ಬೆಂಗಳೂರು:ಆರೋಗ್ಯವೇ ಭಾಗ್ಯಎನ್ನುವ ನಾಣ್ನುಡಿಯಿದೆ. ಆರೋಗ್ಯವೊಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಮಾಂಸಾಹಾರ, ಸಸ್ಯಹಾರ ಯಾವುದು ಸೇವನೆ ಮಾಡಬೇಕಾ ಎನ್ನುವ ಗೊಂದಲ ಹಲವರಿಗೆ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ನಿತ್ಯವೂ ಮಾಂಸಾಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಸಸ್ಯಾಹಾರಿಯಾದರೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ಹೀಗಾಗಿ ಜನಸಾಮಾನ್ಯರಲ್ಲಿ ಈ ಕುರಿತಾಗಿ ಗೊಂದಲವಿದೆ.
ಬಾಡು ತಿನ್ನದ ಡಾಕ್ಟರ್, ಬಾಡು ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ.pic.twitter.com/NUTk7W3Ejy— ರವಿ-Ravi ಆಲದಮರ (@AaladaMara)August 21, 2024
ಬಾಡು ತಿನ್ನದ ಡಾಕ್ಟರ್, ಬಾಡು ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ.pic.twitter.com/NUTk7W3Ejy
ವಿಡಿಯೋದಲ್ಲಿ ವೈದ್ಯ ಹೇಳಿದ್ದೇನು?:ರೋಗಿಯೊಬ್ಬರು ವೈದ್ಯರ ಬಳಿ ಬಂದಾಗ,ಡಾಕ್ಟರ್​ ಮಾಂಸಹಾರ ಸೇವನೆ ತುಂಬಾ ಒಳ್ಳೆಯದ್ದಾಗಿದೆ. ಅನಾಧಿಕಾಲದಿಂದಲೂ ಮಾಂಸಹಾರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಈಗ ತಿಂದರೆ ಏನಾಗುತ್ತದೆ? ವಿದೇಶಿಗರು ಪ್ರತಿನಿತ್ಯ ಮಾಂಸಹಾರ ಸೇವನೆ ಮಾಡುತ್ತಾರೆ ಅವರೆಲ್ಲ ಆರೋಗ್ಯವಾಗಿ ಇಲ್ವಾ? ಮಾಂಸಹಾರವನ್ನು ಹೇಗೆ ಬೇಯಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಎಣ್ಣೆ, ತುಪ್ಪಾ, ಮೂರು ಸಲ ತಿಂದೆ ಅಂತಾ ಹೇಳಿ ಆಹಾರ ಸೇವೆನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆದರೆ ನಾವು ಹಿತ..ಮಿತವಾಗಿ ಚೆನ್ನಾಗಿ ಬೇಯಿಸಿದ ಮಾಂಸಹಾರ ಸೇವೆನ ಮಾಡಬೇಕು. ಕೆಂಪುಮಾಂಸದಲ್ಲಿ ರೆಡಿಮೆಡ್​​ ಕೊಲೆಸ್ಟ್ರಾಲ್​​ ಇದೆ. ಬಿಳಿ ಮಾಂಸ ಕೋಳಿಮಾಂಸ, ಮೀನು ಎಲ್ಲಾ ಒಳ್ಳೆಯದು. ಮೊಟ್ಟೆಯ ಹಳದಿ ಭಾಗ ಜೀವ ಅದನ್ನು ಚೆನ್ನಾಗಿ ತಿನ್ನಬೇಕು.
ನಾನು ಸಸ್ಯಹಾರಿ ಆದ್ರೂ ಎಲ್ಲವನ್ನೂ ತಿಳಿದುಕೊಂಡು ನಿಮಗೆ ಹೇಳುತ್ತಿದ್ದೇನೆಎಂದು ವೈದ್ಯ ಕೊನೆಯಲ್ಲಿ ಹೇಳುತ್ತಾರೆ. ಇದನ್ನು ಕೇಳಿದ ರೋಗಿ ಇದೆ ನನಗೆ ಆಶ್ಚರ್ಯ ತಂದಿದೆ ವೈದ್ಯರೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿರುವ ವೈದ್ಯರು ತುಮಕೂರಿನ ಹೃದ್ರೋಗ ತಜ್ಞ ಡಾಕ್ಟರ್​​ ಭಾನುಪ್ರಕಾಶ್​​  (Dr.Bhanuprakash ) ಎಂದು ಹೇಳಲಾಗಿದೆ. ಆದರೆ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಸಸ್ಯಹಾರ ಆದ್ರೂ ವೈದ್ಯರು ಮಾಂಸಾಹಾ ಕುರಿತಾಗಿ ಎಷ್ಟೊಂದು ತಿಳಿದುಕೊಂಡು ರೋಗಿಗಳಿಗೆ ತಿಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 − 14 =
Remember me
