ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್ವಾಹಿನಿಯ ಪ್ರತಿಷ್ಠಿತವಿಜಯರತ್ನ-2022ಪ್ರಶಸ್ತಿ ಪ್ರದಾನ ಮಾಡಲಾಯಿತು. ಆ ಪೈಕಿ ಯುವ ಉದ್ಯಮಿ ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಅವರಿಗೂ ಸಚಿವ ಡಾ. ಕೆ.ಸುಧಾಕರ್​ ಮತ್ತು ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ‘ವಿಜಯರತ್ನ-2022 ಪ್ರಶಸ್ತಿ ಪ್ರದಾನ’ ಮಾಡಿದರು.
ಬೆಂಗಳೂರು:ಸಾಧನೆಗೆ ಕೇವಲ ಹಣ, ಅಧಿಕಾರ ಇದ್ದರಷ್ಟೇ ಸಾಲದು. ಅದರೊಂದಿಗೆ ವಿವೇಕ ಹಾಗೂ ಸಂಸ್ಕಾರವೂ ಬೇಕಾಗುತ್ತದೆ ಎಂಬುವುದಕ್ಕೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಉತ್ತಮ ನಿದರ್ಶನ. ಕಠಿಣ ಪರಿಶ್ರಮದಿಂದಲೇ ಬೆಳೆಯುತ್ತಿರುವ ಬಸವಪ್ರಸಾದ ಅವರು ಇಡೀ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ದಂಪತಿಯ ದ್ವಿತೀಯ ಪುತ್ರ ಬಸವಪ್ರಸಾದ ಜೊಲ್ಲೆ ಉತ್ತರ ಕರ್ನಾಟಕದ ಯುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.
ಬಿಬಿಎ ವ್ಯಾಸಂಗ ಮುಗಿಸಿರುವ ಬಸವಪ್ರಸಾದ ಅವರು ಸಿಂಗಾಪುರ, ದುಬೈ ಹಾಗೂ ಆಸ್ಟ್ರೆಲಿಯಾದಲ್ಲಿ ಉನ್ನತ ವ್ಯಾಸಂಗ ಪಡೆದು, ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲಿನ ಕಾರ್ಯವೈಖರಿ ಅಧ್ಯಯನ ಮಾಡಿದ್ದಾರೆ. ತಮ್ಮ ಊರಿನ ಜನತೆಗೆ ಉದ್ಯೋಗ ನೀಡಿ, ಅವರ ಕೌಶಲಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ, ಗೌರವಿಸುವಂತಾಗಬೇಕು ಎಂಬ ಮಹತ್ವಕಾಂಕ್ಷಿ ಹೊಂದಿದ್ದಾರೆ.
ರಾಜಕೀಯ ಶಕ್ತಿ ಹಾಗೂ ಐಶಾರಾಮಿ ಸೌಲಭ್ಯಗಳಿದ್ದ ಮಾತ್ರಕ್ಕೆ ಯಶಸ್ಸು ಒಲಿಯುವುದಿಲ್ಲ: ಶಿಕ್ಷಣ, ನಿರಂತರ ಶ್ರದ್ಧೆ ಹಾಗೂ ಪರಿಶ್ರಮದಿಂದ ಪ್ರಯತ್ನ ಪಟ್ಟರೇ ಎಂಥದ್ದನ್ನೂ ಸಾಧಿಸಿ ತೋರಿಸಬಹುದು ಎಂಬ ಮನೋಭಾವ ಬಸವಪ್ರಸಾದ ಅವರಲ್ಲಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಹೊರವಲಯದಲ್ಲಿ “ಮ್ಯಾಗ್ನಮ್​ಟಫ್​ ಇಂಡಿಯಾ ಪ್ರೈ.ಲಿ.’ ಹೆಸರಲ್ಲಿ ಗ್ಲಾಸ್​ ಕಂಪನಿ ಆರಂಭಿದ್ದಾರೆ. ಆ ಮೂಲಕ ರೂರಲ್​-ಗ್ಲೋಬಲ್​-ರೂರಲ್​ ಅಂದರೇ ಗ್ರಾಮೀಣದಿಂದ ಜಾಗತಿಕ ಮಟ್ಟ, ಜಾಗತಿಕ ಮಟ್ಟದಿಂದ ಗ್ರಾಮಗಳಿಗೆ ಎಂಬ ಪರಿಕಲ್ಪನೆಯಲ್ಲಿ ಗ್ರಾಮೀಣ ಜನರ ಬದುಕನ್ನು ಉದ್ಯೋಗದ ಮೂಲಕವೇ ಉನ್ನತೀಕರಿಸುವ ವಿಶೇಷ ಪ್ರಯತ್ನದಲ್ಲಿ ಸೈ ಎನಿಸಿಕೊಂಡಿದ್ದಾರೆ.
ತಂದೆ-ತಾಯಿ ಸಮಾಜದಲ್ಲಿ ತಕ್ಕಮಟ್ಟಿಗೆ ಹೆಸರುಗಳಿಸಿದ್ದರೆ, ಅದನ್ನು ತಮ್ಮ ವೈಯಕ್ತಿಕ ಬದುಕಿಗೆ ಬಳಸಿಕೊಳ್ಳುವವರೇ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ ಬಸವಪ್ರಸಾದ ಜೊಲ್ಲೆ ಅವರ ನಡೆ ಇದಕ್ಕೆ ಭಿನ್ನವಾಗಿದೆ. ತಮ್ಮ ಶಿಕ್ಷಣ ಮತ್ತು ಕೌಶಲಗಳಿಂದಲೇ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಂಪನಿಯ ಕೆಳ ಹಂತದ ಸಿಬ್ಬಂದಿಯಿಂದ ಹಿಡಿದು ತಮ್ಮ ಆಪ್ತ ಸಹಾಯಕರವರೆಗೂ ಎಲ್ಲ ಸಿಬ್ಬಂದಿ ಜತೆಗೆ ಅತ್ಯಂತ ಆತ್ಮೀಯತೆಯಿಂದ ಬೆರೆಯುತ್ತಾರೆ. ಬುದ್ಧ, ಬಸವಣ್ಣನರ ಸಮಾನತೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಅಚರು ಉದ್ಯಮ ಹೊರತು ಪಡಿಸಿ, ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ “ಮ್ಯಾಗ್ನಮ್​ಟಫ್​ ಇಂಡಿಯಾ ಪ್ರೈ.ಲಿ’ಗೆ ಆರಂಭದಲ್ಲಿ ಕೋವಿಡ್​-19 ಸೋಂಕಿನಿಂದ ಹೇರಲ್ಪಟ್ಟ ಲಾಕ್​ಡೌನ್​ ಪರಿಣಾಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಲಭಿಸಲಿಲ್ಲ. ಆದರೆ, ಛಲ ಬಿಡದ ಬಸವಪ್ರಸಾದ ಅವರು, ಮುಂದಿನ ಎರಡೇ ವರ್ಷದಲ್ಲಿ ಕಂಪನಿಯನ್ನು ದಕ್ಷಿಣ ಭಾರತದಲ್ಲೇ ಬಹುದೊಡ್ಡದಾದ ಗ್ಲಾಸ್​ ಕಂಪನಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದು, ಬೆಳಗಾವಿ ಜಿಲ್ಲೆ ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗದ ಭರವಸೆಯ ಬೆಳಕಾಗಿದ್ದಾರೆ.
ಸಮಾಜ ಸೇವೆ ತುಡಿತದಿಂದ ದುಡಿಯುವ ವ್ಯಕ್ತಿತ್ವ:26 ವಯಸ್ಸಿನ ಬಸವಪ್ರಸಾದ ಅವರಲ್ಲಿನ ಪ್ರೌಢಿಮೆ, ಸಂವಹನ ಕೌಶಲ, ಉದ್ಯಮದಲ್ಲಿನ ಚಾಣಾಕ್ಷತೆ, ಮನಸ್ಸು ಬಿಚ್ಚಿ ಮಾತನಾಡುವ ನಿಷ್ಕಲ್ಮಶ ವ್ಯಕ್ತಿತ್ವದಿಂದಲೇ ಮ್ಯಾಗ್ನಮ್​ಟಫ್​ ಇಂಡಿಯಾ ಪ್ರೈ.ಲಿ. ಗ್ಲಾಸ್​ ಕಂಪನಿ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದೆ. ತಂದೆ-ತಾಯಿಯಂತೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿ ಬಡವರು, ನೊಂದವರ ಪರ ತೋರುವ ಕಾಳಜಿ ಮಾದರಿಯಾಗಿದ್ದಾರೆ. ಉದ್ಯಮಿಯಾಗಿದ್ದರೂ ಒಂದಿಲ್ಲೊಂದು ಸಮಾಜ ಸೇವೆಗೆ ಹಂಬಲಿಸುವ ಇವರು, ಸಮಾಜಕ್ಕೆ ಸದುಪಯೋಗವಾಗುವ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಶೇಷ ಶ್ರಮ ಹಾಕುವುದು ಗಮನಾರ್ಹ.
ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ಶ್ರಮದ ಸಾಧನೆ ಸ್ಫೂರ್ತಿ:ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಜವಾಬ್ದಾರಿ ನಿರ್ವಹಿಸುತ್ತಿರುವ ಬಗ್ಗೆವಿಜಯವಾಣಿಪತ್ರಿಕೆಯೊಂದಿಗೆ ಮಾತನಾಡಿದ ಬಸವಪ್ರಸಾದ ಜೊಲ್ಲೆ ಅವರು ತಮಗೆ ವಿಆರ್​ಎಲ್​ ಸಮೂಹ ಸಂಸ್ಥೆಯ ಚೇರ್ಮನ್​, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ಸಾಧನೆ ಸ್ಫೂರ್ತಿಯಾಗಿದೆ ಎಂದು ಸಂತಸ ಹಂಚಿಕೊಂಡರು. ತಂದೆ-ತಾಯಿ ಜತೆಗೆ ಹಿರಿಯ ಸಹೋದರ ಜ್ಯೋತಿಪ್ರಸಾದ ಅವರು ಕೇವಲ ವ್ಯಕ್ತಿಯಲ್ಲ, ಶಕ್ತಿಯಾಗಿ ನನಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡಿ ಬೆನ್ನು ತಟ್ಟುತ್ತಿದ್ದಾರೆ. ಪರೋಕ್ಷ ಹಾಗೂ ಅಪರೋಕ್ಷವಾಗಿ ಜೊಲ್ಲೆ ಪರಿವಾರದ ಸಹಕಾರದಿಂದಲೇ ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪರಿವಾರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಉದ್ಯೋಗ ದಾತ:ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿರುವ ಬಸವಪ್ರಸಾದ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇನು ಸವಾಲಿನ ಕೆಲಸವೇನು ಅಲ್ಲ. ಆದರೆ, ತಮ್ಮೂರಿನ ಜನತೆಯ ಜೀವನ ಮಟ್ಟ ಸುಧಾರಿಸಬೇಕು ಎಂಬ ಮಹತ್ವಕಾಂಕ್ಷಿಯಿಂದ ಇಲ್ಲಿಯೇ ಉದ್ಯಮ ಆರಂಭಿಸಿದ್ದಾರೆ. ಸದ್ಯ ಮ್ಯಾಗ್ನಮ್​ ಟಫ್​ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲೇ 300ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಆಸರೆಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
