ವಿಜಯಪುರ:ಪ್ರತ್ಯಕ್ಷವಾಗಿ ಕಾಣುವ ದೇವರು ಎಂದಾಕ್ಷಣ ತಾಯಿ ಕಣ್ಮುಂದೆ ಬರುತ್ತಾಳೆ. ಅಂತಹ ತಾಯಿಗಾಗಿ ಮಕ್ಕಳು ದೇಗುಲವನ್ನೇ ಕಟ್ಟಿಸಿದ್ದಾರೆ. ಹೆತ್ತಮ್ಮನ ವಿಗ್ರಹಕ್ಕೆ ಮಗನಿಂದ ನಿತ್ಯ ಪೂಜೆ ನಡೆಯುತ್ತಿದೆ.
ಇಂತಹ ಅಪರೂಪದ ದೃಶ್ಯ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದ ತೋಟವೊಂದರಲ್ಲಿ ಕಾಣಸಿಗುತ್ತೆ. ಜಾಲಗೇರಿ ಗ್ರಾಮದ ದುಂಡಪ್ಪ ಕಾಂಬಳೆ ಎಂಬುವರ ಪತ್ನಿ ಗಜರಾಬಾಯಿ ಕಾಂಬಳೆ(68) ಅವರು ಕಳೆದ ವರ್ಷ ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮೃತಪಟ್ಟರು. ಇವರಿಗೆ ದಂಪತಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಪುತ್ರ ಯಮನಪ್ಪ, ಪುತ್ರಿಯರಾದ ರೇಣುಕಾ ಹಾಗೂ ಶಾಂತಾಬಾಯಿ ಸೇರಿ ಮೂವರು ಮಕ್ಕಳಿದ್ದಾರೆ.

ಅಮ್ಮನ ಸಾವು ಮಕ್ಕಳಿಗೆ ಅತೀವ ನೋವು ನೀಡಿತು. ತಮ್ಮ ಮೇಲೆ ತಾಯಿ ತೋರುತ್ತಿದ್ದ ಪ್ರೀತಿಯನ್ನ ನೆನೆದು ಮಕ್ಕಳು ಅಮ್ಮನ ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಅಮ್ಮನನ್ನು ನಿತ್ಯ ನೋಡಬೇಕು ಎಂದು ತೀರ್ಮಾನಿಸಿ ಗುಡಿಯನ್ನೇ ಕಟ್ಟಿದ್ದಾರೆ.

ಮೂವರು ಮಕ್ಕಳೂ ಸೇರಿ ತಾಯಿಯ ಪ್ರತಿಮೆ ಕೆತ್ತಿಸಿ ಪ್ರತಿಷ್ಠಾಪಿಸಿದ್ದಾರೆ. ಪುತ್ರ ಯಮನಪ್ಪ ನಿತ್ಯ ಎರಡು ಬಾರಿ ತಾಯಿಗೆ ಪೂಜೆ ಮಾಡ್ತಾರೆ. ಪಂಡರಾಪುರದಲ್ಲಿ ಮಾರ್ಬಲ್ ಕಲ್ಲಿನಲ್ಲಿ ಮೂರ್ತಿ ಕೆತ್ತಿಸಿದ್ದು, ಬಣ್ಣದಲ್ಲಿ ತಾಯಿ ಗಜರಾಬಾಯಿ ಪ್ರತಿರೂಪದಂತಿದೆ. ಹೆತ್ತವ್ವಳಿಗೆ ಮಕ್ಕಳು ಮಂದಿರ ಕಟ್ಟಿಸಿ ಪೂಜೆ ಮಾಡುತ್ತಿರುವ ದೃಶ್ಯ ನೋಡಿದ್ರೆ ಭಾವುಕರಾಗ್ತೀರಿ.
ಬಡವರು ಮೇಕೆಯಂತೆ ಶ್ರೀಮಂತರು ಹಂದಿಯಂತೆ!

ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ! ಸಾವಿನ ಮನೆಯ ಕದ ತಟ್ಟುವ ಕೊನೇ ಗಳಿಗೆಯೂ ಕರ್ತವ್ಯ ನಿರ್ವಹಿಸಿದ್ದರು

ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
