ಮೇಲುಕೋಟೆ:ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಗುರುವಾರ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ಭಾಗವಹಿಸಿ ರಥಕ್ಕೆ ಹಣ್ಣು-ದವನ ಎಸೆದು ದರ್ಶನ ಪಡೆದರು. ಶುಕ್ರವಾರ ಸಂಜೆ 7 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೆರವೇರಲಿದೆ.
ತಿರುಪತಿ ತಿರುಮಲ ದೇವಸ್ಥಾನದ ಪೆರಿಯ ಜೀಯರ್​ ಕೊಡುಗೆಯಾಗಿ ನೀಡಿದ ಬೃಹತ್​ ರಥಕ್ಕೆ ಜಯ-ವಿಜಯ ಸಾರಥಿಯೊಂದಿಗೆ ತಳಿರು ತೋರಣ ಕಟ್ಟಿ ಪುಷ್ಪಾಲಂಕಾರ ಮಾಡಲಾಗಿತ್ತು. ರಥ ಚತುರ್ವೀದಿಗಳಲ್ಲಿ ಸಡಗರದೊಂದಿಗೆ ನೆರವೇರಿತು. ರಥೋತ್ಸವದ ನಂತರ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಅಭಿಷೇಕ ನೆರವೇರಿತು. ವಿದ್ವಾನ್​ ಆನಂದ್​ ಮತ್ತು ವಿದ್ವಾನ್​ಕುಮಾರ್​ ತಂಡದಿಂದ ಕನ್ನಡ ಮತ್ತು ಸಂಸತಿ ಇಲಾಖೆಯ ನಾದೋಪಾಸನ ಸೇವೆಯಲ್ಲಿ ಸ್ವಾಮಿಗೆ ಮಧುರವಾದ ನಾದಸ್ವರ ವಾದನದ ಕಲಾ ಸೇವೆ ನೆರವೇರಿತು.

ರಥೋತ್ಸವದಲ್ಲಿ ಮಾಜಿ ಸಚಿವ ಎನ್​.ಚಲುವರಾಯಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್​ ಇತರರು ಪಾಲ್ಗೊಂಡಿದ್ದರು. ಮೇಲುಕೋಟೆ ಠಾಣೆ ಇನ್ಸ್​ಪೆಕ್ಟರ್​ ಸುಮಾರಾಣಿ ಭದ್ರತೆ ಒದಗಿಸಿದ್ದರು.
ಹೊಳೆಗೆ ಬಿದ್ದ ಕೆಎಸ್ಸಾರ್ಟಿಸಿ ಬಸ್: ಧರ್ಮಸ್ಥಳದಿಂದ ಹೊರಟಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ತುಮಕೂರಿನ ಲಾಡ್ಜ್​ನಲ್ಲಿ ಹೆಂಡ್ತಿ ಕಾಲನ್ನೇ ಕತ್ತರಿಸಿದ ಗಂಡ! ಬಳಿಕ ನಡೆಯಿತು ಮತ್ತೊಂದು ನಾಟಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
