ಮಂಗಳೂರು:ರಾಜ್ಯಾದ್ಯಂತ ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಭಾರೀ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ವಂಚನೆ ಬಯಲಾಗಿದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕೊಡಿಸುವುದಾಗಿ ಗಾಳ ಹಾಕಿದ ವಂಚಕರು ಹಾಸನ ಜಿಲ್ಲೆ ಆಲೂರಿನ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಕೃಷ್ಣ ಗೌಡ(66) ಎನ್ನುವವರಿಗೆ 40 ಲಕ್ಷ ರೂ. ವಂಚಿಸಿರುವ ಕುರಿತು ಸೆನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ನಾಗಭೂಷಣ್​, ವಾಮಂಜೂರಿನ ನಾರಾಯಣ ಸ್ವಾಮಿ, ಮೂಲ್ಕಿಯ ಮಹೇಶ್​ ಭಟ್​, ಮೂಡುಬಿದಿರೆಯ ದಿನೇಶ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಕೃಷ್ಣಗೌಡರ ಪುತ್ರ ಸಿ.ಕೆ.ದರ್ಶನ್​ ಮತ್ತು ಬೆಂಗಳೂರಿನ ಮೊಹಮ್ಮದ್​ ಶರೀಫ್​ ಸೇರಿದಂತೆ ಹಲವರು ಬೆಂಗಳೂರಿನಲ್ಲಿ ಕೋಚಿಂಗ್​ ಸೆಂಟರ್​ನಲ್ಲಿ ತರಬೇತಿ ವೇಳೆ ಪರಸ್ಪರ ಪರಿಚಿತರಾಗಿದ್ದರು. 2019ರಲ್ಲಿ ದರ್ಶನ್​ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಆ ವೇಳೆ ಮೊಹಮ್ಮದ್​ ಶರೀಫ್​, ತನ್ನ ನೆರೆಮನೆಯ ನಿರ್ಮಲಾ ವೆಂಕಟಸ್ವಾಮಿ ಎಂಬುವರ ಮನೆಯಲ್ಲಿ ಪೂಜೆಗೆ ಬರುತ್ತಿದ್ದ ಮೂಲ್ಕಿಯ ಮಹೇಶ್​ ಭಟ್​ ಎಂಬುವರ ಬಳಿ ಸರ್ಕಾರಿ ಹುದ್ದೆ ಪಡೆಯುವ ಬಗ್ಗೆ ಮಾತನಾಡಿದ್ದರು. ಆಗ ಮಹೇಶ್,​ ನನಗೆ ಸಿಬಿಐನಲ್ಲಿ ನಾರಾಯಣಸ್ವಾಮಿ ಎನ್ನುವವರ ಪರಿಚಯ ಇದೆ. ಅವರಿಗೆ ರಾಜಕೀಯದವರ ಹಾಗೂ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯ ಇದೆ, ಕೆಲಸ ಮಾಡಿಸಿಕೊಡುತ್ತಾರೆ ಎಂದಿದ್ದ.
ಅದರಂತೆ ಶರೀಫ್​ ಹಾಗೂ ಇತರರು ಸಿಬಿಐ ಅಧಿಕಾರಿ ಸೋಗಿನಲ್ಲಿದ್ದ ನಾರಾಯಣಸ್ವಾಮಿಯನ್ನು ಮಹೇಶ್​ ಮನೆಯಲ್ಲಿ ಭೇಟಿ ಮಾಡಿದ್ದರು. ಕೆಲಸ ಬೇಕಾದರೆ ಬೆಂಗಳೂರಿನ ನಾಗಭೂಷಣ್​ ಹಾಗೂ ಮೂಡುಬಿದಿರೆಯ ದಿನೇಶ್​ ಮೂಲಕ ಮಾತನಾಡಬೇಕು. ಆದರೆ ಅವರು ಹೇಳಿದಷ್ಟು ಹಣದ ವ್ಯವಸ್ಥೆ ಮಾಡಬೇಕು ಎಂದು ನಾರಾಯಣಸ್ವಾಮಿ ನಂಬಿಸಿದ್ದ. ಕೃಷ್ಣಗೌಡರು ಪುತ್ರನ ಕೆಲಸಕ್ಕಾಗಿ 8 ಲಕ್ಷ ರೂ.ವನ್ನು ನಾರಾಯಣಸ್ವಾಮಿಗೆ ನೀಡಿದ್ದರು. ಉದ್ಯೋಗದ ಆದೇಶ ಪ್ರತಿ ಕೇಳಿದಾಗ ಆರೋಪಿಗಳು ವಿಳಂಬವಾಗುತ್ತದೆ ಎಂದಿದ್ದರು. ಕೆಲ ಸಮಯದ ಬಳಿಕ ನಕಲಿ ಆದೇಶಪತ್ರ ತೋರಿಸಿದ್ದು, ಕೃಷ್ಣಗೌಡ ಮತ್ತೆ 32 ಲಕ್ಷ ರೂ. ನೀಡಿದ್ದರು. ನೇಮಕಾತಿ ಕುರಿತು ಕೇಳಿದಾಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕುಣಿಗಲ್​ಗೂ ತಟ್ಟಿದ PSI ಎಕ್ಸಾಂ ಅಕ್ರಮದ ನಂಟು: ರೈತರಾದ ನಾವು 80 ಲಕ್ಷ ಹಣ ಎಲ್ಲಿಂದ ತರೋದು? ಪೇದೆ ತಂದೆ ಆಕ್ರೋಶ

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯ: ಸಿಎಂ ಬೊಮ್ಮಾಯಿ‌

ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + four =
Remember me
