ಬೆಂಗಳೂರು:ಮುಸ್ಲಿಂ ಧರ್ಮಕ್ಕೆ ಸೇರಿದವರೆಂದು ಸುಳ್ಳು ಹೇಳಿ ಮದುವೆಯಾಗಿದ್ದಲ್ಲದೆ, ಕೆಲವೇ ದಿನಗಳಲ್ಲಿ ಗಂಡನಿಂದ ಕೋಟಿ ಕೋಟಿ ಹಣ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ವಜ್ರದ ಸಮೇತ ಪರಾರಿಯಾದ ಆರೋಪದಲ್ಲಿ ತಾಯಿ-ಮಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.
ಹೈದರಾಬಾದ್​ನಲ್ಲಿ ಇಂಜಿನಿಯರ್​ ಆಗಿದ್ದ ಸೈಯದ್​ ಎಲೈಟ್​ ಮ್ಯಾಟ್ರಿಮೋನಿಯಲ್​ನಲ್ಲಿ ವಿವಾಹಕ್ಕೆ ಬಯೋಡೇಟಾ ಹಾಕಿದ್ದರು. ಇದನ್ನು ಗಮನಿಸಿ ಸೈಯದ್​ ತಂದೆ ಸೈಯದ್​ ಖಾಜಾ ಮೊಹಿನುದ್ದೀನ್​ಗೆ ಕರೆ ಮಾಡಿದ್ದ ಶಕೀಲಾ ವಿಲ್ಲಿಸ್, ಸೈಯದ್​ಗೆ ಮಗಳು ಸಮಂತಾ ಕ್ರಿಶ್ಚಿಯಾನಳನ್ನು ಕೊಡಲು ಒಪ್ಪಿಗೆಯಾಗಿದ್ದು, ಭೇಟಿಯಾಗುವುದಾಗಿ ಹೇಳಿದ್ದಳು. 2021ರ ಏ.3ರಂದು ದುಬೈನಲ್ಲಿ ಎರಡೂ ಕುಟುಂಬಗಳು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಏ.8ರಂದು ಸಮಂತಾ ಕ್ರಿಶ್ಚಿಯಾನಾ ಕುಟುಂಬ ಬೆಂಗಳೂರಿಗೆ ಬಂದಿತ್ತು. ಜೂ.6ರಂದು ಹೆಗ್ಗನಹಳ್ಳಿ ರೆಸಾರ್ಟ್​ನಲ್ಲಿ ಸೈಯದ್​ ಮತ್ತು ಸಮಂತಾ ಮದುವೆಯಾಗಿತ್ತು.
ಗಂಡನ ಬಿಟ್ಟು ಲಂಡನ್​ಗೆ ಹಾರಿದ್ದ ಪತ್ನಿ:ಮದುವೆಯಾದ ಐದೇ ದಿನಕ್ಕೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿ ಸಮಂತಾ ಕೋಲ್ಕತಾದಲ್ಲಿರುವ ತವರು ಮನೆಗೆ ತೆರಳಿದ್ದರು. ಜೂ.17ರಂದು ಕೋಲ್ಕತಾಗೆ ಹೋಗಿದ್ದ ಪತಿ ಬೆಂಗಳೂರಿಗೆ ಮರಳುವಂತೆ ಪತ್ನಿಯನ್ನು ಕೇಳಿಕೊಂಡಿದ್ದರು. ಆದರೆ, ಆ ಮನವಿ ತಿರಸ್ಕರಿಸಿದ್ದ ಸಮಂತಾ, ತಾಯಿ ಜತೆ ಲಂಡನ್​ಗೆ ತೆರಳಿದ್ದರು. ಅದೇ ವರ್ಷ ನ.14ರಂದು ಕೊಲ್ಕತಾಗೆ ಮರಳಿ ಮದುವೆ ರದ್ದುಪಡಿಸಲು ಕೋರಿದ್ದರು.
ಪತ್ನಿ-ಅತ್ತೆ ವಿರುದ್ಧ ಠಾಣೆ ಮೆಟ್ಟಿಲೇರಿದ ಗಂಡ:2021ರ ನ.11ರಂದು ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ಪತ್ನಿ ಸಮಂತಾ ಮತ್ತು ಆಕೆಯ ತಾಯಿ ವಿರುದ್ಧ ವಂಚನೆ, ಸುಲಿಗೆ, ಕಳವು ಮತ್ತು ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸೈಯದ್​ ದೂರು ನೀಡಿದ್ದರು. ಮದುವೆ ನಂತರ ಸಮಂತಾ ಫೋಟೋಶೂಟ್​ ಮಾಡಿಸುವ ನೆಪದಲ್ಲಿ ನನ್ನ ತಾಯಿಯ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಮನೆಗೆ ವಾಪಸ್​ ಆಗಲಿಲ್ಲ. ಜತೆಗೆ, ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ಆಸ್ತಿ ಖರೀದಿಸುವುದಾಗಿ ಮನವೊಲಿಸಿ ನನ್ನ ಬ್ಯಾಂಕ್​ ಖಾತೆಯಿಂದ 7.5 ಕೋಟಿ ರೂ. ಸಮಂತಾ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಸೈಯದ್​, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. ದೂರು ಆಧರಿಸಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಆರೋಪಿಗಳು ನ.19ರಂದು ಕೋಲ್ಕತಾ ನ್ಯಾಯಾಲಯದಲ್ಲಿ ಜಾಮೀನು (ಟ್ರಾನ್ಸಿಟ್​ ಬೇಲ್​ಗೆ) ಪಡೆದಿದ್ದರು. ಡಿ.23ರಂದು ಪ್ರಕರಣ ರದ್ದುಪಡಿಸುವಂತೆ ಕೋರಿ ತಮ್ಮ ಜಿಪಿಎ ಹಕ್ಕುದಾರ ಗೌತಮ್​ ಗಿರಿ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಸುಲಿಗೆ, ಕಳವು, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ರದ್ದು ಕೋರಿ ತಾಯಿ-ಮಗಳು ತಮ್ಮ ಜನರಲ್​ ಪವರ್​ ಆಫ್​ ಅಟಾರ್ನಿ (ಜಿಪಿಎ) ಪಡೆದವರ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸುವುದಕ್ಕೆ ಅವರು ನ್ಯಾಯಾಲಯದಿಂದ ಯಾವುದೇ ಅನುಮತಿ ಪಡೆದಿಲ್ಲ. ಪ್ರಕರಣದ ವಾಸ್ತವಿಕ ಅಂಶಗಳ ಬಗ್ಗೆ ತಮಗೆ ವೈಯಕ್ತಿಕವಾಗಿ ಅರಿವಿದೆ ಎಂಬುದನ್ನೂ ಅರ್ಜಿಯಲ್ಲಿ ತಿಳಿಸಿಲ್ಲ. ಆದ್ದರಿಂದ, ಅರ್ಜಿ ವಿಚಾರಣೆಗೆ ಮಾನ್ಯತೆ ಹೊಂದಿಲ್ಲ. ಆರೋಪಿಗಳನ್ನು ಜಿಪಿಎ ಹಕ್ಕುದಾರ ಪ್ರತಿನಿಧಿಸಲಾಗದು ಎಂದು ಹೇಳಿರುವ ಹೈಕೋರ್ಟ್​, ಅರ್ಜಿಯನ್ನು ವಜಾ ಮಾಡಿದೆ. ಸತ್ಯಾಂಶ ಮುಚ್ಚಿಡಲು ಯತ್ನಿಸಿದ್ದಕ್ಕೆ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು 4 ವಾರದಲ್ಲಿ ಕರ್ನಾಟಕ ಹೈಕೋರ್ಟ್​ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.
ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಭರತನಾಟ್ಯ ಮೊದಲ ಪ್ರದರ್ಶನದಲ್ಲೇ ಮೋಡಿ ಮಾಡಿದ ಅಂಬಾನಿ ಭಾವಿ ಸೊಸೆ! ಅತ್ತೆಯಂತೆ ಸೊಸೆಯೂ ಉತ್ತಮ ಕಲಾವಿದೆ

ವೈದ್ಯರ ಸಲಹೆ ಮೇರೆಗೆ ಎಚ್​ಡಿಕೆ ವಿಶ್ರಾಂತಿ: ಒಂದು ವಾರ ಸಾರ್ವಜನಿಕರ ಭೇಟಿಗಿಲ್ಲ ಅವಕಾಶ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × 2 =
Remember me
