ಬೆಂಗಳೂರು:ಯುವತಿಯೊಬ್ಬಳು ನನ್ನ ಗಂಡನ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆಯೊಬ್ಬಳು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಜಾಲತಾಣದಲ್ಲೇ ಆಕೆ ಮತ್ತು ಯುವತಿ ಕಿತ್ತಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋವೊಂದು ವೈರಲ್​ ಆಗಿದೆ.
ರಾಧಿಕಾ ಎಂಬಾಕೆಗೆ ರಾಮ್​ ಎಂಬಾತನ ಜತೆ ಕೆಲ ವರ್ಷಗಳ ಹಿಂದೆಯೇ ಮದುವೆ ಆಗಿದೆ. ದಂಪತಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ. ಈ ನಡುವೆ ಪತ್ನಿ ಇದ್ದರೂ ರಾಮ್, ಪ್ರತೀಕಾಳನ್ನು ಪ್ರೀತಿಸುತ್ತಿದ್ದನಂತೆ. ಇದೇ ವಿಚಾರವಾಗಿ ರಾಧಿಕಾ ಮನೆಯಲ್ಲಿ ಜಗಳ ಮಾಡಿದ್ದಳು. ಅಷ್ಟೇ ಅಲ್ಲ, ಪ್ರತೀಕಾ ಮತ್ತು ರಾಧಿಕಾ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು. ಇಷ್ಟೆಲ್ಲಾ ಆದ ಮೇಲೂ ರಾಮ್​ ಕರೆದನೆಂದು ಆತನ ಮನೆಗೆ ಪ್ರತೀಕಾ ಬಂದಿದ್ದು, ಈ ವೇಳೆ ಸಿಟ್ಟಿಗೆದ್ದ ರಾಮ್​, ಪ್ರತಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ರಾಧಿಕಾಳ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆ ಜಾಲತಾಣದಲ್ಲೇ ರಾಧಿಕಾ v/s ಪ್ರತಿಕಾ ನಡುವೆ ಸಮರ ಶುರುವಾಗಿದೆ. ಗಂಡನ ಅಕ್ರಮ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೇ ಪತ್ನಿ ಚರ್ಚೆ ಮಾಡಿದ್ದಾಳೆ. ಮಾತಿಗೆ ಮಾತು ಎಂಬಂತೆ ರಾಧಿಕಾ-ಪ್ರತೀಕಾ ನಡುವೆ ವಾರ್​ ನಡೆದಿದೆ. ‘ಇದು ಫೇಕ್ ವಿಡಿಯೋ, ಯಾರೂ ನಂಬಬೇಡಿ’ ಎಂದು ಪ್ರತೀಕಾ ಕಮೆಂಟ್ ಮಾಡುತ್ತಿದ್ದಂತೆ, ‘ಇದು ನಿಜವಾದ ವಿಡಿಯೋ. ನನ್ನ ಗಂಡನ ಜತೆ ಪ್ರತೀಕಾ ಸಂಬಂಧ ಹೊಂದಿದ್ದಾಳೆ’ ಎಂದು ರಾಧಿಕಾ ಪ್ರತಿಕ್ರಿಯಿಸಿದ್ದಾಳೆ. ಸದ್ಯ ಇವರಿಬ್ಬರ ಚರ್ಚೆ ಫೇಸ್​ಬುಕ್​ನಲ್ಲಿ ಸಖತ್​ ವೈರಲ್​ ಆಗ್ತಿದೆ.
ಪರಪುರುಷನೊಂದಿಗೆ ಓಡಿಹೋದ ಪತ್ನಿ! ಸತ್ವ ಪರೀಕ್ಷೆ ನೆಪದಲ್ಲಿ ಅತ್ತೆ-ಮಾವನಿಗೆ ಮಾಡಬಾರದ್ದು ಮಾಡಿಬಿಟ್ಟ ಅಳಿಯ

ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
