ವಿಜಯಪುರ:ಹೆರಿಗೆಗೆ ಬಂದ ಮಹಿಳೆಯರಿಗೆ ಸಿಜೇರಿಯನ್​ ಮಾಡಿದ ಬಳಿಕ ಹೊಲಿಗೆ ಹಾಕುವಾಗ ಭಾರೀ ಎಡವಟ್ಟು ಮಾಡಲಾಗಿದೆ. ಸಿಜೇರಿಯನ್​ ಮಾಡಿದ 2 ದಿನಕ್ಕೇ ಹೊಲಿಗೆ ಕಿತ್ತು ಬಂದಿದ್ದು, ಕೀವು ಆಗಿ ಬಾಣಂತಿಯರು ನರಳಾಡುತ್ತಿದ್ದಾರೆ.
ಇಂತಹ ಪ್ರಮಾದ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ಬಾಣಂತಿಯರ ಗೋಳಾಟ ನೋಡಿದ್ರೆ ಕರುಳು ಹಿಂಡುತ್ತೆ. ಹೆರಿಗೆಗಾಗಿ ದಾಖಲಾದ 30ಕ್ಕೂ ಮಹಿಳೆಯರಿಗೆ ಸಿಜೇರಿಯನ್​ ಆಗಿತ್ತು. ಇದೀಗ ಆ ಮಹಿಳೆಯರಿಗೆ ಸ್ಟಿಚ್​ ಹಾಕಿದ್ದ ಜಾದಲ್ಲಿ ಕೀವು ತುಂಬಿದೆ. ಹೊಲೊಗೆ ಹಾಕಿದ 2 ದಿನಕ್ಕೇ ಹೊಲಿಗೆ ಕಿತ್ತು ಬಂದಿದೆ ಎಂದು ಬಾಣಂತಿಯರು ಗೋಳಾಡುತ್ತಿದ್ದಾರೆ. ಒಂದೇ ದಿನ 120 ಮಂದಿಗೆ ಹೆರಿಗೆ ಆಗಿದೆಯಂತೆ. ಆ ಪೈಕಿ 20ಕ್ಕೂ ಹೆಚ್ಚು ಮಂದಿಗೆ ಇನ್ಫೆಕ್ಷನ್​ ಆಗಿದೆ. ತರಬೇತಿಗೆ ಬಂದ ವೈದ್ಯರಿಂದ ಸ್ಟಿಚ್​ ಹಾಕಿಸಿದ್ದರ ಪರಿಣಾಮ ಬಾಣಂತಿಯರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ನೊಂದ ಬಾಣಂತಿ ಕಣ್ಣೀರಿಟ್ಟರು.
ಹೇಗಾದ್ರೂ ಮಾಡಿ ನಮಗೆ ಈ ಸಮಸ್ಯೆಯಿಂದ ಪಾರು ಮಾಡಿ ಸರ್​… ನಡೆಯೋಕು ಆಗ್ತಿಲ್ಲ, ಕೂರೋಕೂ ಆಗ್ತಿಲ್ಲ, ಹೆಂಗೆ ಬದುಕೋದು? ಹೆರಿಗೆ ಬಳಿಕ ಹಾಕಿದ್ದ ಸ್ಟಿಚ್ ಬಿಚ್ಚಿ ಮೂರು ದಿನವಾದ್ರೂ ಮತ್ತೊಮ್ಮೆ ಸ್ಟಿಚ್ ಹಾಕಿಲ್ಲ. ಮೂರು ದಿನದಿಂದ ಹೊಟ್ಟೆಗೆ ಕೈ ಹಿಡಿದುಕೊಂಡು ಕೂತಿದ್ದೇವೆ. ಒಂಭತ್ತು ದಿನದಿಂದ ಆಸ್ಪತ್ರೆಯಲ್ಲೇ ಇದ್ದೀವಿ, ನಮ್ಮ ಗೋಳು ಯಾರೂ ಕೇಳ್ತಿಲ್ಲ ಎಂದುವಿಜಯವಾಣಿಬಳಿ ಬಾಣಂತಿ ಅಶ್ವಿನಿ ಕಣ್ಣೀರಿಟ್ಟರು.
ಶುಕ್ರವಾರದಿಂದಲೇ ಇಂಥ ಪ್ರಕರಣ ಬೆಳಕಿಗೆ ಬಂದಿದ್ದು ಬಾಣಂತಿಯರು ಕಣ್ಣೀರಿಡುತ್ತಿದ್ದಾರೆ. ಈವರೆಗೂ ಯಾರೊಬ್ಬರೂ ಬಂದು ಆರೋಗ್ಯ ವಿಚಾರಿಸುತ್ತಿಲ್ಲ ಎಂದು ಬಾಣಂತಿಯರುವಿಜಯವಾಣಿಬಳಿ ಅಳಲು ತೋಡಿಕೊಂಡರು.
ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಟೆಕ್ನಿಕಲ್ ಎವಿಡೆನ್ಸ್ ಸಿಗಲೇ ಇಲ್ಲ… ಕರಪತ್ರ ಹಂಚಿ ಆ್ಯಸಿಡ್​ ನಾಗೇಶ್​ನನ್ನು ಬಂಧಿಸಿದ್ದೇ ರೋಚಕ!

Sign in to your account
Please enter an answer in digits:15 − 3 =
Remember me
