ಬೆಳಗಾವಿ:ವಿಧಾನ ಪರಿಷತ್​ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. 7501 ಮತಗಳನ್ನು ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವಿನ ನಗೆ ಬೀರಿದ ಬಸವರಾಜ ಹೊರಟ್ಟಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 8ನೇ ಬಾರಿಗೆ ಗೆಲ್ಲುವ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿಯೇ ದಾಖಲೆ‌ ನಿರ್ಮಿಸಿದ್ದೇನೆ ಎಂದರು.
ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಹೊರಟ್ಟಿ, 1980ರಿಂದ 2022 ರವರೆಗೆ ನಿರಂತರವಾಗಿ ಗೆಲುವು ಸಾಧಿಸಿದ್ದೇನೆ. ರಾಜಕೀಯದಲ್ಲಿ ಇತಿಹಾಸದಲ್ಲಿ‌ ಸತತವಾಗಿ 8 ಬಾರಿ ಗೆದ್ದಿಲ್ಲ. ಈ ಗೆಲುವು ಶಿಕ್ಷಕರದ್ದು ಎಂದರು.
ಈ ಬಾರಿ ಚುನಾವಣೆಯಲ್ಲಿ 8 ರಿಂದ 10 ಸಾವಿರ‌ ಮತಗಳ ಬರುವ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಇದೀಗ 7 ಸಾವಿರ ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದೇನೆ. ಇನ್ನೂ 2 ಸಾವಿರ‌ ಮತಗಳು ಬರುವ ನಿರೀಕ್ಷೆಯಿದೆ ಎಂದರು.
ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಶೇ.50 ಮತ ಪಡೆದುಕೊಂಡವರು ಗೆಲುವು ಸಾಧಿಸಲಿದ್ದಾರೆ. ಈಗಾಗಲೇ ನಾನು 15 ಸಾವಿರ ಮತಗಳ ಪೈಕಿ 7500 ಮತಗಳನ್ನು ಪಡೆದು ಗೆದ್ದಿದ್ದೇನೆ ಎಂದರು.
ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ, ಮತಪೆಟ್ಟಿಗೆ ಬದಲಾವಣೆ?

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen − 7 =
Remember me
