ಮೈಸೂರು:ಇನ್ಮುಂದೆ ಕರೊನಾ ಸೋಂಕಿತರ ಮನೆ ಮುಂದೆ ‘ಕೋವಿಡ್​-19’ ಎಂದು ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬರೆದ ಅಕ್ಷರವುಳ್ಳ ಬಿಳಿ ಬಾವುಟ ಇರಲಿದೆ. ಇದನ್ನು ಆ ಮನೆಯವರು ತೆಗೆಯುವಂತಿಲ್ಲ. ಅಪ್ಪಿತಪ್ಪಿ ತೆಗೆದರೆ ಅವರ ವಿರುದ್ಧ ಎಫ್​ಐಆರ್ ದಾಖಲಾಗುತ್ತೆ!
ತಮ್ಮ ಮನೆಯಲ್ಲಿ ಸೋಂಕಿತರಿದ್ದರೂ ತರಕಾರಿ, ದಿನಬಳಕೆ ವಸ್ತುಗಳ ಖರೀದಿಗೆ ಕುಟುಂಬಸ್ಥರು ಹೊರಗಡೆ ಓಡಾಡುತ್ತಾರೆ. ಪಕ್ಕದ ಮನೆಯವರಿಗೂ ಗೊತ್ತಾಗದಂತೆ ಸೋಂಕಿತರು ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದಾರೆ. ಪರಿಣಾಣ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಮನೆ ಮುಂದೆ ವಾರ್ಡ್‌ವಾರು ಟಾಸ್ಕ್ ಫೋರ್ಸ್ ಟೀಂ ಬಾವುಟ ಹಾಕಲಿದೆ. ಆಗ ಸೋಂಕಿತರ ಮನೆ ಗುರುತಿಸೋದು ಸುಲಭ. ಹಾಗೂ ಅಕ್ಕಪಕ್ಕದ ನಿವಾಸಿಗಳೂ ಜಾಗ್ರತೆ ವಹಿಸಲಿದ್ದಾರೆ. 14 ದಿನಗಳ ಬಳಿಕ ಸ್ವಯಂ ವಾರ್ಡ್‌ವಾರು ಟಾಸ್ಕ್ ಫೋರ್ಸ್ ಟೀಂ ಬಂದು ಆ ಬಾವುಟವನ್ನು ತೆರವು ಮಾಡಲಿದೆ.
ಇಂತಹ ವಿನೂತನ ಪ್ರಯತ್ನ ಮೈಸೂರಿನಲ್ಲಿ ಜಾರಿಯಾಗಿದೆ. ರಾಜಾರಾಮ ಅಗ್ರಹಾರದಲ್ಲಿ ಸೋಂಕಿತರ ಮನೆ ಮುಂದೆ ಕೋವಿಡ್​ ಬಾವುಟ ಕಟ್ಟುವ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಇಂದು(ಶನಿವಾರ) ಚಾಲನೆ ನೀಡಿದರು.

ಜತೆಗೆ ಕರೊನಾ ಸೋಂಕಿತರ ಮನೆಗೆ ಅರಿಶಣ, ಟೆಪ್ರೇಚರ್​ ಅಳೆಯುವ ಮಾಪಕ, ವಿಟಮಿನ್​ ಮಾತ್ರೆಗಳುಳ್ಳ ಕಿಟ್​ ಅನ್ನು ರಾಮದಾಸ್​ ವಿತರಿಸಿ ಕರೊನಾ ನಿಯಮ ಪಾಳಿಸುಂತೆ ಮನವಿ ಮಾಡಿದರು. ಏರಿಯಾಕ್ಕೆ ಸ್ಯಾನಿಟೈಸ್​ ಮಾಡಲಾಯಿತು.(ದಿಗ್ವಿಜಯ ನ್ಯೂಸ್)
ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಮಂಡ್ಯ ಜೆಡಿಎಸ್​ ಶಾಸಕರ ವಿರುದ್ಧ ಸಿಡಿದೆದ್ದ ಸುಮಲತಾ

ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
