ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತವಿಜಯರತ್ನ-2022 ಪ್ರಶಸ್ತಿಪ್ರದಾನ ಮಾಡಲಾಯಿತು. ಈ ಪೈಕಿ ಶಿಕ್ಷಣಪ್ರೇಮಿ, ಗಂಗಾವತಿ ತಾಲೂಕಿನನೆಕ್ಕಂಟಿ ಸೂರಿಬಾಬುಅವರಿಗೂ “ವಿಜಯರತ್ನ-2022” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್​, ಚಿತ್ರನಟ ರಮೇಶ್​ ಅರವಿಂದ, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಧಾನ ಪರಿಷತ್​ ಸದಸ್ಯ ಬಿ.ಜಿ. ಪಾಟೀಲ ಇತರರು ಉಪಸ್ಥಿತರಿದ್ದರು.
ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು:ಭತ್ತದ ಕಣಜ ಗಂಗಾವತಿ ತಾಲೂಕು ಶಿಕ್ಷಣ ಕಾಶಿಯಾಗಿ ರಾಜ್ಯ ಮತ್ತು ಅಂತಾರಾಜ್ಯಮಟ್ಟದಲ್ಲಿ ಹೆಸರುವಾಸಿ. ಇಂತಹ ತಾಲೂಕಲ್ಲಿ ನೆಕ್ಕಂಟಿ ಸೂರಿಬಾಬು ಮಕ್ಕಳಿಗೆ ಗುಣಮಟ್ಟದಶಿಕ್ಷಣ ಕಲ್ಪಿಸುವ ಜತೆಗೆ ಉದ್ಯೋಗಿ ಅಥವಾ ಉದ್ಯಮಿಯಾಗಿ ಹೊರಹೊಮ್ಮಿಸಲು ಶ್ರಮಿಸುತ್ತಿದ್ದಾರೆ.
ಶ್ರೀರಾಮನಗರದದಲ್ಲಿ 2006ರಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಸಾಯಿ ಪವನ್​ ಎಜುಕೇಶನಲ್​ ಟ್ರಸ್ಟ್​ (ರಿ)ನ ಶ್ರೀ ವಿದ್ಯಾನಿಕೇತನ ಪಬ್ಲಿಕ್​ ಸ್ಕೂಲ್​, ಗಂಗಾವತಿ, ಹಗರಿಬೊಮ್ಮನಳ್ಳಿ ಮತ್ತು ಶ್ರೀರಾಮನಗರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. 240 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯಲ್ಲಿಂದು ಯುವ ಉದ್ಯಮಿ ನೆಕ್ಕಂಟಿ ಸೂರಿಬಾಬು ಅವರ ಅವಿರತ ಶ್ರಮದ ಫಲದಿಂದ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 750 ಸಿಬ್ಬಂದಿ ಇದ್ದಾರೆ.
ನಡೆದು ಬಂದ ದಾರಿ:ಬೇಸಾಯ ಮನೆತನದ ವಡ್ಡರಹಟ್ಟಿಯಲ್ಲಿ ನೆಲೆಸಿದ್ದ ಸೂರ್ಯಕಾಂತಮ್ಮ ಮತ್ತು ನೆಕ್ಕಂಟಿ ವೆಂಕಟರಾವ್​ ಅವರ 5ನೇ ಪುತ್ರ ನೆಕ್ಕಂಟಿ ಸೂರಿಬಾಬು. ಚಿಕ್ಕಪ್ಪ ನೆಕ್ಕಂಟಿ ರಾಮರಾವ್​ ಮಾರ್ಗದರ್ಶನಲ್ಲಿ ವ್ಯವಸಾಯದಲ್ಲಿ ತೊಡಗಿಕೊಂಡ ಸೂರಿಬಾಬು, ನಂತರ ಭತ್ತದ ವ್ಯಾಪಾರಿಯಾದರು. ಸಮಾನಮನಸ್ಕರೊಂದಿಗೆ ಕೂಡಿ ಶಿಕ್ಷಣ ಸಂಸ್ಥೆ ಆರಂಭಿಸಿದರು. “ನರ್ಸರಿಯಿಂದ ನೌಕರಿವರೆಗೆ” ಎಂಬ ಪರಿಕಲ್ಪನೆಯಡಿ ಸಂಸ್ಥೆ ನಡೆಯುತ್ತಿದ್ದು, ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕಡಿಮೆ ವೆಚ್ಚದಲ್ಲಿ ವಿದ್ಯೆ ಮತ್ತು ಉದ್ಯೋಗ ಕೊರತೆ ನೀಗಿಸುವಲ್ಲಿ ಸಂಸ್ಥೆ ಕಂಕಣ ಬದ್ಧವಾಗಿದೆ.
ಗ್ರಾಮೀಣ ಸಿಬಿಎಸ್​ಇ ವಸತಿ ಶಾಲೆ:ಒಂದು ಗ್ರಾಮೀಣ ಸಿಬಿಎಸ್​ಇ ವಸತಿ ಶಾಲೆ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕಲ್ಪನೆಯಲ್ಲಿ ಮುನ್ನುಗ್ಗುತ್ತಿದೆ. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೌಶಲ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸಮರ್ಥ ಆಡಳಿತ, ಅನುಭವಿ ಪ್ರಾಧ್ಯಾಪಕರನ್ನು ಹೊಂದಿದೆ. ಆಹಾರ ಉದ್ಯಮದ ಬಗ್ಗೆ ಮಾಹಿತಿ ನೀಡುವ ಚಿಂತನೆ ನಡೆಸಿದ್ದು, ಉಪಉತ್ಪನ್ನಗಳ ತಯಾರಿಕೆ, ಖರೀದಿ, ಮಾರಾಟ, ರಿಯಲ್​ ಎಸ್ಟೇಟ್​ ಉದ್ಯಮದ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಗಿದೆ. ಗಂಗಾವತಿಯ ವಡ್ಡರಹಟ್ಟಿಯಲ್ಲಿ ಹೊಸ ಕಾಲೇಜು ಕ್ಯಾಂಪಸ್​ ನಿರ್ಮಿಸುತ್ತಿದ್ದು, ಶೀಘ್ರ ಉದ್ಘಾಟನೆಯಾಗಲಿದೆ.
ಇಲ್ಲಿಗೆ ಬಂದಿದ್ದರು ಸಾಲುಮರದ ತಿಮ್ಮಕ್ಕ:2015ರಲ್ಲಿ “ಮಗುವಿಗೊಂದು ಸಸಿ, ಮನೆಗೊಂದು ಮರ, ಊರಿಗೊಂದು ವನ” ಪರಿಕಲ್ಪನೆಯಡಿ ಒಂದು ಲಕ್ಷ ಸಸಿಗಳನ್ನು ವಿತರಿಸಲಾಗಿತ್ತು. ಅಭಿಯಾನಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಬಂದಿದ್ದರು.
20ಕ್ಕೂ ಹೆಚ್ಚು ಬಸ್​:ಶಾಲೆಯು ಸ್ವಂತ 20 ಬಸ್​ ಹೊಂದಿದ್ದು, ವೇಗ, ಮಾರ್ಗ ಮತ್ತು ಸ್ಥಳವನ್ನು ಮೇಲ್ವಿಚಾರಣೆಗೆ ವಾಹನ ಟ್ರ್ಯಾಕಿಂಗ್​ ಸಿಸ್ಟಮ್​ ಮತ್ತು ಬೋರ್ಡ್​ ಕ್ಯಾಮರಾ ಅಳವಡಿಸಲಾಗಿದೆ. ಗಂಗಾವತಿ, ಕಾರಟಗಿ, ಕಂಪ್ಲಿ, ವಡ್ಡರಹಟ್ಟಿ, ಜೀರಾಳ್​ ಕಲ್ಗುಡಿ, ಬರಗೂರು, ಬೆನ್ನೂರು, ಶ್ರೀರಾಮನಗರ, ಹೊಸಕೇರಾ, ಗುಂಡೂರು ಕ್ಯಾಂಪ್, ಚೆಳ್ಳೂರು ಕ್ಯಾಂಪ್​, ತೊಂಡಿಹಾಳ್​ ಕ್ಯಾಂಪ್​, ಮರಕುಂಬಿ, ಮುಷ್ಟೂರು, ಯರಡೋಣಿ- ಬೂದಗುಂಪಾ, ಬೇವಿನಾಳವರೆಗೂ ಬಸ್​ ವ್ಯವಸ್ಥೆಯಿದೆ.
ಪಿಯು ಕಾಲೇಜು:ಪಿಯು ವಿಜ್ಞಾನ ಕಾಲೇಜನ್ನು ರಾಜ್ಯ ಮಂಡಳಿಯೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಪಿಸಿಎಂಬಿ ಮತ್ತು ಪಿಸಿಎಂಸಿ ಪ್ರತ್ಯೇಕ ಪಠ್ಯಕ್ರಮವಿದೆ. ಜೆಇಇ/ಐಐಟಿ ಮತ್ತು ನೀಟ್​ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಅನುಭವಿ ಪ್ರಾಧ್ಯಾಪಕರಿದ್ದಾರೆ.
ಸುಸಜ್ಜಿತ ವಸತಿ ನಿಲಯ:ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯದ ವ್ಯವಸ್ಥೆಯಿದೆ. ಸ್ವಚ್ಛ, ಸುಸಜ್ಜಿತ ಕೊಠಡಿಗಳು, ಉತ್ತಮ ಊಟದ ಕೋಣೆ, ಆರೋಗ್ಯಕರ-ವೈವಿಧ್ಯಮಯ ಪೌಷ್ಟಿಕ ಆಹಾರ, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಅಧ್ಯಯನ ಸಮಯ, ಯೋಗ, ನೃತ್ಯ, ಕರಾಟೆ, ಕ್ರೀಡೆ, ಸಂಗೀತ ಮತ್ತಿತರ ಚಟುವಟಿಕೆಗಳ ತರಬೇತಿಯನ್ನು ಪ್ರತಿ ಭಾನುವಾರ ಆಯೋಜಿಸಲಾಗುತ್ತಿದೆ.
ಪಾದ ಪೂಜೆ:ಭಾರತದ ಸಂಸ್ಕೃತಿ, ಪರಂಪರೆ, ಹಬ್ಬಗಳ ವಿಶೇಷತೆಗಳನ್ನು ಸಂದರ್ಭಾನುಸಾರ ಬಿಂಬಿಸುತ್ತ ಬರಲಾಗಿದೆ. ದೈವ ಸಮಾನರಾದ ಪಾಲಕರು, ಗುರುಗಳನ್ನು ಪೂಜ್ಯ ಮನೋಭಾವದಿಂದ ಕಾಣುವ ಸಂಸ್ಕೃತಿಯನ್ನು ಬಿಂಬಿಸಲು “ಪಾದ ಪೂಜೆ” ಕಾರ್ಯಕ್ರಮ ನಡೆಸಲಾಗುತ್ತದೆ.
ಸಿಡಿಎಫ್​​/ಜೆಇಇ ಮೇನ್ಸ್​:ಸ್ಪರ್ಧಾತ್ಮಕ ಪರೀಕ್ಷೆಗಳ ಭಯ ಹೋಗಲಾಡಿಸಲು ಪ್ರತಿವಾರ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ಮೂಲ ಗಣಿತವನ್ನು ಕಲ್ಪನಾ ಶೈಲಿಯಲ್ಲಿ ಸಂಯೋಜಿಸಲ್ಪಟ್ಟಿರುವ ಪ್ರೊಜಿಡಿ ಎಂಬ ಗಣಿತದ ಆ್ಯಪ್​ನ ನಿಯಮಿತ ಬಳಕೆಗೆ ಅವಕಾಶ ಮತ್ತು ತರಬೇತಿ ನೀಡಲಾಗುತ್ತಿದೆ. ದೆನಂದಿನ ಪರೀಕ್ಷೆ, ಮೌಲ್ಯಮಾಪನ ಇಲ್ಲಿ ನಡೆಯುತ್ತದೆ. ಕರೊನಾ ವೇಳೆ ಸಾಮಾಜಿಕ ಸೇವೆ ಮಾಡುವ ಜತೆಗೆ ಜಾಗೃತಿ ಅಭಿಯಾನದ ಮೂಲಕ ಗಮನಸೆಳೆಯಲಾಗಿದೆ. ಲಾಕ್​ಡೌನ್​ ಸಂದರ್ಭ ಕೆಲಸಕ್ಕೆ ಶಿಕ, ಶಿಕೇತರ ಸಿಬ್ಬಂದಿಗೆ ವೇತನ ನೀಡಿ, ಆತ್ಮಸ್ಥೆರ್ಯ ತುಂಬಲಾಗಿದೆ. ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಎಚ್​.ಕೆ.ಚಂದ್ರಮೋಹನ್​ ಅವರನ್ನು ಆಡಳಿತಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
ಅರಿವು ಶಿಕ್ಷಣ ಆ್ಯಪ್​:ಎಸ್ಸೆಸ್ಸೆಲ್ಸಿ ಓದುವ ಜಿಲ್ಲೆಯ ಎಲ್ಲ ಮಕ್ಕಳಿಗಾಗಿ ಉಚಿತ “ಅರಿವು” ಮಾತೃ ಶಿಕ್ಷಣ-ಅಭಿಯಾನದ ಶೈಣಿಕ ಆ್ಯಪ್​ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವವರಿಗಾಗಿ ಇದನ್ನು ರೂಪಿಸಲಾಗಿದೆ. ಕಲಿಕಾ ಸಂಪನ್ಮೂಲಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗಿದೆ. ‘Engage, Enqure and Empower our Child’ ಎಂಬ ಮೂಲ ತತ್ವವನ್ನು ಹೊಂದಿದೆ.
ಅತ್ಯುನ್ನತ ಶೈಕ್ಷಣಿಕ ಸಂಪನ್ಮೂಲ:ಮಗುವಿನ ಕಾರ್ಯಮತೆ, ಶಿಸ್ತು, ಹಾಜರಾತಿ, ಶಾಲಾ ಕೆಲಸಗಳ ಪೂರ್ಣಗೊಳಿಸುವಿಕೆ, ಆರೋಗ್ಯ ಮತ್ತು ಹಾಸ್ಟೆಲ್​ ಅವಶ್ಯಕತೆಗಳ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪೋಷಕರೊಂದಿಗೆ ಸಂವಹನ ನಡೆಸಲು ಪ್ರತಿ ಶಿಕ್ಷಕರಿಗೆ 20 ವಿದ್ಯಾರ್ಥಿಗಳ ಜವಾಬ್ದಾರಿ ನೀಡಲಾಗಿದೆ. ಸಿಬಿಎಸ್​ಇ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 8ನೇ ರ್ಯಾಂಕ್​ ಪಡೆದಿದ್ದು, ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್​ ಬಂದಿದೆ. 2021-22 ನೇ ಸಾಲಿನಲ್ಲಿ ಈ ಶಾಲೆಯ 52 ವಿದ್ಯಾರ್ಥಿಗಳು ಮೆಡಿಕಲ್​ ಸೀಟ್​ ಪಡೆದಿರುವುದು ಹೆಗ್ಗಳಿಕೆಯ ಸಂಗತಿ. ಇಂಗ್ಲಿಷ್​, ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್​ ಶಿಕ್ಷಣ ಉತ್ತೇಜಿಸುವ ಉದ್ದೇಶದಿಂದ ಎನ್​ಟಿಎಸ್​ಇ ಮತ್ತು ಒಲಿಂಪಿಯಾಡ್​ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ನಮ್ಮ ಸಂಸ್ಥೆಯಲ್ಲಿ ಸೇರಿದ ಮಗು ಉದ್ಯೋಗಿ ಅಥವಾ ಉದ್ಯಮಿಯಾಗಿ ಹೊರಹೊಮ್ಮಲು ಜವಾಬ್ದಾರಿಯುತ ಶಿಕ್ಷಣ ನೀಡಲಾಗುತ್ತಿದ್ದು, ಪಾಲಕರು ಮತ್ತು ಉಪನ್ಯಾಸಕರ ಸಹಕಾರ ಮುಖ್ಯ. ಪ್ರಶಸ್ತಿ ಸ್ವೀಕಾರದಿಂದ ಜವಾಬ್ದಾರಿ ಹೆಚ್ಚಾಗಿದೆ.|ಸೂರಿಬಾಬು ನೆಕ್ಕಂಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + five =
Remember me
