ಬೆಂಗಳೂರು ಗ್ರಾಮಾಂತರ:ಹತ್ತು ದಿನದ ಹಿಂದಷ್ಟೇ ಬಾಡಿಗೆ ಮನೆಗೆ ಬಂದಿದ್ದ ದಂಪತಿ ಅದೇ ಮನೆಯಲ್ಲಿ ದುರಂತ ಅಂತ್ಯ ಕಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ.
ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆ ನಾರಾಯಣಾಚಾರ್​ ಬಡಾವಣೆಯಲ್ಲಿ ಬಾಡಿಗೆ ಮನೆಗೆ ಜ್ಯೋತಿ ಮತ್ತು ಬಸವರಾಜ್​ 10 ದಿನದ ಹಿಂದಷ್ಟೇ ಬಂದಿದ್ದರು. ಮನೆ ಮಾಲೀಕಗೆ ತಾವಿಬ್ಬರೂ ದಂಪತಿ ಎಂದು ಹೇಳಿಕೊಂಡಿದ್ದರು. ವಾರದ ಬಳಿಕ ಇಬ್ಬರೂ ಒಂದೇ ಸೀರೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಭಯಾನಕ ರಹಸ್ಯ ಬಯಲಾಗಿದೆ.
ದಂಪತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಹಿಡಿದಿದ್ದ ಇವರದು ಅಕ್ರಮ ಸಂಬಂಧ ಎನ್ನಲಾಗಿದ್ದು, ಈ ಬಗ್ಗೆ ಎರಡೂ ಮನೆಯವರ ವಿರೋಧ ಎದುರಾಗಿದ್ದರಿಂದ ನೇಣಿಗೆ ಶರಣಾಗಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಮನೆ ಬಿಟ್ಟು ಬಂದು ಶವವಾದರು:ಈಗಾಗಲೇ ಬೇರೊಬ್ಬನೊಂದಿಗೆ ಮದುವೆ ಆಗಿರುವ 26 ವರ್ಷದ ಜ್ಯೋತಿಯೊಂದಿಗೆ ಟ್ಯಾಕ್ಸಿ ಚಾಲಕನಾಗಿದ್ದ 23 ವರ್ಷದ ಯುವಕ ಬಸವರಾಜು ಸಲುಗೆ ಬೆಳೆಸಿಕೊಂಡಿದ್ದ, ಸಲುಗೆ ತೀರ ಅನ್ಯೋನ್ಯತೆಗೆ ತಿರುಗಿ ಸಹಜೀವನ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಬಿಟ್ಟು ಬಂದು ದೇವನಹಳ್ಳಿಯಲ್ಲಿ ದಂಪತಿ ಎಂದು ಹೇಳಿಕೊಂಡು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. 10 ದಿನದಲ್ಲಿ ಇಹಲೋಕ ತ್ಯಜಿಸಲು ನಿರ್ಧರಿಸಿ ಇಬ್ಬರು ಒಂದೇ ಸೀರೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಯಚೂರಿನ ಪ್ರೀತಿ:ರಾಯಚೂರು ಮೂಲದ ಜ್ಯೋತಿಗೆ ಕಲಬುರಗಿಯ ರಾಮು ಎಂಬಾತನ ಜತೆ 6 ವರ್ಷದ ಹಿಂದೆ ಮದುವೆ ಆಗಿತ್ತು. ಬಳಿಕ ಉದ್ಯೋಗ ಹುಡುಕಿಕೊಂಡು ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮದುವೆಯಾಗಿ 6 ವರ್ಷವಾದರೂ ಮಕ್ಕಳಿರಲಿಲ್ಲ ಎಂಬ ಕಾರಣಕ್ಕೆ ಆಗಾಗ ಮನೆಯಲ್ಲಿ ಕಲಹವಾಗುತ್ತಿತ್ತು ಎನ್ನಲಾಗಿದೆ. ಏತನ್ಮಧ್ಯೆ ರಾಯಚೂರು ಮೂಲದ ಬಸವರಾಜುವಿನ ಪರಿಚಯ ಜ್ಯೋತಿಗೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಆಗಿತ್ತು. ಸ್ವಂತ ಜಿಲ್ಲೆಯವರು ಎಂಬ ಕಾರಣಕ್ಕೆ ಇಬ್ಬರಲ್ಲೂ ಆತ್ಮೀಯತೆ ಬೆಳೆದಿತ್ತು. ಇದೇ ಆತ್ಮೀಯತೆ ಕ್ರಮೇಣ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಪರಿಚಯವಾದ ಬಸವರಾಜನೊಂದಿಗೆ ಸಂಸಾರ ನಡೆಸಲು ಜ್ಯೋತಿ ಮುಂದಾಗಿದ್ದಳು. ಈ ಬಗ್ಗೆ ರಾಮು ಹಾಗೂ ಜ್ಯೋತಿ ಅವರ ಕುಟುಂಬದವರಿಗೆ ತಿಳಿದು ಎರಡೂ ಕುಟುಂಬದ ನಡುವೆ ಮಾತುಕತೆ ನಡೆದಿತ್ತು. ಇದರ ನಡುವೆ ಏಕಾಏಕಿ ಮನೆಬಿಟ್ಟ ಜ್ಯೋತಿ 10 ದಿನದಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಪತಿ ರಾಮು ಕೊಡಿಗೇಹಳ್ಳಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅತ್ತ ಜ.17ರಂದು ಜ್ಯೋತಿ ಮತ್ತು ಬಸವರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು.
ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಕಾಳಿ ಮಠದ ಸ್ವಾಮೀಜಿ ಬಂಧನ: ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ತೀವಿ… ನನ್ನ ಹೇಳಿಕೆಗೆ ಈಗಲೂ ಬದ್ಧ…

ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್​ ನೀವೆಲ್ಲ ನನಗೊಂದು ಸಹಾಯ​ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
