ಚಿಕ್ಕಮಗಳೂರು: ವಾಯ್ಸ್ ಮೆಸೇಜ್ ಮಾಡಿ ಒಂದೇ ಕುಟುಂಬದ ನಾಲ್ವರು ಕಾರಿನ ಸಮೇತ ಭದ್ರಾ ನಾಲೆಗೆ ಬಿದ್ದ ಘಟನೆ ತರೀಕೆರೆ ತಾಲೂಜಿನ ಎಂ.ಸಿ. ಹಳ್ಳಿ ಬಳಿ ಬುಧವಾರ ಮಧ್ಯರಾತ್ರಿ ಸಂಭವಿಸಿದೆ.
ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಗ್ರಾಮದ ಇವರೆಲ್ಲರೂ ಕಾರು ಸಮೇತ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ನೀತು(35) ಮತ್ತು ಇವರ ಪುತ್ರ ಧ್ಯಾನ್ (13) ಅಪಾಯದಿಂದ ಪಾರಾದವರು. ನೀತು ಪತಿ ಮಂಜು, ಅತ್ತೆ ಸುನಂದಮ್ಮ ನೀರಲ್ಲಿ ಮುಳುಗಿದ್ದು, ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಾಲ್ವರು ಯಾವ ಕಾರಣಕ್ಕೆ ಸಾಯಲು ನಿರ್ಧರಿಸಿದ್ದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಸಾಯುವುದಾಗಿ ಸಂಬಂಧಿಕರಿಗೆ ವಾಯ್ಸ್​ ಮೆಸೇಜ್​ ಕಳಿಸಿದ್ದರು ಎನ್ನಲಾಗಿದೆ. ಮಂಜು ಅವರು ಸಂಬಂಧಿಯೊಬ್ಬರೊಂದಿಗೆ ನೋವಿನಿಂದ ತನಗೆ ಮೋಸ ಮಾಡಿಬಿಟ್ಟರು. ನಾಲ್ವರು ಸಾಯಲು ಬಂದಿದ್ದೇವೆ ಎಂದು ಮಾತನಾಡಿದ್ದಾರೆ. ಆ ಕಡೆಯಿಂದ ‘ಪ್ಲೀಸ್​ ಮಾಮ ನೀವು ಎಲ್ಲಿದ್ದೀರಿ ಹೇಳಿ, ಯಾರು ಮೋಸ ಮಾಡಿದ್ರು? ಪಾಪ ನಿಮ್ಮ ಮಗ ಧ್ಯಾನ್​ ಏನು ಮಾಡಿದ್ದಾನೆ. ಅವನ ಮುಖವನ್ನಾದರೂ ನೋಡಿ ಮಾಮ, ದುಡಕಬೇಡಿ…’ ಎಂದು ಯುವತಿ ಕಣ್ಣೀರಿಡುತ್ತ ಮನವೊಲಿಸಿದ್ದು, ಅಷ್ಟರಲ್ಲಿ ಕರೆ ಕಟ್​ ಆಗಿದೆ. ಇದಾದ ಬಳಿಕ ನಾಲ್ವರೂ ಕಾರು ಸಮೇತ ನಾಲೆಗೆ ಬಿದ್ದಿದ್ದು, ಇದುವರೆಗೂ ಮಂಜು ಮತ್ತು ಅವರ ತಾಯಿ ಪತ್ತೆಯಾಗಿಲ್ಲ.
ಮೈಸೂರಲ್ಲಿ ಗ್ಯಾಂಗ್​ ರೇಪ್​: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…

ಬೆಳ್ಳಂಬೆಳಗ್ಗೆ ಪ್ರೇಯಸಿಯ ತಂದೆಯನ್ನೇ ಭೀಕರವಾಗಿ ಕೊಂದ ಪ್ರಿಯಕರ! ಆ ಒಂದು ಕಾರಣಕ್ಕೆ ಹೀಗಾ ಮಾಡೋದು?

ಪರಪುರುಷನೊಂದಿಗೆ ಓಡಿಹೋದ ಪತ್ನಿ! ಸತ್ವ ಪರೀಕ್ಷೆ ನೆಪದಲ್ಲಿ ಅತ್ತೆ-ಮಾವನಿಗೆ ಮಾಡಬಾರದ್ದು ಮಾಡಿಬಿಟ್ಟ ಅಳಿಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
