ಉತ್ತರಕನ್ನಡ:ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆ ಹಳಿಯಾಳ ಮೂಲದ ಜ್ಯೋತಿ ಸುರೇಶ ಅಂತ್ರೋಳಕರ(19) ಮತ್ತು ರಿಕೇಶ್​ ಸುರೇಶ ಮಿರಾಶಿ(20) ಮೃತ ದುರ್ದೈವಿಗಳು. ಇವರಿಬ್ಬರೂ ಹಳಿಯಾಳದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು.
ತಿಂಗಳ ಹಿಂದೆ ಯುವತಿಯ ಪಾಲಕರು ಈಕೆಗೆ ಬೇರೊಬ್ಬ ಯುವಕನ ಜತೆ ಮದುವೆ ಮಾಡಿದ್ದರು. ಪ್ರಿಯಕರನನ್ನು ಬಿಟ್ಟು ಬದುಕಲಾಗದೆ ಜ್ಯೋತಿ, ಜುಲೈ 15ರಂದು ಮುಂಡಗೋಡು ರಸ್ತೆಯಲ್ಲಿ ಪ್ರಿಯಕರ ರಿಕೇಶ್​ ಜತೆ ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡ ಪ್ರೇಮಿಗಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನ ಸಾವು-ಬದುಕಿನ ನಡುವೆ ಹೋರಾಡಿದ ಪ್ರೇಮಿಗಳು ದುರಂತ ಅಂತ್ಯಕಂಡಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ ಹಾಕಿದ್ದು ಹುಚ್ಚ ವೆಂಕಟ್​ ಅಲ್ಲ, SSLC ವಿದ್ಯಾರ್ಥಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಉಣಕಲ್​ ಕೆರೆಗೆ ಹಾರಿ ತಮ್ಮ ಆತ್ಮಹತ್ಯೆ: ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ… ಸಹೋದರರಿಬ್ಬರ ದುರಂತ ಸಾವು

ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
