ಬೆಂಗಳೂರು:ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರಿಗೆ ಮಂತ್ರಿ ಪದವಿ ನೀಡುವಂತೆ ಒತ್ತಾಯಿಸಿ ಸಮುದಾಯದ ಮೂವರು ಸ್ವಾಮೀಜಿಗಳು ಹಾಗೂ ಮುಖಂಡರು ಕೆಲ ಹೊತ್ತು ರಸ್ತೆ‌ಬದಿಯಲ್ಲಿ ಕುಳಿತ ಪ್ರಸಂಗ ಶನಿವಾರ ನಡೆಯಿತು.
ಸಿಎಂ ಗೃಹ ಕಚೇರಿಗೆ ಶನಿವಾರ ಈ ನಿಯೋಗ ಧಾವಿಸಿತ್ತು. ಕಾರ್ಯನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಕಚೇರಿಗೆ ಬಂದಿರಲಿಲ್ಲ. ಭೇಟಿಗೆ ಕಾಲಾವಕಾಶ ಪಡೆದಿದ್ದರ ಬಗ್ಗೆ ಕಾವಲಿದ್ದ ಪೊಲೀಸರು ಕೇಳಿದರು. ಅಲ್ಲದೆ, ಎಲ್ಲರನ್ನೂ ಒಳಗೆ ಬಿಡಲಾಗದು ಎಂದು ಹೇಳಿದರು. ಇದರಿಂದ ಕುಪಿತರಾದ ಮುಖಂಡರು ಗೃಹ‌‌ ಕಚೇರಿಯಿಂದ ಅನತಿ ದೂರದಲ್ಲಿ ಬಿಡಾರ ಹೂಡಿದರೆ, ಇವರೊಂದಿಗೆ ಏಕದಂಡಿ ಮಠದ ಶ್ರೀ ಕುಮಾರ ಸ್ವಾಮೀಜಿ, ಕಲ್ಲಿಗಾನಹಳ್ಳಿ ಮುಕ್ತಿ ಮಂದಿರ ಮಠದ ಶ್ರೀ ಗಂಗಾಧರ ಸ್ವಾಮೀಜಿ, ಕೊಪ್ಪಳದ ಶ್ರೀ ಗಣೇಶ್ವರ ಸ್ವಾಮೀಜಿ ಸಾಥ್ ನೀಡಿದರು. ಸ್ವಾಮೀಜಿಗಳಿಗೆ ಕುಳಿತುಕೊಳ್ಳಲು ಮೂರು ಕುರ್ಚಿಗಳ ವ್ಯವಸ್ಥೆ ಮಾಡಲಾಯಿತು.
ಡಿಸಿಪಿ ಮನವೊಲಿಕೆ:ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಂಗಳೂರು ಕೇಂದ್ರ ಡಿಸಿಪಿ ಅನುಚೇತ್ ಅವರು ಸ್ವಾಮೀಜಿಗಳ ಮನವೊಲಿಸಿದರು. ರಸ್ತೆ‌ಬದಿ ಕುಳಿತುಕೊಳ್ಳುವುದು ಬೇಡ. ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಸ್ವಾಮೀಜಿಗಳನ್ನು ಹೀಗೆ ರಸ್ತೆಯಲ್ಲಿ ಕೂಡಿಸುವುದು ಸರಿಯಲ್ಲ. ಸ್ವಾಮೀಜಿಗಳು ಸೇರಿದಂತೆ ಆಯ್ದ ಕೆಲವು ಮುಖಂಡರಿಗೆ ಸಿಎಂ ಬಂದ ಬಳಿಕ ಭೇಟಿಗೆ ಕಾಲಾವಕಾಶ ಕೊಡಿಸುವೆ ಎಂದು ಮನವೊಲಿಸಿದರು. ಧರಣಿ ಕೈಬಿಟ್ಟ ಮುಖಂಡರು‌ ಸ್ವಾಮೀಜಿಗಳ ಜತೆಗೂಡಿ‌ ಗೃಹ ಕಚೇರಿ ಕೃಷ್ಣಾದ ಮುಖ್ಯಗೇಟಿನ ಮುಂದೆ ಜಮಾಯಿಸಿ‌ದರು. ಮತ್ತೆ‌ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸಿಎಂ ಬಂದ ಬಳಿಕ ಎಲ್ಲರನ್ನೂ ಕಚೇರಿ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.
ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ದಂಡ ಪಡೆದ ಕಾನ್​ಸ್ಟೇಬಲ್​ ಅಮಾನತು

ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರದಬ್ಬಿದ ಕಾಲೇಜು ಆಡಳಿತ ಮಂಡಳಿ

ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
