ಆನೇಕಲ್​:ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನೀರಾನೆ ಮರಿಗೆ ಉದ್ಯಾನದ ವೈದ್ಯರು ಮರುಜೀವ ನೀಡಿದ್ದಾರೆ.
ಉದ್ಯಾನವನದ ವೈದ್ಯಾಧಿಕಾರಿ ಡಾ.ಉಮಾಶಂಕರ್​ ನೇತೃತ್ವದ ನಾಲ್ವರು ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಮರಿ, ತಾಯಿಯೊಂದಿಗೆ ಲವಲವಿಕೆಯಿಂದ ಇರುವುದು ಸಿಬ್ಬಂದಿಯಲ್ಲಿ ಸಂತಸ ತಂದಿದೆ.
ಮೂರು ದಿನಗಳಿಂದ ಮಲ ವಿಸರ್ಜನೆ ಮಾಡಲು ತೊಂದರೆಯಾಗಿತ್ತು. ಇದರಿಂದಾಗಿ ಆಹಾರ ಮತ್ತು ನೀರು ಸೇವಿಸದೆ ನಿತ್ರಾಣಗೊಂಡಿತ್ತು. ವೈದ್ಯರು ಬಾಳೆಹಣ್ಣಿನಲ್ಲಿ ಭೇದಿ ಮಾತ್ರೆ ಹಾಕಿ ಮಲ ವಿಸರ್ಜನೆ ಮಾಡಿಸುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ. ಬಳಿಕ ದೇಶದ ಬೇರೆ ಬೇರೆ ಮೃಗಾಲಯ ಸಂಪರ್ಕಿಸಿ ಮಾಹಿತಿ ಪಡೆಯುವ ಜತೆಗೆ ಆಫ್ರಿಕಾ ಸೇರಿ ವಿದೇಶದ ಪಶು ವೈದ್ಯರನ್ನು ಸಂಪರ್ಕಿಸಿ, ಅರಿವಳಿಕೆ ನೀಡಿ ಚಿಕಿತ್ಸೆ ನೀಡಲು ನಿರ್ಧರಿಸಿತು.

ಅಂತೆಯೇ, ವೈದ್ಯರಾದ ಉಮಾಶಂಕರ್​, ವಿಜಯಕುಮಾರ್​, ವಿಶಾಖ್​, ಮಂಜುನಾಥ್​ ನೇತೃತ್ವದಲ್ಲಿ 15 ಸಿಬ್ಬಂದಿ 45 ನಿಮಿಷ ಚಿಕಿತ್ಸೆ ನೀಡಿ ಗುದದ್ವಾರದಿಂದ 6 ಕೆಜಿ ಸಗಣಿ ಹೊರತೆಗೆದಿದ್ದಾರೆ. ಚಿಕಿತ್ಸೆ ನಂತರ ಕೆಲ ಹೊತ್ತಿನಲ್ಲೇ ಮರಿ ಆನೆ ಎದ್ದು ಓಡಾಡಲು ಪ್ರಾರಂಭಿಸಿದೆ.
ಮರಿ ನೀರಾನೆ ಬೂಸಾ, ಹುಲ್ಲು ತಿಂದು ಹಾಲು ಕುಡಿಯುವಂತಾಗಿದೆ. ಕರ್ನಾಟಕ ಮೃಗಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಉದ್ಯಾನದ ಸಹಾಯಕ ನಿರ್ದೇಶಕರೂ ಆಗಿರುವ ಡಾ.ಉಮಾಶಂಕರ್​ ತಿಳಿಸಿದ್ದಾರೆ.
ಇಂತಹ ಪ್ರಕರಣ ತೀರಾ ಅಪರೂಪ. ಮೃಗಾಲಯದ ವೈದ್ಯರ ತಂಡ ಉತ್ತಮ ರೀತಿ ಚಿಕಿತ್ಸೆ ನೀಡಿದೆ. ಮರಿ ಬಳಿ ಹೋಗಲು ತಾಯಿ ನೀರಾನೆ ಬಿಡುತ್ತಿರಲಿಲ್ಲ. ವೈದ್ಯರ ತಂಡ ಮುತುವರ್ಜಿ ವಹಿಸಿ ಮರಿ ಹಾಗೂ ತಾಯಿಯನ್ನು ಪ್ರತ್ಯೇಕಿಸಿ, ಚಿಕಿತ್ಸೆ ನೀಡುವ ಮೂಲಕ ಎರಡು ವರ್ಷದ ಮರಿಯನ್ನು ಬದುಕಿಸಿದೆ.| ಸುನೀಲ್​ ಕುಮಾರ್​ ಪನ್ವಾರ್​ಉದ್ಯಾನವನ ಕಾರ್ಯನಿರ್ವಹಣಾಧಿಕಾರಿ
ನೀರಾನೆಯ ಚರ್ಮ ದಪ್ಪ ಇರುತ್ತದೆ. ಗನ್​ ಮೂಲಕ ಅರಿವಳಿಕೆ ನೀಡಿದರೂ ಚರ್ಮಕ್ಕೆ ಸೂಜಿ ನಾಟುವುದಿಲ್ಲ. ಕಿವಿ ಹಿಂಭಾಗ ಮಾತ್ರ ತೆಳು ಚರ್ಮ ಇರುತ್ತದೆ. ಅಲ್ಲಿಗೆ ಅರಿವಳಿಕೆ ನೀಡುವಾಗ ಸ್ವಲ್ಪ ಯಾಮಾರಿದರೂ ಕಣ್ಣಿನ ಭಾಗಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಆದರೂ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಸಂತಸ ತಂದಿದೆ.| ಡಾ.ಮಂಜುನಾಥ್​ವೈದ್ಯರು
ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
