ಉಡುಪಿ:ಮನುಷ್ಯನ ಮುಖವನ್ನೇ ಹೋಲುವ ಬೆನ್ನುಳ್ಳ ಕೀಟ(ಮ್ಯಾನ್​ ಫೇಸ್ಡ್​ ಬಗ್​) ಕಾರ್ಕಳದ ಬೈಪಾಸ್​ ಬಳಿಯ ತಾಳೆತೋಟದಲ್ಲಿ ಪತ್ತೆಯಾಗಿದೆ.
ತಲೆಗೊಂದು ಮಕ್ಮಲ್​ ಟೋಪಿ, ಎರಡು ಕಣ್ಣು, ದೊಡ್ಡ ಮೂಗಿನ ಕೆಳಗೆ ಚಾರ್ಲಿ ಚಾಪ್ಲಿನ್​ ಮೀಸೆ. ಹೀಗೆ ದೂರದಿಂದ ನೋಡಿದರೆ ಮಾನವ ಮುಖದ ಕಲಾಕೃತಿಯಂತೆ ಕಾಣುತ್ತದೆ. ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿಯಲ್ಲಿ ಮ್ಯಾನ್​ ಫೇಸ್ಡ್​ ಕೀಟಗಳಿವೆ. ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟ ಬೆಳಗ್ಗೆ 7ರಿಂದ 8 ಗಂಟೆಯ ಅವಧಿಯಲ್ಲಿ ಸೂರ್ಯನ ಎಳೆ ಬಿಸಿಲ ಶಾಖ ಹೀರುತ್ತ ಗಿಡಗಳಲ್ಲಿ ಹೆಚ್ಚಾಗಿ ವಿಹರಿಸುತ್ತವೆ.
ಫೆಬ್ರವರಿಯಿಂದ ಮೇ ಅವಧಿಯಲ್ಲಿ ಕಂಡುಬರುವ ಈ ಕೀಟ ಚಿಗುರು, ಕಾಂಡ, ಹಣ್ಣಿನಿಂದ ರಸ ಹೀರುತ್ತವೆ. ತಾಳೆ ಗರಿಗಳಲ್ಲಿ ಸ್ವಚ್ಛಂದ ವಿಹರಿಸುವ ಮ್ಯಾನ್​ ಫೇಸ್ಡ್​ ಬಗ್​ ನಿರುಪದ್ರವಿ ಜೀವಿ. ಗಾತ್ರದಲ್ಲಿ ಗಂಡು ಚಿಕ್ಕದಾದರೆ, ಹೆಣ್ಣು ಸ್ವಲ್ಪ ದೊಡ್ಡದು. ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ. 25ರಿಂದ 30ದಿನವಷ್ಟೇ ಆಯುಷ್ಯ. ತಂಪು ಹವಾಮಾನವಿದ್ದರೆ ಜೀವನ ದೀರ್ಘವಾಗಿರುತ್ತದೆ. ಕೊಳವೆಯಾಕಾರದಲ್ಲಿರುವ ಬಾಯಿ ಚುಚ್ಚಿ ರಸ ಹೀರುವ ಈ ಕೀಟವನ್ನು ವೈಜ್ಞಾನಿಕವಾಗಿ ಕೆಟಕ್ಯಾಂಥಸ್​ ಇನ್​ಕಾರ್ನೇಟಸ್​ ಎಂದು ಕರೆಯಲಾಗುತ್ತಿದೆ. ಪೆಂಟಟೊಮಿಡೆ ಜಾತಿಗೆ ಸೇರಿದ್ದು, ಮಕ್ಕಳಿಗೆ ಹಾಗೂ ಕೀಟಶಾಸ್ತ್ರಜ್ಞರಿಗೆ ಆಸಕ್ತಿಕರ ವಿಷಯ.
ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಪೀಣ್ಯದ ಇಎಸ್​ಐನಲ್ಲಿದೆ ಉದ್ಯೋಗ ಅವಕಾಶ: ಮೇ 10ಕ್ಕೆ ನೇರ ಸಂದರ್ಶನ

ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − seven =
Remember me
