ಬೆಂಗಳೂರು:ವಿಜಯಪುರದ ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಸಾಧನೆ ಮಾಡಿರುವ “ಶಿಕ್ಷಣ ಪ್ರೇಮಿ” ಎಂದೇ ಜನಮಾನಸದಲ್ಲಿ ನೆಲೆಸಿರುವ ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್​ವಾಹಿನಿಯ ಪ್ರತಿಷ್ಠಿತವಿಜಯರತ್ನ-2022ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ ಪರಿಸರದ ಕಾಳಜಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಶಿವಾನಂದ ಕೆಲೂರ ಕೂಡ ಒಬ್ಬರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್​, ಖ್ಯಾತ ಚಿತ್ರನಟ ರಮೇಶ್​ ಅರವಿಂದ್​, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್​ ಸದಸ್ಯ ಬಿ.ಜಿ. ಪಾಟೀಲ್​ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದ ದಿಗ್ಗಜ ಶಿವಾನಂದ ಕೆಲೂರ:ವಿಜಯಪುರದ ಶೈಕ್ಷಣಿಕ ಕ್ಷಿತಿಜದಲ್ಲಿ ಎಕ್ಸಲೆಂಟ್​ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅವರ ಸಾಧನೆಯ ಮೈಲಿಗಲ್ಲು ಪ್ರತಿಯೊಬ್ಬರಿಗೂ ಮಾದರಿ. ಹೃದಯವಂತ ಸ್ನೇಹಿತ ಬಸವರಾಜ ಕೌಲಗಿ ಅವರೊಂದಿಗೆ ಜೊತೆಯಾಗಿ 1994ರಲ್ಲಿ ಮುರ್ನಾಲ್ಕು ಮಕ್ಕಳ ಮನೆಪಾಠದಿಂದ ಆರಂಭವಾದ ಇವರ ಶೈಕ್ಷಣಿಕ ಸಾಧನೆ ಯಾತ್ರೆ, ನಂತರ ಸೈನಿಕ್​, ನವೋದಯ, ಕಿತ್ತೂರ ಶಾಲೆಗಳ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವ “ಎಕ್ಸಲೆಂಟ್​ ಕೋಚಿಂಗ್​ ಕ್ಲಾಸ್​”ನಿಂದ ಅಭಿವೃದ್ಧಿ ಹೊಂದಿ, ನಾಡಿನಾದ್ಯಂತ ಖ್ಯಾತಿ ಪಡೆದು ಇಂದು “ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ”ಯಾಗಿ ದೈತ್ಯವಾಗಿ ಬೆಳೆದು ಸದ್ಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 1200 ಮಕ್ಕಳು ಸೇರಿ ಎಲ್​ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಅಂದಾಜು 7 ಸಾವಿರ ಮಕ್ಕಳು ಕಲಿಯುವ ಹಂತಕ್ಕೆ ಹೋಗಿದ್ದು, ಅಂದಾಜು 500 ನುರಿತ ಶಿಕ್ಷಕ ಸಿಬ್ಬಂದಿ ಮಕ್ಕಳ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ. 700ಕ್ಕೂ ಹೆಚ್ಚು ಶಿಕ್ಷಕೇತರ ಸಿಬ್ಬಂದಿಗೆ ಕಾಯಕ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ.
ಸಾಧನೆಯ ಹೆಜ್ಜೆ ಗುರುತು:ಶಿವಾನಂದ ಕೆಲೂರವರ ಮೂಲ ಊರು ರಾಯಚೂರ ಜಿಲ್ಲೆ ಲಿಂಗಸುಗುರ ತಾಲೂಕಿನ ಸಂತೆಕೆಲೂರು. ಅವರ ಪೂರ್ವಿಕರು ಪ್ರಸ್ತುತ ತಾಳಿಕೋಟೆ ತಾಲೂಕಿನ ಸಣ್ಣ ಹಳ್ಳಿ ಶೆಳ್ಳಗಿಗೆ ವಲಸೆ ಬಂದರು. ತಂದೆ ನಾಗಪ್ಪ ಮಲಕಾಜಪ್ಪ ಕೆಲೂರ, ತಾಯಿ ನೀಲಮ್ಮ ನಾಗಪ್ಪ ಕೆಲೂರ. ಇವರ ಮೂರನೇ ಮಗನೇ ಶಿವಾನಂದ ಕೆಲೂರ. ಪ್ರಾಥಮಿಕ ಶಿಕ್ಷಣ ಶೆಳ್ಳಗಿಯಲ್ಲಿ, ಪ್ರೌಢಶಿಕ್ಷಣ ಹೂವಿನ ಹಿಪ್ಪರಗಿಯಲ್ಲಿ, ಪದವಿಪೂರ್ವ ಶಿಕ್ಷಣ ವಿಜಯಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಎಸ್​.ಬಿ. ಆರ್ಟ್ಸ್​ ಹಾಗೂ ಕೆಸಿಪಿ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಯುನಿರ್ವಸಿಟಿ ಕಾಲೇಜ್​ ಆಫ್​ ಎಜುಕೇಶನ್​ನಲ್ಲಿ ಬಿ.ಎಡ್ ಹಾಗೂ ಸ್ನಾತಕ ಪದವಿ ಪಡೆದುಕೊಂಡರು. ಅತ್ಯಂತ ಸೂಕ್ಷ್ಮಮತಿಯಾಗಿದ್ದ ಅವರು, ತಂದೆ-ತಾಯಿಯವರ ಆರ್ಥಿಕ ಸಂಕಷ್ಟವರಿತು ತಮ್ಮ ಶಿಕ್ಷಣದೊಂದಿಗೆ, ಮಕ್ಕಳಿಗೆ ಮನೆ ಪಾಠವನ್ನೂ ಮಾಡುತ್ತಿದ್ದರು.
ಶಿಕ್ಷಣ ಪೂರೈಸಿ ವಿಜಯಪುರಕ್ಕೆ ಹಿಂತಿರುಗಿ, ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಮಾಸಿಕ 800 ರೂ. ವೇತನಕ್ಕೆ ಶಿಕ್ಷಕರಾಗಿ ಸೇವಾವೃತ್ತಿ ಆರಂಭಿಸಿದರು. ಈ ಸಂದರ್ಭದಲ್ಲಿಯೇ ಅವರಿಗೆ ಹೃದಯವಂತ ಸ್ನೇಹಿತ ಬಸವರಾಜ ಕೌಲಗಿ ಅವರ ಪರಿಚಯವಾಗಿ, ಇಬ್ಬರೂ ಸೇರಿ ಎಕ್ಸಲೆಂಟ್​ ಕೋಚಿಂಗ್​ ಕ್ಲಾಸ್​ ಆರಂಭಿಸಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಇವತ್ತು ವಿಜಯಪುರದ ಹೆಮ್ಮೆಯಾಗಿ ಎಕ್ಸಲೆಂಟ್​ ಸಮೂಹ ಸಂಸ್ಥೆ ಬೆಳೆದು ನಿಂತಿದೆ.
ಮಕ್ಕಳ ಆಸಕ್ತಿಗೆ ತಕ್ಕ ಶಿಕ್ಷಣ:ಶಿವಾನಂದ ಕೆಲೂರವರು ಯಾವಾಗಲೂ ಅನ್ವೇಷಕ ಗುಣಹೊಂದಿದ್ದು, ಹೊಸ ಹೊಸ ವಿಚಾರಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳವುದು ಅವರ ಹೆಗ್ಗಳಿಕೆ. ಮಕ್ಕಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಪರಿಣಿತಿಯನ್ನು ಮಕ್ಕಳಲ್ಲಿ ಸಾಧಿಸುವುದು, ಮುಖ್ಯ ಎಂದರಿತವರು. ಹಾಗಾಗಿ ಶಾಲೆಯಲ್ಲಿ ಸಂಗೀತ, ನೃತ್ಯ, ಭಾಷಣ ಕಲೆ, ಸಾಹಿತ್ಯ, ಚರ್ಚಾಕೂಟ… ಹೀಗೆ ಹತ್ತಾರು ವಿಷಯಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿ ಮುದೊಂದು ದಿನ ಆಸಕ್ತಿ ಜೀವನಕ್ಕೆ ಆಸರೆಯಾಗಬೇಕೆಂದು ಇವರ ನಂಬಿಕೆ.
ಇತರೆ ಹವ್ಯಾಸಗಳು:ಶಿಕ್ಷಣದ ಜತೆಗೆ ಕೃಷಿಯಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಅವರು ಬೆಳೆಯುವ ಡ್ರ್ಯಾಗನ್​, ಮಾವು ಕೃಷಿ, ಕೃಷಿಯಲ್ಲಿ ಬರುವ ತೊಂದರೆಗಳು, ರೋಗಗಳು, ಅವುಗಳ ನಿರ್ವಹಣೆ ಎಲ್ಲವೂ ಅವರಿಗೆ ಕರಗತವಾಗಿವೆ.
ಮುಂದಿನ ಗುರಿ:ಶಿವಾನಂದರವರ ಮಕ್ಕಳನ್ನೊಳಗೊಂಡಂತೆ ಅವರ ಸಹೋದರರಾದ ದಯಾನಂದ ಕೆಲೂರ ಅವರ ಮಗ ಕಾರ್ತಿಕ ಕೆಲೂರ, ಸಹೋದರಿಯ ಮಗ ವಿನೋದ ಎಲ್ಲರೂ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದು, ಮುಂಬರುವ ದಿನಗಳ ವೈದ್ಯಕೀಯ ಶಿಕ್ಷಣ ಮತ್ತು ಸಮಾಜ ಸೇವೆ ಅವರ ಗುರಿಯಾಗಿದೆ. ಅಲ್ಲದೇ ದುರ್ಬಲರಿಗಾಗಿ ಉಚಿತ ಶಿಕ್ಷಣ, ವಸತಿ, ಕೌಶಲವೃದ್ಧಿ, ಶಿಕ್ಷಣ ಇವರ ಚಿಂತನೆಗಳಾಗಿವೆ.
ಅರಸಿ ಬಂದ ಪ್ರಶಸ್ತಿಗಳು:ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆ ಕೊಡಮಾಡಿದ ಶ್ರೀ ಸಿದ್ಧೇಶ್ವರ ರತ್ನ, ಜಿಲ್ಲಾ ಕನ್ನಡ ರಾಜ್ಯೋತ್ಸವ ಒಳಗೊಂಡಂತೆ, ಕಾಯಕಯೋಗಿ, ಉತ್ತಮ ಶಿಕ್ಷಕ, ಶಿಕ್ಷಕರತ್ನ, ಗುರುಕುಲ ಚಕ್ರವರ್ತಿ, ಸಿದ್ಧಾರ್ಥ ರತ್ನ, ಅಚೀವರ್ಸ್​ ಆಫ್​ ಕರ್ನಾಟಕ ಹೀಗೆ ಹತ್ತಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದು ಅವರ ಸಮಾಜ ಮುಖಿ ಚಿಂತನೆಗೆ ಸಾಕ್ಷಿ.
ಶಿವಾನಂದ ಕೆಲೂರ ಹಾಗೂ ನಾನು, ಎರಡು ದೇಹ ಹಾಗೂ ಒಂದೇ ಮನಸ್ಸು. ಇಬ್ಬರ ಗುರಿಯೂ ಒಂದೇ ಆಗಿದ್ದರಿಂದ ಎಕ್ಸ್​ಲೆಂಟ್​ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಲು ಸಾಧ್ಯವಾಯಿತು. ಅವರ ಹಾಗೂ ನನ್ನ ಸಹೋದರರೂ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.|ಬಸವರಾಜ ಕೌಲಗಿಸಂಸ್ಥಾಪಕ ಅಧ್ಯಕ್ಷರು, ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ, ವಿಜಯಪುರ
ಸ್ವಾವಲಂಬಿ ಬದುಕಿಗೆ ಇಂಬುಕೊಟ್ಟು ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಶಿಕ್ಷಣದ ಮುಖ್ಯಧ್ಯೇಯವಾಗಬೇಕು. ಜಗತ್ತಿನ ಸವಾಲುಗಳಿಗೆ ಎದೆಯೊಡ್ಡಿ ಎದುರಿಸಿ ಅರ್ಥಪೂರ್ಣವಾಗಿ ಬದುಕುವ ಸಾಮರ್ಥ್ಯವನ್ನು ಗಳಿಸಿಕೊಡುವ ಶಿಕ್ಷಣ ಮಗುವಿಗೆ ಸಿಗುವಂತಾಗಬೇಕು. ಮನುಷ್ಯನ ಸಾಮರ್ಥ್ಯ ಅಗಣಿತ. ಯಾವುದೇ ಮಿತಿಗಳನ್ನು ಹೇರಿಕೊಳ್ಳದೆ, ಉತ್ತಮ ಜೀವನ, ಉನ್ನತ ಸಮಾಜ ನಿರ್ಮಾಣ ಮಾಡುವುದೆ ಶಿಕ್ಷಣ. ಇಂತಹ ಸದುದ್ದೇಶವೇ ಎಕ್ಸಲೆಂಟ್​ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಪ್ರೇರಣೆ!|ಶಿವಾನಂದ ಕೆಲೂರಸಂಸ್ಥಾಪಕ ಪ್ರ. ಕಾರ್ಯದರ್ಶಿ, ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ, ವಿಜಯಪುರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − eight =
Remember me
