ವಿಜಯಪುರ:1 ಲಕ್ಷ ರೂಪಾಯಿ ಕಳ್ಳತನದ ಆರೋಪ ಹೊರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಯುವಕನ ಸಾವಿಗೆ ಕಾರಣವಾಗಿದ್ದ ಪಿಎಸ್ಐ ಸೋಮೇಶ ಗೆಜ್ಜಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಜು.12ರ ಸಂಜೆ ಕೊಲ್ಹಾರ ಸೇತುವೆ ಬಳಿ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಯುವಕ ಸೋಮಶೇಖರ ನಾಗಮೋತಿ ಶವವಾಗಿ ಪತ್ತೆಯಾಗಿದ್ದ. ಈತನ ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟು, ಸೆಲ್ಫಿ ವಿಡಿಯೋವನ್ನೂ ಮಾಡಿದ್ದ. ‘ನಾನೊಬ್ಬ ಅಮಾಯಕ. ಅನ್ಯಾಯದ ದುಡ್ಡು ಮುಟ್ಟಿಲ್ಲ. ಮಾಡದ ತಪ್ಪಿಗೆ ನನಗೇಕೆ ಶಿಕ್ಷೆ?’ ಎಂದು ನೋವಿನಲ್ಲೇ ಪ್ರಶ್ನಿಸುತ್ತಾ ‘ನನ್ನ ಸಾವಿಗೆ ಪಿಎಸ್​ಐ ಸೋಮೇಶ ಗೆಜ್ಜಿ, ಇವರ ಸಹೋದರ ಸಚಿನ್ ಹಾಗೂ ನಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕ ಸಂತೋಷ ದೇಗಿನಾಳ ಮತ್ತವರ ಸಹೋದರ ರವಿ ಕಾರಣ’ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತದೇಹ ಸಿಕ್ಕ ಸ್ಥಳದಲ್ಲೇ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟ ಮೊಬೈಲ್ ಹಾಗೂ ಕೆಲವು ದಾಖಲೆಗಳು ಸಿಕ್ಕಿವೆ.
ಏನಿದು ಪ್ರಕರಣ?:ಮೃತ ಸೋಮನಾಥ ಅಶೋಕ ನಾಗಮೋತಿ ವಿಜಯಪುರದ ಸಂತೋಷ ದೇಗಿನಾಳ ಮಾಲಿಕತ್ವದ ಶಿವಗಿರಿ ಟೈಯರ್ಸ್‌ ಆಂಡ್ ವ್ಹೀಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಜು.9ರಂದು ಎಪಿಎಂಸಿ ಪಿಎಸ್‌ಐ ಸೋಮೇಶ ಗೆಜ್ಜಿ ಸಹೋದರ ಚೇತನ್‌ನ ಪೋರ್ಡ್ ಎಂಡೋವರ್ ಕಾರ್ ಚಾಲಕ ಸುನೀಲಕುಮಾರ ಶಾಂತಪ್ಪ ಇಂಡಿ ವ್ಹೀಲ್ ಅಲೈನ್‌ಮಿಂಟ್‌ಗಾಗಿ ಶಿವಗಿರಿ ಸರ್ವಿಸ್ ಸೆಂಟರ್‌ಗೆ ಕಾರನ್ನು ತೆಗೆದುಕೊಂಡು ಬಂದಿದ್ದ. ಆದರೆ, ವ್ಹೀಲ್ ಅಲೈನ್‌ಮೆಂಟ್ ಆಗದ ಕಾರಣಕ್ಕೆ ಸಂತೋಷ, ಕಾರನ್ನು ತನ್ನ ಅಂಗಡಿ ಎದುರಿರುವ ಬೇರೊಂದು ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿ ಕೆಲಸ ಮಾಡಿಸಿಕೊಂಡು ಬರಲು ಸೋಮನಾಥನಿಗೆ ಸೂಚಿಸಿದ್ದನು. ಅದರಂತೆ ಸೋಮನಾಥ ಕಾರ್ ಸರ್ವಿಸ್ ಮಾಡಿಸಿಕೊಂಡು ಬಂದಿದ್ದ. ಆದರೆ, ಕಾರಿನ ಡ್ಯಾಶ್ ಬೋರ್ಡ್‌ನಲ್ಲಿರಿಸಿದ್ದ 1 ಲಕ್ಷ ರೂಪಾಯಿ ಕಾಣೆಯಾಗಿದೆ ಎಂದು ಸಂತೋಷ ತಗಾದೆ ತೆಗೆದಿದ್ದ. ಈ ಬಗ್ಗೆ ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಮಾಡಿದ್ದೇನು?:ಆದರ್ಶ ನಗರ ಠಾಣೆಯಲ್ಲಾದ ಪ್ರಕರಣವನ್ನು ಎಪಿಎಂಸಿ ಪಿಎಸ್‌ಐ ಸೋಮೇಶ ಗೆಜ್ಜಿ ವಿಚಾರಣೆ ನಡೆಸಿದ್ದರೆಂಬುದು ಮೃತ ಸೋಮನಾಥನ ಆರೋಪ. ಅಲ್ಲದೇ ವಿಚಾರಣೆ ಹೆಸರಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಣ ಕೊಡದೇ ಹೋದರೆ ನಿನ್ನ ಭವಿಷ್ಯವನ್ನೇ ಹಾಳು ಮಾಡುತ್ತೇವೆಂದು ಹೆದರಿಸಿದ್ದಾರೆ, ಬಿಳಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡು ಕಳುಹಿಸಿದ್ದಾರೆ. ಬಳಿಕ ಸೋಮನಾಥ ಹಣ ಹೊಂದಿಸಲು ಯತ್ನಿಸಿದನಾದರೂ ಎಲ್ಲೂ ಹಣ ಹೊಂದಾಣಿಕೆಯಾಗಿಲ್ಲ. ಮಾತ್ರವಲ್ಲದೇ ಮಾಡದ ತಪ್ಪಿಗಾಗಿ ನಾನೇಕೆ ಹಣ ಕೊಡಬೇಕು? ಹಾಗೆ ಕೊಟ್ಟರೆ ತನ್ನ ಮೇಲಿನ ಆರೋಪ ನಿಜವಾಗುತ್ತದೆ ಎಂದು ಯೋಚಿಸಿ ಅದೇ ನೋವಿನಲ್ಲಿ ತನಗಾದ ಅನ್ಯಾಯವನ್ನು ಪತ್ರದಲ್ಲಿ ಬರೆದು, ವಿಡಿಯೋ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.
ಸಾವಿಗೂ ಮುನ್ನ ಸೋಮನಾಥ ಹೇಳಿದ್ದೇನು?:ಸ್ನೇಹಿತರೇ, ಬಂಧುಗಳೇ ನಮಸ್ಕಾರ. ನಾನು ಶಿವಗಿರಿ ಟೈಯರ್ಸ್‌ ಆಂಡ್ ವ್ಹೀಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಪಿಎಸ್‌ಐ ಗಾಡಿ ಸರ್ವಿಸ್‌ಗೆ ತಂದಿದ್ದರು. ಅದನ್ನು ನಾನು ಸರ್ವಿಸ್ ಮಾಡಿಸಿಕೊಂಡು ತಂದಿರಿಸಿದ್ದೆ. ಅದರಲ್ಲಿ 7.50 ಲಕ್ಷ ರೂ. ಇದ್ದು ಆ ಪೈಕಿ 1 ಲಕ್ಷ ರೂ. ಕಳುವಾಗಿದೆ ಎಂದು ಆರೋಪಿಸಿದ್ದಾರೆ. ನಾನೊಬ್ಬ ಅಮಾಯಕ ಸ್ನೇಹಿತರೆ. ಅಂಥ ದುಡ್ಡು ನಾನೆಂದೂ ಮುಟ್ಟಿಲ್ಲ. ಬೇಕಾದರೆ ಓವರ್ ಟೈಮ್ ಕೆಲಸ ಮಾಡಿ ದುಡ್ಡು ತೆಗೆದುಕೊಳ್ಳುತ್ತೇನೆ ವಿನಃ ಇಂಥ ದುಡ್ಡು ಮುಟ್ಟಲ್ಲ. ಪಿಎಸ್‌ಐ ನನಗೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡೆದಿದ್ದಾರೆ. ನಾನು ಕಳ್ಳತನ ಮಾಡಿಲ್ಲ. ಬೇಕಾದರೆ ಸಿಸಿ ಟಿವಿ ಚೆಕ್ ಮಾಡಿ ಎಂದರೂ ಮಾಡಿಲ್ಲ. ಬಿಳಿ ಪೇಪರ್‌ನಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ಏನೆಂದು ಬರೆದುಕೊಂಡಿದ್ದಾರೋ ಗೊತ್ತಿಲ್ಲ. ದುಡ್ಡು ತೆಗೊಂಡು ಬಾ ಎಂದು ಕಳುಹಿಸಿದ್ದಾರೆ. ನಾನು ದುಡ್ಡು ತೆಗೆದುಕೊಂಡೇ ಇಲ್ಲ ಎಂದ ಮೇಲೆ ಹೇಗೆ ಅರೆಂಜ್ ಮಾಡಲಿ ಸ್ನೇಹಿತರೆ. ನನ್ನ ಅಂಗಡಿಯಲ್ಲೇ ನನ್ನನ್ನು ಸಿಕ್ಕಿ ಹಾಕಿಸಲು ಯಾರೋ ಹೀಗೆ ಮಾಡಿರಬಹುದು. ನನ್ನಪ್ಪ ತೀರಿ ನಾಲ್ಕೈದು ವರ್ಷ ಆಯಿತು. ಅಲ್ಲಿಂದ ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಯಾರೂ ಈ ರೀತಿ ಆರೋಪ ಮಾಡಿರಲಿಲ್ಲ. ನಾನು ಇರುವ ಸಂಬಳದಲ್ಲಿಯೇ ಖುಷಿಯಾಗಿದ್ದೆ. ಆ ಖುಷಿ ಕೊನೆಯವರೆಗೂ ಉಳಿಸಿಕೊಳ್ಳಲಾಗುತ್ತಿಲ್ಲ. ನನ್ನ ನಂಬಿ ನನ್ನ ಹೆಂಡತಿ ಕೂಡ ಬಂದಿದ್ದಾಳೆ. ನಾನು ಯಾವ ರೀತಿ ಹೇಳಿದರೂ ಅವರು ನಂಬುತ್ತಿಲ್ಲ’.
‘ಮಾಡದಿರುವ ಕಳ್ಳತನ ಹೇಗೆ ಒಪ್ಪಿಕೊಳ್ಳಲಿ ನಾನು. ನಿನ್ನ ಸಂಸಾರ ಹಾಳು ಮಾಡುತ್ತೇನೆ. ನಿನ್ನ ಭವಿಷ್ಯವನ್ನೇ ಹಾಳು ಮಾಡುತ್ತೇನೆ. ಬಸನಗೌಡ ಪಾಟೀಲ ಯತ್ನಾಳರಿಗೂ ಮನವಿ. ನನಗೆ ನ್ಯಾಯ ಕೊಡಿಸಿ. ಪ್ರತಿ ದಿನ ಬರುವಂತೆ ಅಂಗಡಿಗೆ ಬಂದಿದ್ದೆ. ನನಗೆ ಯಾವುದೇ ದಾರಿ ಸಿಗದೆ ಸಾವಿಗೆ ಶರಣಾಗುತ್ತೇನೆ. ನನ್ನ ಕುಟುಂಬಕ್ಕೆ ಏನಾದರೂ ಆದರೆ ಅದಕ್ಕೆ ಅಂಗಡಿ ಮಾಲೀಕ ಹಾಗೂ ಅಧಿಕಾರಿಗಳೇ ಹೊಣೆ. ಆ ಭಯದಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಬಳಿ ಶಕ್ತಿಯೂ ಇಲ್ಲ. ತಂದೆಯೂ ತೀರಿದ್ದಾರೆ. ನನಗೆ ಸಪೋರ್ಟ್ ಮಾಡಲು ಯಾರೂ ಇಲ್ಲ. ಎಲ್ಲಿಂದ ತರೋಣ ಸ್ನೇಹಿತರೆ ಲಕ್ಷ ಲಕ್ಷ. ನಾನು ದುಡಿಯೋದೆ ಕಷ್ಟ. ದಾರಿ ತೋಚದೆ ಸಾವಿಗೆ ಶರಣಾಗುತ್ತಿದ್ದೇನೆ’ ಎಂದು ಸೋಮನಾಥ ಸಾವಿಗೂ ಮುನ್ನ ನೋವು ತೋಡಿಕೊಂಡಿದ್ದಾರೆ.
ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

ನನ್ನ ಸೂರಿ ಸಿಕ್ಕುದ್ನಾ ಸಾರ್​… 6 ವರ್ಷದ ಹಿಂದೆ ಪ್ರೀತಿಸಿ ಮದ್ವೆ ಆಗಿದ್ದವರ ಬಾಳಲ್ಲಿ ದುರಂತ, ಮನಕಲಕುತ್ತೆ ಪತ್ನಿಯ ಗೋಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + three =
Remember me
