ಮೈಸೂರು:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಇನ್ನಿಲ್ಲಿದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಮೈಸೂರಿನಲ್ಲಿ 2 ದಿನ ಕಾರ್ಯಾಗಾರ ನಡೆಸುತ್ತಿದ್ದಾರೆ. ​ಕಾರ್ಯಾಗಾರಕ್ಕೆ ತೆರಳುವ ಮುನ್ನ ಜೆಡಿಎಸ್​ ಶಾಸಕರು ಮತ್ತು ಮುಂಬರುವ ಚುನಾವಣಾ ಅಬ್ಯರ್ಥಿಗಳೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಎಚ್​ಡಿಕೆ, ಮಹತ್ವದ ಘೋಷಣೆ ಮಾಡಿದರು.
ಈ ಬಾರಿ ಜೆಡಿಎಸ್​ಗೆ 30ರಿಂದ 40 ಸ್ಥಾನ ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ. ನಮ್ಮಲ್ಲೇ ಯಾರದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ಮಾರ್ಗದರ್ಶನ ಮಾಡುತ್ತೇನೆ. 30ರಿಂ 40 ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಎಚ್​ಡಿಕೆ ಘೋಷಿಸಿದರು.
ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ. ಪಂಚರತ್ನದ 5 ಯೋಜನೆಗಳನ್ನ 5 ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇನೆ. ಕಾರ್ಯಕ್ರಮ ಅನುಷ್ಟಾನ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ಈ ಮಾತು ಹೇಳುತ್ತಿದ್ದೇನೆ. ಪಂಚರತ್ನ ಯೋಜನೆ ಅನುಷ್ಠಾನ ಆಗಬೇಕಾದ್ರೆ ಸಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ‌. ಈ ಕಾರಣಕ್ಕೆ ಸಮಿಶ್ರ ಸರ್ಕಾರ ಸಂದರ್ಭ ಬಂದ್ರೆ ನಾನು ಸಿಎಂ ಆಗಲ್ಲ ಎಂದರು.
ನ.1ರಂದು ಪಂಚರತ್ನ ರಥಯಾತ್ರೆಗೆ ಮುಳಬಾಗಿಲಿನಲ್ಲಿ ಚಾಲನೆ: ಸ್ಥಳ ಬದಲಾವಣೆಗೆ ಎಚ್​ಡಿಕೆ ಕೊಟ್ಟ ಕಾರಣ ಇಲ್ಲಿದೆ

ಹಾರ್ಲೆ ಡೆವಿಡ್ಸನ್​ ಬೈಕ್​ ಓಡಿಸಿ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿಕೊಂಡ ಮಲೆನಾಡ ಬೆಡಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
