ರಾಯಚೂರು:ಮದುವೆ ಲಗ್ನ ಪತ್ರಿಕೆಯನ್ನೂ ಹಂಚಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಕಳೆಗಟ್ಟುತಿತ್ತು. ಆದರೆ, ಮದುವೆಗೆ ಇನ್ನೆರಡು ದಿನ ಇರುವಾಗಲೇ ಅಣ್ಣನಿಂದಲೇ ವಧು ಕೊಲೆಯಾಗಿದ್ದಾಳೆ.
ಇಂತಹ ಅಮಾನವೀಯ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಚಂದ್ರಕಲಾ (22) ಮೃತ ದುರ್ದೈವಿ. ಜುಲೈ 13ರಂದು ಈಕೆಯ ಮದುವೆ ನಿಗದಿ ಆಗಿತ್ತು. ಮನೆಯವರು ಸಂಬಂಧಿಕರು, ಪರಿಚಯಸ್ಥರಿಗೆಲ್ಲ ಲಗ್ನ ಪತ್ರಿಕೆಯನ್ನೂ ಹಂಚಿಕೆ ‌ಮಾಡಿದ್ರು. ಇಷ್ಟೆಲ್ಲಾ ಆದ ಮೇಲೆ ಹುಡುಗ ಕಪ್ಪು ‌ಎಂಬ ಕಾರಣಕ್ಕೆ ಯುವತಿ ಮದುವೆ ನಿರಾಕರಿಸಿಬಿಟ್ಟಳು.
ಏಕಾಏಕಿ ತಂಗಿ ಮದುವೆಗೆ ನಿರಾಕರಿಸಿದ್ದನ್ನು ಪ್ರಶ್ನಿಸಿದ ಅಣ್ಣ ಶ್ಯಾಮಸುಂದರ, ಮದುವೆ ಆಗುವಂತೆ ಮನವೊಲಿಸಿದ್ದ. ಯಾವುದೇ ಕಾರಣಕ್ಕೂ ಮದುವೆ ಆಗುವುದಿಲ್ಲ. ಹುಡುಗ ಕಪ್ಪಗಿದ್ದಾನೆ ಎಂದು ಚಂದ್ರಕಲಾ ಪಟ್ಟು ಹಿಡಿದಿದ್ದಳು. ಈ ವೇಳೆ ಮಾತಿಗೆ ಮಾತು ಬೆಳದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಅಣ್ಣ ಮನೆಯಲ್ಲಿದ್ದ ಕೊಡಲಿಯಿಂದ ತಂಗಿಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಚಂದ್ರಕಲಾಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗಬ್ಬೂರು ಠಾಣೆ ಪೊಲೀಸರು ಆರೋಪಿ‌ ಶ್ಯಾಮಸುಂದರನನ್ನು ಬಂಧಿಸಿದ್ದಾರೆ.
ಬೆಳ್ಳಂಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ! ಮಾರ್ಗದಲ್ಲೇ ಬಿಸಿ ಮುಟ್ಟಿಸಿದ ಪೊಲೀಸರು

ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
