ಬೆಂಗಳೂರು:ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅರುಣಾಕುಮಾರಿ ಪರ ಬ್ಯಾಟಿಂಗ್​ ಮಾಡುತ್ತಾ ಈ ಕೇಸ್​ಗೆ ಎಂಟ್ರಿಕೊಟ್ಟ ಇಂದ್ರಜಿತ್​ ಲಂಕೇಶ್​, ಮತ್ತಷ್ಟು ಕಿಡಿ ಹೊತ್ತಿಸಿದ್ದರು. ಇದೀಗ ನಿರ್ಮಾಪಕ ಉಮಾಪತಿ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.
ನಮ್ಮಿಬ್ಬರ ಮಧ್ಯೆ ಆಸ್ತಿ‌‌ ವಿಚಾರ ಬಂದಿದ್ದು ನಿಜ. ಆ ಆಸ್ತಿ ಪುನೀತ್ ರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರದ್ದು. ನಮ್ಮ ದೊಡ್ಮನೆಯವರ ಆಸ್ತಿ ಅದು. ಹಾಗಾಗಿ ಅದನ್ನು ನಾನು ಕೊಡೋದಿಲ್ಲ ಅಂದಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ರು. ಆಸ್ತಿ ಕೊಟ್ಡಿಲ್ಲ ಅಂತ ದರ್ಶನ್ ಸರ್ ಕೋಪ ಮಾಡಿಕೊಂಡಿಲ್ಲ ಅಂತ ಅನ್ನಿಸ್ತಿದೆ ಎಂದು ಉಮಾಪತಿ ಸುದ್ದಿಗಾರರಿಗೆ ತಿಳಿಸಿದರು.
ಆ ಆಸ್ತಿಯನ್ನು ನಾನ್ ಕೊಡೋದಿಲ್ಲ ಅಂದಿದ್ದು ನಿಜ. ಆದಕ್ಕೆ ಅವರು ಬೇಜಾರಾಗಿಲ್ಲ ಅಂತ ಅಂದುಕೊಂಡಿದ್ದೇನೆ. ದರ್ಶನ್ ಸರ್ ಮತ್ತು ನಮ್ಮ ಮಧ್ಯೆ ಬೇರೆ ಏನೇನೋ ನಡೆದಿರುತ್ತವೆ. ದೊಡ್ಮನೆಯವರ ಆಸ್ತಿಯನ್ನ ಕೊಟ್ಟರೆ ಸರಿ ಹೋಗುತ್ತಾ? ನೀವೆ ಯೋಚನೆ ಮಾಡಿ. ಆಸ್ತಿಯನ್ನ ದರ್ಶನ್ ಅವರಿಗೆ ಕೊಟ್ಟರೆ ಬೇರೆಯದ್ದೇ ಆಯಾಮ ಪಡೆಯುತ್ತೆ ಅಂತ ನಾನು ಕೊಡಲಿಲ್ಲ ಎಂದು ಉಮಾಪತಿ ಹೇಳಿದರು.

ಇದೊಂದು ನೀತಿ ಪಾಠ. ದುಡ್ಡು ಕೊಟ್ವಾ, ಕೆಲಸ ಮಾಡಿಸಿಕೊಂಡ್ವಾ ಸುಮ್ಮನಾಗ್ಬೇಕು. ಸ್ನೇಹ ಅಂತ ಮಾಡಿದ್ರೆ ಊಟ ಮಾಡಿ ಮನೆಗೆ ಬರಬೇಕು. ನನಗೆ ಇಂದ್ರಜಿತ್ ಅವರ ಹತ್ತಿರ ಹೋಗಿ ಸಹಾಯ ಕೇಳುವ ಅವಶ್ಯಕತೆ ಇಲ್ಲ. 18ನೇ ತಾರೀಖು ದರ್ಶನ್ ಅವರ ಮನೆಯಲ್ಲಿ ನಡೆದ ಸಭೆಗೆ ನನ್ನನ್ನ ಕರೆದಿದ್ರೆ ಇಷ್ಟು ಸಮಸ್ಯೆ ಆಗ್ತಿರಲಿಲ್ಲ. ನನ್ನ ಮೇಲೆ ಆರೋಪ ಮಾಡಿರುವ ವ್ಯಕ್ತಿಗಳು ಸಾಚಾಗಳಾ? ಮದಗಜ ಶೂಟಿಂಗ್ ಸಮಯದಲ್ಲಿ ಪಾರ್ಟಿ ಇತ್ತು. ನನ್ನ ಕಾರನ್ನು ಒಳ ಬಿಡಲು‌ ಹಿಂದು‌ ಮುಂದು ನೋಡಿದರು. ಆದರೆ, ಅರುಣಾ ಕುಮಾರಿಯನ್ನು ಹೇಗೆ ಪಬ್ ಒಳಗೆ ಬಿಟ್ಟರು? ನಾನು ದೇವರನ್ನು, ನ್ಯಾಯಾಂಗ ವ್ಯವಸ್ಥೆಯನ್ನು ನಂಬಿರುವವ. ನಾನು ದರ್ಶನ್ ಸರ್ ಅನ್ನು ಬಿಟ್ಟುಕೊಡುವುದಿಲ್ಲ ಎಂದರು.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಚಿಕ್ಕಮ್ಮನ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದ ಬಾಲಕನ ಪ್ರಾಣವನ್ನೇ ಹೊತ್ತೊಯ್ದ ಜವರಾಯ!

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
