ದೊಡ್ಡಬಳ್ಳಾಪುರ:ಒಂದೆಡೆ ಪತ್ನಿ ನಾಪತ್ತೆಯಾಗಿದ್ದರೆ, ಮತ್ತೊಂದೆಡೆ ಗಂಡನ ಫೇಸ್​ಬುಕ್​ನಲ್ಲಿ ಆಕೆಯ ಫೋಟೋ ಹಾಕಿ ಶ್ರದ್ಧಾಂಜಲಿ ಕೋರಿರುವ ವಿಚಿತ್ರ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಲ್ಲಿ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕು ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಎಂಬಾತನ ಪತ್ನಿ ಲೀಲಾವತಿ (22) ನಾಪತ್ತೆಯಾಗಿದ್ದು, ಈಕೆಯ ಪಾಲಕರು ಅಳಿಯನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಆದರೆ, ಮೊಬೈಲ್​ ಟವರ್​ ಲೊಕೇಶನ್​ ತಿರುಪತಿಯಲ್ಲಿರುವ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?:ಫೆ.23ರ ರಾತ್ರಿ ಮುನಿಕೃಷ್ಣ ತನ್ನ ತಂಗಿ ಮಗನ ಹುಟ್ಟುಹಬ್ಬ ಸಮಾರಂಭಕ್ಕೆ ಹೋಗಿದ್ದ, ಇದೇ ವಿಚಾರಕ್ಕೆ ಲೀಲಾವತಿ ಪತಿಯ ಜತೆ ಜಗಳ ಮಾಡಿದ್ದಳು. ಈ ವೇಳೆ ಮುನಿಕೃಷ್ಣ, ಪತ್ನಿ ಮೇಲೆ ಕೈ ಮಾಡಿದ್ದ ಎನ್ನಲಾಗಿದೆ. ಮರುದಿನ ಫೇಸ್​ಬುಕ್​ನಲ್ಲಿ ಪತ್ನಿ ಫೋಟೋ ಹಾಕಿ ಶ್ರದ್ಧಾಂಜಲಿ ಎಂದು ಪೋಸ್ಟ್​ ಮಾಡಿದ್ದ. ಇದನ್ನು ಗಮನಿಸಿ ಭಯಗೊಂಡ ಲೀಲಾವತಿ ಪಾಲಕರು, ಮಗಳನ್ನು ನೋಡಲು ಬಂದರೆ ಲೀಲಾವತಿ ಅಲ್ಲಿ ಇರಲಿಲ್ಲ. ನನ್ನ ಮಗಳನ್ನು ಅಳಿಯ ಕೊಲೆ ಮಾಡಿದ್ದಾನೆ ಎಂದು ದೊಡ್ಡಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹುಟ್ಟುಹಬ್ಬಕ್ಕೆ ಹೋಗಿದ್ದ ವಿಚಾರಕ್ಕೆ ಅಣ್ಣ-ಅತ್ತಿಗೆ ಜಗಳವಾಡಿದ್ದರು. ಮಾರನೇ ದಿನ ಬೆಳಗ್ಗೆ ಅತ್ತಿಗೆ ಬ್ಯಾಗ್​ ತೆಗೆದುಕೊಂಡು ಮನೆ ಬಿಟ್ಟು ಹೋದರು. ಅಣ್ಣನ ಮೊಬೈಲ್​ ಆಕೆಯ ಬಳಿಯೇ ಇದೆ, ಅತ್ತಿಗೆಯೇ ಅಣ್ಣನ ಫೇಸ್​ಬುಕ್​ ಅಕೌಂಟ್​ನಲ್ಲಿ ಫೋಟೋ ಹಾಕಿ ಶ್ರದ್ಧಾಂಜಲಿ ಪೋಸ್ಟ್​ ಮಾಡಿದ್ದಾರೆ ಎಂದು ಮುನಿಕೃಷ್ಣನ ಸಹೋದರ ಮುನಿರಾಜು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾನೆ.
ತನಿಖೆ ಆರಂಭಿಸಿರುವ ಮಹಿಳಾ ಪೊಲೀಸರಿಗೆ ನಾಪತ್ತೆಯಾಗಿರುವ ಮೊಬೈಲ್​ ಲೊಕೇಷನ್​ ತಿರುಪತಿಯಲ್ಲಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ರಾತ್ರೋರಾತ್ರಿ ಬಿಡದಿಯಲ್ಲಿ ಕಾಂಗ್ರೆಸ್​ ಮುಖಂಡನ ಭೀಕರ ಕೊಲೆ

ತಗೊಂಡಿದ್ದು 10 ಸಾವಿರ, ಕಟ್ಟಿದ್ದು 7 ಲಕ್ಷ ರೂ.! ಆನ್​ಲೈನ್​ ಆ್ಯಪ್​ನಲ್ಲಿ ಸಾಲ ಪಡೆದವನಿಗೆ ಬಂದ ಕಷ್ಟ ಅಷ್ಟಿಷ್ಟಲ್ಲ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten + eighteen =
Remember me
