ಬೆಂಗಳೂರು:ಮುಸ್ಲಿಂ ಹೆಣ್ಣುಮಗಳು ಮನೆಯಿಂದ ಹೊರಗಡೆ ಹೋಗುವಾಗ ಹಿಜಾಬ್​ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವಿತ್ರ ಕುರಾನ್​ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನ್ಯಾಯಾಲಯದಲ್ಲಿ ನಮ್ಮ ವಕೀಲರು ವಾದ ಮಂಡನೆಯಲ್ಲಿ ಎಡವಿದ್ದರೆ, ಹಿಜಾಬ್​ ವಿಚಾರವಾಗಿ ವಿರುದ್ಧ ತೀರ್ಪು ಬಂದಿದ್ದರೆ ನಾವು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ವಕ್ಫ್​ ಬೋರ್ಡ್​ ಅಧ್ಯಕ್ಷ ಮೌಲಾನಾ ಶಫಿ ಶಾ-ಆದಿ ಹೇಳಿದ್ದಾರೆ.
ಹಿಜಾಬ್​ ಪರ ಸಲ್ಲಿಕೆಯಾದ 11 ಅರ್ಜಿಗಳನ್ನೂ ವಜಾ ಮಾಡಿದ ಹೈಕೋರ್ಟ್​ ಪೂರ್ಣ ಪೀಠ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶವಿಲ್ಲ. ​ಸಮವಸ್ತ್ರ ನೀತಿ ಪಾಲಿಸಬೇಕು ಎಂದು ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಕುರಿತುದಿಗ್ವಿಜಯ ನ್ಯೂಸ್​ಜತೆ ಮಾತನಾಡಿದ ಮೌಲಾನಾ ಶಫಿ ಶಾ-ಆದಿ, ಹಿಜಾಬ್​ ವಿಚಾರದಲ್ಲಿ ಸಾಕಷ್ಟು ವಿವಾದ ಎದ್ದಿತ್ತು. ಇಂದು ತೀರ್ಪಿನ ಕುರಿತಂತೆಯೂ ಧರ್ಮದ ವಿದ್ವಾಂಸರ ಜತೆ ಚರ್ಚೆ ನಡೆಸಿದ್ದೇವೆ. ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸಮುದಾಯದ ಧಾರ್ಮಿಕ ಮುಖಂಡರು, ವಕ್ಫ್​ ಬೋರ್ಡ್​ನಲ್ಲಿ ಹಿಜಾಬ್​ ಕುರಿತು ತೀರ್ಪು ಬಂದ ಮೇಲೆ ಏನು ಮಾಡಬೇಕು ಎಂದು ನಾವು 10 ದಿನದಿಂದ ಚರ್ಚಿಸಿದ್ದೇವೆ. ಯಾವುದೇ ತೀರ್ಪು ಕೊಟ್ಟರೂ ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಉಲೆಮಾಗಳ ಮೂಲಕ ಈಗಾಗಲೇ ನಮ್ಮ ಸಮುದಾಯಕ್ಕೆ ಸಂದೇಶ ಕೊಟ್ಟಿದ್ದೇವೆ. ನಮ್ಮ ಸಮುದಾಯದಲ್ಲಿ ಬಾಲಕಿಯರ ಶಿಕ್ಷಣ ಉತ್ತಮವಾಗಿಸಲು ನಾವು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದೂ ಯೋಚಿಸಿದ್ದೇವೆ ಎಂದರು.
–Dr. Sudhakar K (@drsudhakark.official)15 Mar 2022

ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
