ಬೆಂಗಳೂರು:ಶಕ್ತಿಸೌಧದಲ್ಲಿ ಸಚಿವ ಈಶ್ವರಪ್ಪ ವಿರದ್ಧ ಕಾಂಗ್ರೆಸ್​ ಅಹೋರಾತ್ರಿ ಧರಣಿ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆಯೇ ಕೊತ್ವಾಲ್​ಪುರ ಮತ್ತು ಕೊತ್ವಾಲ್​ ರಾಮಚಂದ್ರನ ಶಿಷ್ಯರು… ಪದವೂ ಸದ್ದು ಮಾಡುತ್ತಿದೆ.
ಕೊತ್ವಾಲ್ ರಾಮಚಂದ್ರನ ಶಿಷ್ಯರು ಕಾಂಗ್ರೆಸ್​ನಲ್ಲಿದ್ದಾರೆ ಎಂಬ ಹೇಳಿಕೆ ರಾಜಕೀಯ ದುರುದ್ದೇಶದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಗರಂ ಆದರು. ವಿಧಾನಸೌಧ ಮೊಗಸಾಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾನು ಕಾಂಗ್ರೆಸ್​ಗೆ ಬಂದು 40 ವರ್ಷ ಆಗಿದೆ. ಕೊತ್ವಾಲ್ ರಾಮಚಂದ್ರ ತೀರಿಕೊಂಡು 40 ವರ್ಷಗಳಾಗಿವೆ. ಕೊತ್ವಾಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಅವರ ಶಿಷ್ಯಂದಿರೇ ಬಿಜೆಪಿಯಲ್ಲಿದ್ದಾರೆ. ಈ ಹಿಂದೆ ಗಡಿಪಾರಾಗಿದ್ದವರು ಈಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದಾರೆ. ಸಿ.ಟಿ.ರವಿಗೆ ಧೈರ್ಯವಿದ್ದರೆ ಅವರ ಬಗ್ಗೆ ಮಾತಾಡಲಿ ಎಂದು ಕೆಣಕಿದರು.
ಗುರುವಾರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್​ ಅವರು ರಾಷ್ಟ್ರದ ಇತಿಹಾಸ, ಪ್ರಸ್ತುತ ವಿದ್ಯಮಾನ ಪ್ರಸ್ತಾಪಿಸುತ್ತಾ ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯ ಪದ ಪ್ರಯೋಗ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆಯನೂರು ಮಂಜುನಾಥ್​, ಪ್ರಚೋದನಕಾರಿ ಮಾತು ನಮಗೂ ಬರುತ್ತೆ. ಬುಧವಾರ ನೀವು ಹಾವಿನಪುರವೆಂದಿರಿ, ನಾನು ಕೊತ್ವಾಲ್​ಪುರ ಎನ್ನಬಲ್ಲೇ ಎನ್ನುತ್ತಿದ್ದಂತೆ ಕೈ ಸದಸ್ಯರು ಏಕಕಾಲಕ್ಕೆ ಎದ್ದು ನಿಂತು ಆಕ್ಷೇಪಿಸಿದ್ದರು. ಹರಿಪ್ರಸಾದ್​ ಮತ್ತು ಆಯನೂರು ಮಂಜುನಾಥ್​ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತ್ತು.
“ಕೊತ್ವಾಲ್​ಪುರದ ಶಿಷ್ಯ, ಚಮಚಾಗಿರಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡವನಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ” ಎಂದು ಆಯನೂರು ಏರಿದ ಧ್ವನಿಯಲ್ಲಿ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ”ಕೊತ್ವಾಲ್​ಪುರ ಬೆಳೆಯುವುದಕ್ಕೆ ಶಿವಮೊಗ್ಗದವರೇ ಕಾರಣ” ಎಂದು ದೂರಿದ್ದರು. ಈ ಹಿಂದೆ ಹಲವು ಬಾರಿ ಸಿ.ಟಿ.ರವಿ, ”ನಾನು ಕೊತ್ವಾಲ್​ ಚೇಲಾ ಅಲ್ಲ” ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು.
ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 4 =
Remember me
