ಬೆಂಗಳೂರು:ದೇಶದ ಹೆಮ್ಮೆಯ ಆಯುರ್ವೇದ ಉತ್ಪನ್ನಗಳ ಸಂಸ್ಥೆಯಾದ ವ್ಯಾಲ್ಯೂ ಪ್ರಾಡಕ್ಟ್​ ಸಂಸ್ಥೆ,ಅಯೋಧ್ಯೆಯಲ್ಲಿ ಅಮೃತ್​ನೋನಿ ಗಿಡ ನೆಡುವ ಮೂಲಕ ಹೊಸ ಸಾಂಸತಿಕ ಪರಿವರ್ತನೆಗೆ ಮುನ್ನುಡಿ ಬರೆದಿದೆ.
“ಆಯುಷ್​ ವನ್​‘ಮತ್ತು“ಎಕ್​ ಪೇಡ್​ ಮಾ ಕೆ ನಾಮ್​‘ಕಾರ್ಯಕ್ರಮದಡಿ ಅಯೋಧ್ಯೆಯ ಮುಖ್ಯ ಅರಣ್ಯಾಧಿಕಾರಿ ಪ್ರಣವ್​ ಜೈನ್​ ಮಾರ್ಗದರ್ಶನದಲ್ಲಿ ಜು.22ರಂದು ಅಯೋಧ್ಯೆಯ ಟಿಎಲ್​ಎಂ ಸಂಸ್ಥೆಯ ಸೌಧದದಲ್ಲಿ ನೋನಿ ಮೊರಿಂಡಾ ಸಿಟ್ರಿೋಲಿಯಾ ಗಿಡವನ್ನು ನೆಡಲಾಯಿತು.ಇದೇ ವೇಳೆ ಅನಂತ್​ಕುಮಾರ್​ ಮತ್ತು ಡಾ.ತೇಜಸ್ವಿನಿ ಅನಂತ್​ ಕುಮಾರ್​ ಸ್ಥಾಪಿಸಿರುವ“ಅದಮ್ಯ ಚೇತನ‘ಮುನ್ನಡೆಸುತ್ತಿರುವ“ಅಯೋಧ್ಯೆಯಲ್ಲಿ ಸಸ್ಯಾಗ್ರಹ‘ಎಂಬ ಪರಿಸರ ಸಂರಕ್ಷಣೆಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಅಮೃತ್​ ನೋನಿ,ಸೀತಾ ಅಶೋಕ ಮತ್ತು ಸಿಂಸಾಹ ಗಿಡಗಳನ್ನು ನೆಡುವ ಮೂಲಕ“ಅಯೋಧ್ಯೆಯಲ್ಲಿ ಸಸ್ಯಾಗ್ರಹ‘ಯೋಜನೆಗೂ ಸಂಸ್ಥೆ ಕೈಜೋಡಿಸಿದೆ.
ತೇಜಸ್ವಿನಿ ಅನಂತಕುಮಾರ್​ ಮಾತನಾಡಿ,ನೋನಿ ಗಿಡವು ರಾಮಾಯಣ ಮತ್ತು ವೇದಕಾಲದಿಂದ ಇದ್ದರೂ ಅದನ್ನು ನಮಗೆಲ್ಲರಿಗೂ ಪರಿಚಯ ಮಾಡಿಕೊಟ್ಟು,ಅದರ ಪ್ರಯೋಜನವನ್ನು ಜಗತ್ತಿಗೆ ಸಾರಿದವರು ಅಮೃತ್​ ನೋನಿ ಸಂಸ್ಥೆಯ ಶ್ರೀನಿವಾಸ ಮೂರ್ತಿ,ಅಂಬುಜಾ ದಂಪತಿ ಮತ್ತು ಕುಟುಂಬದವರು ಎಂದು ಪ್ರಶಂಸಿದರು.
ಮನೆಯಲ್ಲೇ ಕುಳಿತು ವಿಶ್ವಾಸ್​ ಪೇ ಆ್ಯಪ್​ನಲ್ಲಿ ದಿನಸಿ ಪದಾರ್ಥ ಬುಕಿಂಗ್​ ಮಾಡಿ
ನೋನಿ ಗಿಡವನ್ನು ಅಮೃತ್​ ನೋನಿಯಾಗಿ ಮಾಡುವ ಮೂಲಕ ದೇಶದ ಪ್ರತಿ ಮನೆಗೂ ತಲುಪಿಸಿದ್ದಾರೆ.ಹನುಮನ ನಾಡಿನವರಾಗಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನೋನಿ ಗಿಡ ನೆಡುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.ವಿಶ್ವ ಹಿಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗೋಪಾಲ್​,ಮಾಜಿ ಸಂಸದ ಲಲ್ಲುಸಿಂಗ್​,ಉತ್ತರ ಪ್ರದೇಶದ ಸರ್ಕಾರದ ಕೃಷಿ,ಅಂಕಿ&ಅಂಶಗಳ ಇಲಾಖೆ ನಿರ್ದೇಶಕ ಡಾ.ಸುಮಿತ್​ ಸಿಂಗ್​,ಒರಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕೊರಾಪುಟ್ನ ಕುಲಪತಿ ಪಿ.ವಿ.ಕೃಷ್ಣಭಟ್​ ಮತ್ತಿತರರಿದ್ದರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
