ಉತ್ತರಕನ್ನಡ:ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್.ಯಡಿಯೂರಪ್ಪ ಹಿಡಿತ ಸಾಧಿಸಿದ್ದಾರೆ. ಬೊಮ್ಮಾಯಿಯನ್ನು ಸಿಎಂ ಆಗಿ ಮಾಡಿರುವುದು ಭವಿಷ್ಯದಲ್ಲಿ ಬಿ.ವೈ.ವಿಜಯೇಂದ್ರ ಸಿಎಂ ಆಗಬೇಕೆಂದು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಆನಂದ್​, 2023ಕ್ಕೆ ವಿಜಯೇಂದ್ರ ಅವರನ್ನು ಸಿಎಂ ಮಾಡಲು ಈಗ ಬೊಮ್ಮಾಯಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಯತ್ನಾಳ್ ಹಾಗೂ ಯೋಗೇಶ್ವರ್ ಐದಾರು ತಿಂಗಳಿನಿಂದ ಯಡಿಯೂರಪ್ಪರ ವಿರುದ್ಧ ಮಾತನಾಡುತ್ತಿದ್ದರು. ಬೋನಿನಲ್ಲಿ ಇದ್ದ ಮಂಗನಂತೆ ಯತ್ನಾಳ್ ಕೂಗಾಡಿದರೂ ಏನು ಮಾಡಿಕೊಳ್ಳಲಾಗಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ ಅವರಿಬ್ಬರನ್ನ ಮಂತ್ರಿ ಮಾಡಬಾರದು ಎಂದರು.
ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಸೂಕ್ತ ಆಯ್ಕೆ. ಇದರಿಂದ ಬಿಜೆಪಿಗೆ ಭವಿಷ್ಯದಲ್ಲಿ ಲಾಭವಾಗಲಿದೆ. ರಾಜ್ಯಕ್ಕೆ ಒಳ್ಳೆಯ ದಿನ ಬರುತ್ತದೆ. ಈಗಿನ ಸರ್ಕಾರದ ಬೆಳವಣಿಗೆ ಮುಂದೆ ಜೆಡಿಎಸ್​ಗೆ ಪಾಲಿಗೆ ಒಳಿತು ತರಲಿದೆ ಎಂದ ಆನಂದ್​, ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.
ರೈತರ ಮಕ್ಕಳಿಗೆ ಶಿಷ್ಯವೇತನ: ನೂತನ ಸಿಎಂ ಬೊಮ್ಮಾಯಿ ಘೋಷಣೆ

ಮೊದಲ ದಿನವೇ ಆಡಳಿತಕ್ಕೆ ಹೊಸ ದಿಕ್ಸೂಚಿ, ಆರ್ಥಿಕ ಶಿಸ್ತಿಗೆ ಮಾರ್ಗಸೂಚಿ ಕೊಟ್ಟ ಬೊಮ್ಮಾಯಿ

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − nine =
Remember me
