್ರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಸೊಂಟದಿಂದ ಕೆಳಭಾಗ ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಅರ್ಧ ದೇಹಗಳು ಪತ್ತೆ! ಬೆಚ್ಚಿಬಿದ್ದ ಮಂಡ್ಯ ಜನ

ಪ್ರಿನ್ಸಿಪಾಲ್​ರ ಕಪಾಳಕ್ಕೆ ಬಾರಿಸಿದ ಮಂಡ್ಯ ಶಾಸಕ! ಕಾಲೇಜಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲೇ ಕೃತ್ಯ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − fourteen =
Remember me
