ಹಾವೇರಿ:ಕರೊನಾ ಚೈನ್​ ಲಿಂಕ್​ ಕತ್ತರಿಸಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಾಗಿದೆ. ಶಾಲಾ-ಕಾಲೇಜುಗಳನ್ನ ಬಂದ್​ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಇಲ್ಲಿನ ಪ್ರತಿಷ್ಠಿತ ಕಾಲೇಜು ಸಂಸ್ಥೆಯೊಂದು ಲಾಕ್​ಡೌನ್ ಇದ್ದರೂ ಉಪನ್ಯಾಸಕರನ್ನ ಕಾಲೇಜಿಗೆ ಕರೆಸಿಕೊಂಡು ಕೆಲಸ ಮಾಡಿಸುತ್ತಿದೆ.
ಹಾವೇರಿಯ ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಬೆಳಗ್ಗೆ ಹತ್ತಕ್ಕೂ ಹೆಚ್ಚು ಉಪನ್ಯಾಸಕರು ಕೆಲಸಕ್ಕೆ ಹಾಜರಾಗಿದ್ದಾರೆ. ಬೆಳಗ್ಗೆ 7ರಿಂದ 9ರ ವರೆಗೂ ಸಿಬ್ಬಂದಿ ಕಾಲೇಜಿಗೆ ಬರುವುದು ಕಡ್ಡಾಯವಂತೆ. ಉಪನ್ಯಾಸಕರು ಕಾಲೇಜಿನಲ್ಲಿ ಡ್ಯೂಟಿ ಮಾಡಬೇಕಂತೆ. ನಂತರ ಮನೆಗೆ ಹೋಗಿ ಆನ್​ಲೈನ್ ಕ್ಲಾಸ್ ತೆಗೆದುಕೊಳ್ಳಬೇಕಂತೆ. ಇದು ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಿನ್ಸಿಪಾಲ್ ಚನ್ನಪ್ಪ ಬಿ. ಅವರ ಆದೇಶವಂತೆ! ಇತ್ತ ಕಾಲೇಜು ಒಳಗೆ ಲೆಕ್ಚರರ್​ ಇದ್ದರೆ ಅತ್ತ ಗೇಟ್​ ಮುಂದೆ ನಿಂತು ಪ್ರಿನ್ಸಿಪಾಲ್ ವಾಚ್​ ಮಾಡುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಕಂಡು ಬಂತು.ಇದನ್ನೂ ಓದಿರಿಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ
ಕಾಲೇಜಿಗೆ ಬರಲ್ಲಾ ಎಂದರೆ ನಮಗೆ ತೊಂದರೆ ಕೊಡ್ತಾರೆ. ಈಗಾಗಲೆ ಕರೊನಾ ಸೋಂಕಿಗೆ ಕಾಲೇಜಿನ ಟೆಕ್ನಿಕಲ್ ಇನ್​ಸ್ಪೆಕ್ಟರ್ ಒಳಗಾಗಿದ್ದಾರೆ. ಇಷ್ಟಾದರೂ ಉಪನ್ಯಾಸಕರು ಬಂದು ಕಾಲೇಜಿನಲ್ಲಿ ಕೆಲಸ ಮಾಡಬೇಕಂತೆ. ಕೆಲಸ ಇದ್ದರೂ ಇಲ್ಲದಿದ್ದರೂ ಕಾಲೇಜಿಗೆ ಲೆಕ್ಚರರ್ ಬರಲೇಬೇಕು ಎಂದು ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ಇತ್ತ ದಿಗ್ವಿಜಯ ನ್ಯೂಸ್​ನ ಕ್ಯಾಮರಾ ನೋಡಿ ಕಾಲೇಜು ಪ್ರಿನ್ಸಿಪಾಲ್ ಮತ್ತು ಲೆಕ್ಚರರ್ ಕಕ್ಕಾಬಿಕ್ಕಿಯಾದರು. ಮಾಹಿತಿ ನೀಡದೆ ಕ್ಯಾಮರಾ ಆನ್ ಮಾಡಬೇಡಿ ಎಂದು ಪ್ರಿನ್ಸಿಪಾಲ್ ದೂರ ಸರಿದರು. ಇವತ್ತು ಅಮವಾಸ್ಯೆ ಇದೆ. ಹಾಗಾಗಿ ಲೆಕ್ಚರರ್ ಬಂದಿದ್ದಾರೆ ಎಂದರು. ಟಿವಿ ಕ್ಯಾಮರಾ ನೋಡಿ ಒಬ್ಬೊಬ್ಬರೇ ಹೊರಗೆ ಬಂದು ಮನೆಯತ್ತ ಮುಖ ಮಾಡಿದರು.
ನನ್ನ ಪತ್ನಿ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. 10 ದಿನಗಳಿಂದ ಕಾಲೇಜು ಓಪನ್ ಇದೆ. ನಾವು ಎಷ್ಟು ಹೇಳಿದರೂ ಕೇಳ್ತಾ ಇಲ್ಲಾ. ಈಗಾಗಲೇ ಕಾಲೇಜು ಸಿಬ್ಬಂದಿಯೊಬ್ಬರಿಗೆ ಕರೊನಾ ಬಂದಿದೆ. ನಮಗೆ ಏನಾದರೂ ಆದರೆ ಯಾರು ಹೊಣೆ? ಎಂದು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ ಉಪನ್ಯಾಸಕಿಯ ಪತಿ ಆತಂಕ ವ್ಯಕ್ತಪಡಿಸಿದ್ದಾರೆ.
ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದ ಅಧಿಕಾರಿ! ನಡುರಸ್ತೆಯಲ್ಲಿ ಹೈಡ್ರಾಮ

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + four =
Remember me
