ವಿಜಯಪುರ:ಶಾಲಾ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೆ ಸರ್ಕಾರಿ ಬಸ್​ಗಳ ಟಾಪ್​ ಮೇಲೆ ಹತ್ತಿ ಪ್ರಯಾಣಿಸುತ್ತಿದ್ದಾರೆ. ಸೂಕ್ತ ಬಸ್ ಸೌಲಭ್ಯವಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಬಸ್​ಗೆ ಏಣಿ ಬಳಿ ಬಸ್​ನ ಮೇಲ್ಭಾಗದಲ್ಲಿ ಕೂತು ಸಂಚರಿಸುವ ದುಸ್ಥಿತಿ ಬಂದಿದೆ.
ಇದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ವಿದ್ಯಾರ್ಥಿಗಳ ಗೋಳಾಟ. ಅಗತ್ಯ ಬಸ್​ಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಿರುತ್ತೆ. ಆದರೆ ಅಗತ್ಯ ಸಾರಿಗೆ ಬಸ್​ ಸಂಚಾರ ಇಲ್ಲದಿರುವ ಪರಿಣಾಮ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಸಂಕಷ್ಟ ಹೇಳತೀರದು. ಜಾಗ ಇಲ್ಲದಿದ್ದರೂ ನೂರಾರು ಸಂಖ್ಯೆಯಲ್ಲಿ ಒಂದೇ ಬಸ್​ನಲ್ಲಿ ಸಂಚರಿಸುತ್ತಿದ್ದಾರೆ. ಬಸ್​ನ ಒಳಗೆ ನಿಲ್ಲೋಕೂ ಜಾಗ ಇಲ್ಲದ ಕಾರಣ ಏಣಿ ಹಾಕಿ ಬಸ್​ನ ಮೇಲೆ ಹತ್ತಿ ಜೀವ ಭಯದಲ್ಲೇ ಪ್ರಯಾಣಿಸಿದ್ದಾರೆ.
‘ವಿಧಾನಸಭೆ ಚುನಾವಣೆ ವೇಳೆ 12 ಸಚಿವರ CD ಹೊರಬರುತ್ತೆ… 30 ಕೋಟಿ ರೂಪಾಯಿಗೆ ಒಂದು ಮಂಚ ಕೊಟ್ಟಿದ್ರು’

ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆ ಏರಿದ IPS ಅಧಿಕಾರಿ​! ಮಂಗ್ಳೂರು ಕಮೀಷನರ್​ರ ಸಾಹಸಕ್ಕೆ ಮನಸೋತ ಜನ

Sign in to your account
Please enter an answer in digits:10 − 8 =
Remember me
