ನೆಲಮಂಗಲ:ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಗ್ರಾಮದ ವಿಶ್ವಶಾಂತಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿಶ್ವರೂಪ ವಿಜಯ ವಿಠ್ಠಲ ದೇವರ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಆಷಾಢದ ಶುದ್ಧ ಏಕಾದಶಿ, ಶ್ರೀ ವಿಜಯ ವಿಠ್ಠಲ ದೇವರ 34ನೇ ಪ್ರತಿಷ್ಠಾಪನಾ ವರ್ಧಂತಿ ಹಾಗೂ ಆಶ್ರಮದ ಸಂಸ್ಥಾಪಕ ದಿ. ಸಂತ ಭದ್ರಗಿರಿ ಕೇಶವದಾಸರ 88ನೇ ಜಯಂತ್ಯುತ್ಸವ ಪ್ರಯುಕ್ತ ಭಾನುವಾರ ಕಾರ್ಯಕ್ರಮ ಏರ್ಪಾಡಾಗಿತ್ತು. ಆಶ್ರಮದ ಪ್ರವೇಶದ್ವಾರದ ಗಣಪತಿ ದೇವಾಲಯದಲ್ಲಿನ ವಿಠ್ಠಲ ರುಕ್ಮಿಣಿ ದೇವರ ಉತ್ಸವ, ವಿಶೇಷ ಪೂಜೆ ಹಾಗೂ 36 ಅಡಿ ಎತ್ತರದ ವಿಜಯವಿಠ್ಠಲ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.

ವಿಶೇಷ ಪೂಜೆ:ಮಹಾಮಸ್ತಕಾಭಿಷೇಕದ ಪ್ರಯುಕ್ತ ಆಶ್ರಮದ ಪ್ರವೇಶದ್ವಾರ ಮಂದಿರದಲ್ಲಿರುವ ಪ್ರಸನ್ನ ಆಂಜನೇಯ, ಮಾರ್ಕಂಡೇಯ, ದತ್ತಾತ್ರೇಯ, ಸತ್ಯನಾರಾಯಣಸ್ವಾಮಿ, ಭೂವರಾಹಸ್ವಾಮಿ, ಸೀತಾರಾಮ ಲಕ್ಷ್ಮಣ ದೇವರು ಸೇರಿ ಅಷ್ಟಲಕ್ಷ್ಮೀ ದೇವತೆಗಳಿಗೆ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮಹಾಮಜ್ಜನ ಕಣ್ತುಂಬಿಕೊಂಡರು.
ಉಕ್ಕಿ ಹರಿಯುತ್ತಿರುವ ಕಾವೇರಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ನಡುಗಡ್ಡೆ ಮುಳುಗಡೆ, ನದಿ ಪಾತ್ರದಲ್ಲಿ ಪ್ರವಾಹ ಭೀತಿ

ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ನಾಳೆಯಿಂದ ಸಿಎಂ ಪ್ರವಾಸ

ಚಂದ್ರಶೇಖರ ಗುರೂಜಿ ಹತ್ಯೆಯಾದ ಹೋಟೆಲ್​ನಲ್ಲಿ ಹೋಮ-ಹವನ! ದೇವರ ಮೊರೆ ಹೋದ ಸಿಬ್ಬಂದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
