ಬೆಳಗಾವಿ:ನಾಗಾಲ್ಯಾಂಡ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್​ ತಾಲೂಕಿನ ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡನ್ನವರ ಹುತಾತ್ಮರಾದರು. ಸ್ವಗ್ರಾಮಕ್ಕೆ ಬಂದ ಪಾರ್ಥಿವ ಶರೀರವನ್ನು ಹುತಾತ್ಮ ಯೋಧನ ಪುಟ್ಟ ಮಗ ಸೇನೆಯ ಸಮವಸ್ತ್ರಧಾರಿಯಾಗಿಯೇ ಸ್ವೀಕರಿಸಿದ್ದು, ನೆರೆದಿದ್ದವರ ಮನಕಲಕುವಂತಿತ್ತು.
ನಾಗಾಲ್ಯಾಂಡ್​ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಭಾನುವಾರ ಅಪಘಾತ ಸಂಭವಿಸಿ ಯೋಧ ಮಂಜುನಾಥ ಗೌಡನ್ನವರ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.

ಅಪ್ಪನಂತೆ 5 ವರ್ಷದ ಮಗ ಸ್ವರೂಪ್ ಸೇನೆಯ ಸಮವಸ್ತ್ರ ಧರಿಸಿ ಅಪ್ಪನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ. ಪುಟ್ಟ ಕಂದನನ್ನು ನೋಡಿ ಶಿವಾಪುರ ಗ್ರಾಮದ ಜನರು ಮಮ್ಮಲ ಮರುಗಿದರು.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ನಿವೃತ್ತ ಯೋಧನ ಹೋರಾಟದಿಂದ ತುಂಬಿದ ಕೆರೆಗಳು! ಇವರ ಸಾಹಸಕ್ಕೊಂದು ಸಲಾಂ

Sign in to your account
Please enter an answer in digits:sixteen − 7 =
Remember me
