ಬೆಂಗಳೂರು:ಮದ್ವೆ ಆಗಿ 8 ವರ್ಷದ ಆಗಿದೆ. ದಂಪತಿಗೆ ಮೂವರು ಮಕ್ಕಳು ಜನಿಸಿವೆ. ಇಷ್ಟೆಲ್ಲಾ ಆಗುವವರೆಗೂ ಸುಮ್ಮನಿದ್ದ ಗಂಡ, ಇತ್ತೀಚಿಗೆ ‘ನೀನು ಕಪ್ಪಗಿದ್ದೀಯಾ, ಸುಂದರವಾಗಿಲ್ಲ…’ ಎಂದು ಪತ್ನಿಗೆ ಕೊಟ್ಟಿದ್ದಾನೆ. ಮಗನ ವಿಕೃತ ಮನಸ್ಥಿತಿಗೆ ಸಾಥ್ ಕೊಟ್ಟ ಆತನ ತಾಯಿಯೂ ಸೊಸೆಗೆ ಹಿಂಸಿಸಿದ್ದಾಳೆ. ಅಷ್ಟೇ ಅಲ್ಲ, ಆಕೆ ಹೆತ್ತ ಮೂರು ಮಕ್ಕಳನ್ನೂ ಮುಟ್ಟಲು ಗಂಡ ಬಿಡುತ್ತಿರಲಿಲ್ಲವಂತೆ. ಗಂಡನ ನಡೆಗೆ ಮನನೊಂದ ಪತ್ನಿ, ಮನೆಯಲ್ಲೇ ಮುಖ ಮತ್ತು ಮೈ ಮೇಲೆ ಸಾನಿಟೈಸರ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ದುರಂತ ಅಂತ್ಯ ಕಂಡಿದ್ದಾಳೆ.
ಇಂತಹ ಅಮಾನವೀಯ ಘಟನೆ ರಾಜ್ಯರಾಜಧಾನಿ ಬೆಂಗಳೂರಲ್ಲಿ ಸಂಭವಿಸಿದೆ. ಆರ್​.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯ ನಿವಾಸಿ ಶಾಜಿಯಾ ಬಾನು ಮೃತ ದುರ್ದೈವಿ. ಏಪ್ರಿಲ್ 20ರಂದು ಮನೆಯಲ್ಲೇ ಸಾನಿಟೈಸರ್​ ಸುರಿದುಕೊಂಡು ಶಾಜಿಯಾ ಬೆಂಕಿ ಹಚ್ಚಿಕೊಂಡಿದ್ದಳು. ಸುಟ್ಟ ಗಾಯದಿಂದ ಬಳಲುತ್ತಿದ್ದ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ (ಮೇ 10) ಕೊನೆಯುಸಿರೆಳೆದಿದ್ದಾಳೆ.
‘ನನ್ನ ಮಗಳು ಕಪ್ಪಗಿದ್ದಳೆಂದು ಆಕೆಯ ಗಂಡ ಇಮ್ರಾನ್ ಖಾನ್​ ಮತ್ತು ಅತ್ತೆ ಇಬ್ಬರೂ ಸೇರಿಕೊಂಡು ಕಿರುಕುಳ ಕೊಟ್ಟು ಸಾಯುವಂತೆ ಮಾಡಿದ್ದಾರೆ. ತಾನು ಹೆತ್ತ ಮಕ್ಕಳನ್ನೇ ಮುಟ್ಟಲು ಗಂಡ-ಅತ್ತೆ ಇಬ್ಬರೂ ಆಕೆಗೆ ಬಿಡುತ್ತಿರಲಿಲ್ಲ. ಇವರ ಕಿರುಕುಳಕ್ಕೆ ಮಗಳು ಶಾಜಿಯಾ ತುಂಬಾ ನೊಂದಿದ್ದಳು. ಆಕೆಯ ಸಾವಿಗೆ ಗಂಡ-ಅತ್ತೆಯೇ ಕಾರಣ’ ಎಂದು ಮೃತಳ ಪೋಷಕರು ದೂರಿದ್ದಾರೆ. ಆರ್​ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಡರಾತ್ರಿ ಬೈಕ್​ನಲ್ಲಿ ಮಹಿಳೆ ಶವ ಸಾಗಿಸುವಾಗ ರಾಮನಗರ ಡಿಸಿ ಕಚೇರಿ ಎದುರೇ ಅಪಘಾತ! ಬಯಲಾಯ್ತು ಗಂಡ-ಹೆಂಡ್ತಿ ರಹಸ್ಯ

PSI ಹುದ್ದೆಗೆ ಆಯ್ಕೆಯಾಗಿದ್ದ ತಮ್ಮನ ಬಂಧನ ಬೆನ್ನಲ್ಲೇ ಅಣ್ಣ ಆತ್ಮಹತ್ಯೆ! ಸಾವಿನ ಸುತ್ತ ಅನುಮಾನದ ಹುತ್ತ

ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ತಂದೆಯ ಮೇಣದ ಪ್ರತಿಮೆ ಮುಂದೆ ಮದ್ವೆ ಶಾಸ್ತ್ರಕ್ಕೆ ಕುಳಿತ ವರ! ಕರೊನಾದಿಂದ ಮೃತಪಟ್ಟಿದ್ದ ತಂದೆ, ಭಾವುಕ ಕ್ಷಣದ ಫೋಟೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
