ಶಿವಮೊಗ್ಗ:ಎರಡೂವರೆ ಲಕ್ಷ ರೂ. ಎಲ್ಲಿ ಹೋಯ್ತು ಎಂಬುದೂ ಗೊತ್ತಿಲ್ಲ… ತರಕಾರಿ ತರುತ್ತೇನೆ ಎಂದು ಹೋದ ಪತ್ನಿಯೂ ನಾಪತ್ತೆಯಾಗಿದ್ದಾಳೆ. ಅವಳಿಗಾಗಿ ನಾಲ್ಕು ದಿನ ದಾರಿಯಲ್ಲೇ ಕಾದರೂ ಆಕೆ ಬರ್ಲಿಲ್ಲ… ಪ್ಲೀಸ್​ ಸರ್​ ನನ್ನ ಹೆಂಡ್ತಿಯನ್ನ ಹುಡುಕಿಕೊಡಿ… ಎಂದು ವ್ಯಕ್ತಿಯೊಬ್ಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.
ಇಂತಹ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ಶಿವಮೊಗ್ಗ ತಾಲೂಕು ಕಡೇಕಲ್‌ನ ಕೋಳಿ ವ್ಯಾಪಾರಿ ಲಷ್ಕರ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೊಹಲ್ಲಾದ ಕೋಳಿ ಫಾರ್ಮ್ ಮಾಲೀಕರೊಂದಿಗೆ ಲಷ್ಕರ್​ ವ್ಯವಹರಿಸುತ್ತಿದ್ದ. ಕೋಳಿ ಖರೀದಿ ಸಂಬಂಧ ಪಾರಂ ಮಾಲೀಕರಿಗೆ ಹಣ ನೀಡಲು ಪತ್ನಿಯೊಂದಿಗೆ ಮೊಹಲ್ಲಾಗೆ ಲಷ್ಕರ್ ಆಗಮಿಸಿದ್ದ. ಆ ವೇಳೆ ಮನೆಗೆ ತರಕಾರಿ ಬೇಕು. ಖರೀದಿ ಮಾಡಿಕೊಂಡು ಬರತ್ತೇನೆ. ಕೋಳಿ ಫಾರ್ಮ್​ ಮಾಲೀಕರಿಗೆ ಹಣ ತಲುಪಿಸಿ ಬನ್ನಿ ಎಂದು ಗಂಡನಿಗೆ ಹೇಳಿ ಪತ್ನಿ ಹೊರಟಿದ್ದಾಳೆ. ಲಷ್ಕರ್​ ತಂದ ಬ್ಯಾಗ್​ನಲ್ಲಿ ಆರು ಲಕ್ಷ ರೂ. ಇರಬೇಕಿತ್ತು. ಆದರೆ. ಬ್ಯಾಗ್ ತೆರೆದಾಗ ಅದರಲ್ಲಿ ಇದ್ದದ್ದು ಮೂರೂವರೆ ಲಕ್ಷ ರೂ. ಮಾತ್ರ! ಇನ್ನೂ ಎರಡೂವರೆ ಲಕ್ಷ ಹಣ ಎಲ್ಲಿ ಹೋಯ್ತು? ಎಂದು ತಿಳಿಯದೆ ಕಂಗಾಲದ ಲಷ್ಕರ್​, ಪತ್ನಿಗೆ ಕರೆ ಮಾಡಿದ್ದಾನೆ. ಹೌದಾ? ಹಾಗಾದ್ರೆ ಹಣ ಕಳೆದು ಹೋಗಿರಬೇಕು. ಹುಡುಕಿಕೊಂಡು ಬರುತ್ತೇನೆ ಎಂದು ಕರೆ ಸ್ಥಗಿತಗೊಳಿಸಿದ ಪತ್ನಿ, ಐದು ದಿನ ಕಳೆದರೂ ವಾಪಸ್ ಬಂದಿಲ್ಲ.
ನಾಲ್ಕು ದಿನಗಳಿಂದ ಹೆಂಡತಿ ಮರಳಿ ಬರುತ್ತಾಳೆ ಎಂದು ಅವಳ ದಾರಿ ಕಾದು ಕಾದು ಸುಸ್ತಾದ ಆತ ಪತಿರಾಯ, ಈಗ ಪತ್ನಿಯ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಕಳೆದು ಹೋಗಿರುವ ದುಡ್ಡನ್ನು ಹುಡುಕಿಕೊಂಡು ಬರುತ್ತೇನೆ ಎಂದು ಪತಿಗೆ ಹೇಳಿ ಹೋದ ಪತ್ನಿ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಪತ್ನಿಯೇ ಹಣ ತೆಗೆದುಕೊಂಡು ಹೋಗಿರಬಹುದು ಎಂಬ ಅನುಮಾನ ಮೂಡಿದೆ.
ಮೈಸೂರಲ್ಲಿ ವಿಕೃತ ಕಾಮಿ: ಈತನ ಗಾಳಕ್ಕೆ ಬಿದ್ದ ಯುವತಿಯರ ಪಾಡು ಹೇಳತೀರದು… ಮೊಬೈಲ್​ ನೋಡಿ ಬೆಚ್ಚಿಬಿದ್ದ ಪೊಲೀಸರು

‘ಫ್ಯಾಟ್’ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! ಆಪರೇಷನ್​ ವೇಳೆ ನಡೆಯಿತು ದುರಂತ, ಸತ್ತ ಮೇಲೂ ಬಿಲ್​ ಕೇಳಿದ ಆಸ್ಪತ್ರೆ

ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eleven =
Remember me
