ವಿಜಯಪುರ:ರಾಜ್ಯಾದ್ಯಾಂತ ಎಸ್ಸೆಸ್ಸೆಲ್ಸಿ ಎಕ್ಸಾಂ ಆರಂಭಗೊಂಡಿದೆ. ಇತ್ತ ಯಾರೋ ಕಿಡಿಗೇಡಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬನ ಫೊಟೋ ಇಟ್ಟು ವಾಮಾಚಾರ ಮಾಡಿದ್ದಾರೆ. ಈ ದೃಶ್ಯ ಕಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇಂತಹ ಭಯಾನಕ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ 1ರಲ್ಲಿ ನಡೆದಿದೆ. ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬದಿಯಲ್ಲಿ ಸಚಿನ್ ನಾಯಕ ಎಂಬ ವಿದ್ಯಾರ್ಥಿಯ ಫೋಟೋ ಪ್ರೇಮ್​ ಮಾಡಿಸಿ ಅದರಲ್ಲಿ ದಿವಂಗತ ಎಂಬ ಹೆಸರನ್ನೂ ಹಾಕಿಸಿದ್ದಾರೆ. ಆ ಫೋಟೋಗೆ ಹೂವಿನಹಾರ ಹಾಕಿ, ತೆಂಗಿನಕಾಯಿ ಒಡೆದು, ಕುಡಿಕೆ, ಅರಿಶಿಣ-ಕುಂಕುಮ ಇಟ್ಟು, ಎಕ್ಸಾಂ ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ತಿಥಿಯ ಮಾದರಿಯಲ್ಲಿ ಪೂಜೆ ಮಾಡಿದ್ದಾರೆ. ಜತೆಗೆ ಗೊಂಬೆಯನ್ನೂ ಇಟ್ಟಿದ್ದಾರೆ. ವಾಮಾಚಾರದ ಕುರುಹು ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಅತ್ತ ಭಯದಲ್ಲೇ ವಿದ್ಯಾರ್ಥಿ ಸಚಿನ್ ನಾಯಕ ಪರೀಕ್ಷೆಗೆ ಬರೆಯಲು ಹೋಗಿದ್ದಾನೆ.
ಸಚಿನ್​ನ ಪೋಷಕರು ಕೂಡ ಆತಂಕಗೊಂಡಿದ್ದಾರೆ. ಬಾಳಿ-ಬದುಕಬೇಕಾದ ಮಗನ ಬಾಳಲ್ಲಿ ಯಾಕೆ ಆಟವಾಡುತ್ತಿದ್ದಾರೆ. ನಮ್ಮ ಮಗ ಜೀವಂತವಾಗಿದ್ದರೂ ಫೋಟೋ ಇಟ್ಟು ತಿಥಿ ಮಾಡಿದ್ದಾರೆ. ವಾಮಾಚಾರ ಮಾಡಿದ್ದಾರೆ. ನಮಗೆ ತುಂಬಾ ಭಯವಾಗ್ತಿದೆ. ಇದನ್ನ ನೋಡಿದ ನಮ್ಮ ಮಗ ಮಾನಸಿಕವಾಗಿ ಕುಗ್ಗಿ ಹೋಗ್ತಿದ್ದಾನೆ. ಪೊಲೀಸರು ದುಷ್ಕರ್ಮಿಗಳನ್ನ ಪತ್ತೆ ಮಾಡಿ ತಕ್ಕ ಶಿಕ್ಷೆ ಕೊಡಬೇಕು ಎಂದು ವಿದ್ಯಾರ್ಥಿಯ ಪೋಷಕರು ಮನವಿ ಮಾಡಿದ್ದಾರೆ.
ಸಾವಲ್ಲೂ ಪತ್ನಿಯನ್ನು ಹಿಂಬಾಲಿಸಿದ ಪತಿ: ಮೈಸೂರಿನ ದಂಪತಿಯ ಸ್ಟೋರಿ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ

ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
