ಬಳ್ಳಾರಿ:ಯುದ್ಧಪೀಡಿತ ಯೂಕ್ರೇನ್​ನ ಕೀವ್​ ನಗರದಲ್ಲಿ ಬಳ್ಳಾರಿಯ ಐವರು ಯುವತಿಯರು ಹಾಗೂ ಮೂವರು ಯುವಕರಿಗೆ ಸರಿಯಾಗಿ ಊಟ ಮತ್ತು ನೀರು ಸಿಗದೆ ಪರದಾಡುತ್ತಿದ್ದಾರೆ.
ಬಳ್ಳಾರಿಯ ತಯಾಬ್​ ಕೌಸರ್​, ಸಭಾ ಕೌಸರ್​, ತನೀಷಾ ಮತ್ತು ಹೊಸಪೇಟೆಯ ನಂದಿನಿ, ಹರಪನಹಳ್ಳಿಯ ವಿಕಾಸ್​ ಪಾಟೀಲ್​, ಗಗನ್​ದೀಪ್​, ಸಂಜಯ್​, ಲಾವಣ್ಯಾ ಅತಂತ್ರರಾಗಿದ್ದಾರೆ. ಇದರಲ್ಲಿ ಲಾವಣ್ಯಾ ಸಂಪರ್ಕಕ್ಕೆ ಸಿಕ್ಕಿದ್ದು ‘ರೊಮೇನಿಯಾದಿಂದ ಫ್ಲೈಟ್​ ಬುಕ್​ ಆಗಿದೆ. ಬುಧವಾರ ಭಾರತಕ್ಕೆ ಬರುತ್ತೇನೆ’ ಎಂದು ತಿಳಿಸಿದ್ದಾರೆ. ನಂತರ ಸಂಪರ್ಕ ಕಡಿತವಾಗಿದೆ. ನಾಲ್ಕು ದಿನಗಳಿಂದ ಬಂಕರ್​ನಲ್ಲಿದ್ದ ಈ ವಿದ್ಯಾಥಿರ್ಗಳು ಸರಿಯಾದ ಊಟ, ನೀರು ಇಲ್ಲದೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಬಂಕರ್​ ತೊರೆಯುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಹೆಚ್ಚಿನ ದಾಳಿ ಸಾಧ್ಯತೆ ಕುರಿತಾಗಿ ಹೇಳಿದ್ದಾರೆ ಎಂದು ಕೆಲ ಯುವತಿಯರು ಆಡಿಯೋ ರೆಕಾರ್ಡ್​ ಮಾಡಿ ಪಾಲಕರಿಗೆ ಕಳುಹಿಸಿದ್ದಾರೆ.
ಇದರಿಂದ ಪಾಲಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೊಸಪೇಟೆಯ ನಂದಿನಿ ಎಂಬುವರು ಹಂಗೇರಿಯಾ ಗಡಿ ಕಡೆ ಹೊರಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ‘ನಾನು ಟೆನ್​ ಹತ್ತಿದ್ದೇನೆ. ಗಡಿಗಳನ್ನು ದಾಟಿದ ಮೆಸೇಜ್​ ಮಾಡುವೆ’ ಎಂದು ತಿಳಿಸಿದ್ದಾರೆ.
ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ಯೂಕ್ರೇನ್​ನಲ್ಲಿ ಮನೆ ಮಾಲೀಕನ 3 ಪುಟ್ಟ ಮಕ್ಕಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭಾರತದ ಕುವರಿ!

ಯೂಕ್ರೇನ್​ಗೆ ಸೇರಿದ್ದ ವಿಶ್ವದ ಅತಿದೊಡ್ಡ ವಿಮಾನವನ್ನೂ ನಾಶ ಮಾಡಿದ ರಷ್ಯಾ ಸೇನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 3 =
Remember me
