ಬೆಳಗಾವಿ:ಸಚಿವ ಉಮೇಶ್​ ಕತ್ತಿ ಅವರ ನಿಧನದ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಇರಲಿದ್ದು, ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮ‌ಗಳು ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉಮೇಶ್​ ಕತ್ತಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಲ್ಲದ ಬಾಗೇವಾಡಿಗೆ ತೆರಳುವ ಮುನ್ನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಆತ್ಮಿಯ ಸ್ನೇಹಿತ, ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ, ರಾಜ್ಯ ಕಂಡ ದೀಮಂತ ನಾಯಕ ಉಮೇಶ ಕತ್ತಿ. ನಾನು ಭಾರ ಹೃದಯದಿಂದ ಬೆಳಗಾವಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಹೆಚ್ಚು ಮಾತನಾಡಲ್ಲ. ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಇದೆ. ಜನರು ದೊಡ್ಡ ಪ್ರಮಾಣದಲ್ಲಿ ಬಂದಿದ್ದಾರೆ. ಜನ ಸಹಕರಿಸಬೇಕು. ರಾಜ್ಯ ಸರ್ಕಾರದಿಂದ ಗೌರವ ಸಲ್ಲಿಸಲಾಗುತ್ತೆ. ಮೂರು ದಿನ ಶೋಕಾಚರಣೆ ಮಾಡಲು ನಿರ್ಧರಿಸಲಾಗಿದೆ. 3 ದಿನ ಯಾವುದೇ ಸರ್ಕಾರಿ ಕಾರ್ಯಕ್ರಮ‌ ನಡೆಯಲ್ಲ ಎಂದರು.
ತುರ್ತಾಗಿ ಪ್ರವಾಹ ನಿರ್ವಹಣೆ ಬಿಟ್ಟರೆ ಸರ್ಕಾರಿ‌ ಕಾರ್ಯಕ್ರಮ‌ ನಡೆಯಲ್ಲ. ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸೆ.11ಕ್ಕೆ ಮುಂದೂಡಲಾಗಿದೆ ಎಂದು ಸಿಎಂ ಹೇಳಿದರು.
ಇಂದು ಬೆಳಗ್ಗೆ ಒಂದು ದಿನ ಶೋಕಾಚರಣೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅಲ್ಲದೆ ದೊಡ್ಡಬಳ್ಳಾಪುರದಲ್ಲಿ ಗುರುವಾರ ನಿಗದಿಯಾಗಿರುವ ಜನೋತ್ಸವ ಅಬಾಧಿತ. ಅಕಾಲಿಕವಾಗಿ ಅಗಲಿದ ಹಿರಿಯ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಮಾವೇಶದಲ್ಲಿ ಸಂತಾಪ ಸೂಚಿಸಿ ಪೂರ್ವ ಯೋಜಿತ ಕಾರ್ಯಕ್ರಮಗಳನ್ನು ಮುಂದುವರಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ಸಚಿವರಾದ ಗೋವಿಂದ ಕಾರಜೋಳ ಮತ್ತು ಆರಗ ಜ್ಞಾನೇಂದ್ರ ಅವರು ಸುದ್ದಿಗಾರರಿಗೆ ತಿಳಿಸಿದದ್ದರು. ಇದೀಗ ಸಿಎಂ ಅವರೇ ಜನೋತ್ಸವ ಕಾರ್ಯಕ್ರಮ ಮುಂದೂಡಿರುವುದಾಗಿ ತಿಳಿಸಿದ್ದಾರೆ.
3 ದಿನದ ಬದಲು 1 ದಿನದ ಶೋಕಾಚರಣೆಗೆ ಸಿದ್ದರಾಮಯ್ಯ ಬೇಸರ: ನಾಳೆ ನಡೆಯುತ್ತಾ ಜನೋತ್ಸವ?

‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
