ತಿಪಟೂರು:ನಿನ್ನೊಂದಿಗೆ ಬಾಳೋಕೆ ಆಗ್ತಿಲ್ಲ, ನನಗೆ ವಿಚ್ಛೇದನ ಬೇಕು ಎಂದ ಪತ್ನಿ ಮಾತಿಗೆ ಮನನೊಂದ ಗಂಡ ನಗರ ಸಮೀಪದ ಮಡೇನೂರು ಬೋವಿ ಕಾಲನಿಯ ಅಯ್ಯನಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.
ಅರಸೀಕೆರೆ ತಾಲೂಕು ನಾರಾಯಣಘಟ್ಟಿಹಳ್ಳಿ ನಿವಾಸಿ ಗಂಗಾಧರ್ (39) ಮೃತ ದುರ್ದೈವಿ. ಈತನಿಗೆ 17 ವರ್ಷದ ಹಿಂದೆ ತುರುವೇಕೆರೆ ತಾಲೂಕು ಅರೇಮಲ್ಲೇನಹಳ್ಳಿ ನಿವಾಸಿ ಅನಿತಾ ಎಂಬಾಕೆ ಜತೆ ಮದುವೆ ಆಗಿತ್ತು. ಕೌಟುಂಬಿಕ ಕಲಹದಿಂದ ಪತಿಯನ್ನು ತೊರೆದಿದ್ದ ಅನಿತಾ, 7 ವರ್ಷದ ಹಿಂದೆಯೇ ತವರು ಸೇರಿದ್ದಳು. ಮಗಜ ಜತೆ ವಾಸವಿದ್ದ ಗಂಗಾಧರ್, ಹೋಂ ಗಾರ್ಡ್ ಕೆಲಸ ಮಾಡಿಕೊಂಡು ನಾರಾಯಣಘಟ್ಟಿಹಳ್ಳಿಯಲ್ಲಿ ವಾಸವಾಗಿದ್ದ.
ಈ ನಡುವೆ ಪತ್ನಿ ತುರುವೇಕೆರೆ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿ ಇತ್ತು. ಪತ್ನಿ ದೂರಾವಾಗುತ್ತಾಳೆ ಎಂದು ಮನನೊಂದ ಗಂಗಾಧರ್, ತಿಪಟೂರಿನ ಬೋವಿ ಕಾಲನಿಯಲ್ಲಿರುವ ತನ್ನ ಅಕ್ಕ ಗಂಗಮ್ಮನ ಮನೆಗೆ ಗುರುವಾರ ಬಂದಿದ್ದ. ಈ ವೇಳೆ ಸಮೀಪದ ಅಯ್ಯನಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣೆ ಎಸ್​ಐ ಕೃಷ್ಣಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eight =
Remember me
