ಬೆಂಗಳೂರು:ದೂರು ನೀಡಲು ಹೆಣ್ಣೂರು ಪೊಲೀಸ್​ ಠಾಣೆಗೆ ಬಂದ ಮಹಿಳೆಯನ್ನೇ ಪೊಲೀಸ್​ ಇನ್​ಸ್ಪೆಕ್ಟರ್​ವೊಬ್ಬರು ಮಂಚಕ್ಕೆ ಕರೆದಿದ್ದಾರೆ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.
ದೂರು ನೀಡಲು ಹೋದ ನನಗೆ ಲೈಂಗಿಕ ಕಿರುಕುಳ ಕೊಟ್ಟು ನನ್ನ ವಿರುದ್ಧವೇ ಪೊಲೀಸ್​ ಇನ್​ಸ್ಪೆಕ್ಟರ್​ ವಸಂತ್​ ಕುಮಾರ್​ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಾಣಸವಾಡಿಯ ಶಕ್ತಿನಗರದ ಮಹಿಳೆಯೊಬ್ಬರು ನಗರದ ಪೊಲೀಸ್​ ಆಯುಕ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ‘5 ಲಕ್ಷ ರೂ. ಲಂಚ ಕೊಡಬೇಕು. ಹಣ ಕೋಡೋಕೆ ಆಗಲ್ಲ ಅಂದ್ರೆ ನಾನು ಕರೆದಾಗಲೆಲ್ಲ ಬಂದು ನನ್ನ ಜತೆಗೆ ಮಲಗಬೇಕು’ ಎಂದು ಇನ್​ಸ್ಪೆಕ್ಟರ್​ ಪೀಡಿಸಿದರು. ಇದಕ್ಕೆ ಒಲ್ಲೆ ಎಂದ ನನ್ನ ವಿರುದ್ಧವೇ ಕೇಸ್​ ದಾಖಲಿಸಿದ್ದಾರೆ ಎಂದು ಮಹಿಳೆ ಪೊಲೀಸ್​ ಕಮಿಷನರ್​ಗೆ ದೂರು ಸಲ್ಲಿಸಿದ್ದಾರೆ.
‘ಬಾಣಸವಾಡಿಯ ಶಕ್ತಿನಗರದಲ್ಲಿ ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ನಾನು ವಾಸಿಸುತ್ತಿದ್ದೇನೆ. ನನ್ನ ಪತಿ ಅನಾರೋಗ್ಯ ಪೀಡಿತರಾಗಿದ್ದು, ನಾನೇ ಕುಟುಂಬದ ನಿರ್ವಹಣೆ ಮಾಡುತ್ತಿದ್ದೇನೆ. ಶಕ್ತಿನಗರದಲ್ಲಿ ನನಗೆ ಸೇರಿದ ಮನೆಯನ್ನು ಸುಮತಿ ಎಂಬುವವರು 7 ಲಕ್ಷ ರೂ.ಗೆ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದರು. ನೀರಿನ ಬಿಲ್​ ಕಟ್ಟುವಂತೆ ಅವರ ಮನೆ ಬಳಿ ಜ.13ರಂದು ಹೋದೆ. ಆಗ ಸುಮತಿ ಮತ್ತು ಅವರ ಪತಿ, ಮಕ್ಕಳು, ಸಹೋದರ ಲೈಂಗಿಕ ದೌರ್ಜನ್ಯ ನಡೆಸಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ದೂರು ಕೊಡಲು ಹೆಣ್ಣೂರು ಪೊಲೀಸ್​ ಠಾಣೆಗೆ ಹೋದಾಗ ಇನ್​ಸ್ಪೆಕ್ಟರ್​ ವಸಂತಕುಮಾರ್​ ದೂರು ಸ್ವೀಕರಿಸಲು ನಿರಾಕರಿಸಿದರು’ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಮುನಿರಾಜು ಎಂಬ ವಕೀಲ ಹಲ್ಲೆ ಮಾಡಿದ ಪ್ರಕರಣದಲ್ಲಿ ಸುಮತಿ ಜತೆ ಸೇರಿ ನನ್ನ ವಿರುದ್ಧ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡಿದ್ದರು. ನನ್ನನ್ನು ಠಾಣೆಗೆ ಕರೆಸಿದ ಇನ್​ಸ್ಪೆಕ್ಟರ್​ ವಸಂತ್​ ಕುಮಾರ್​ “ನಿನಗೆ ಎರಡು ಆಯ್ಕೆ ಕೊಡುತ್ತೇನೆ. ಒಂದು ನೀನು ನನಗೆ 5 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಕರೆದಾಗಲೆಲ್ಲ ಬಂದು ನನ್ನ ಜತೆಗೆ ಮಲಗು” ಎಂದು ಬೇಡಿಕೆ ಇಟ್ಟರು. ನಾನು ಮರ್ಯಾದಸ್ತ ಕುಟುಂಬದವಳು ನೀವು ಕೇಸನ್ನು ಹಾಕಿ ಎಂದು ಹೇಳಿದೆ. ಅದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರ ಜತೆ ನಾನೇ ನಿಂತು ನಿನ್ನ ವಿರುದ್ಧ ಇನ್ನೂ 10 ಕೇಸ್​ ಹಾಕಿಸುತ್ತೇನೆ ಎಂದು ಮೈಕೈ ಹಿಡಿದು ಎಳೆದಾಡಿ ನನ್ನ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ನಾನು ಒಂದು ತಿಂಗಳ ನಂತರ ಬೇಲ್​ ಮಾಡಿಸಿ ಹೊರ ಬಂದಿದ್ದೇನೆ ನನಗೆ ನ್ಯಾಯ ಕೊಡಿಸಿ’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
‘ಸುಮತಿ ಮತ್ತು ಇತರರನ್ನು ಎತ್ತಿಕಟ್ಟೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದು, ನಾನು ವೈದ್ಯಕೀಯ ವರದಿಯೊಂದಿಗೆ ದೂರು ನೀಡಿದರೂ ಸ್ವೀಕರಿಸಲಿಲ್ಲ. ನಾನು ಡಿಸಿಪಿ ಮತ್ತು ಎಸಿಪಿ ಅವರನ್ನು ಭೇಟಿಯಾಗಿ ದೂರು ನೀಡಿದಾಗ ಅವರು ಮತ್ತೆ ಇನ್​ಸ್ಪೆಕ್ಟರ್​ ಅನ್ನು ಭೇಟಿಯಾಗಲು ತಿಳಿಸಿದರು. ನಾನು ಮತ್ತೆ ವಸಂತಕುಮಾರ್​ ಅವರನ್ನು ಭೇಟಿ ಮಾಡಿ ಎಸಿಪಿ ಅವರು ನನ್ನ ದೂರಿನ ಮೇಲೆ ಬರೆದಿದ್ದನ್ನು ತೋರಿಸಿ ಎಫ್​ಐಆರ್​ ಮಾಡಲು ಹೇಳಿದರೂ ಮತ್ತೆ ಅವಾಚ್ಯವಾಗಿ ನಿಂದಿಸಿದರು. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿ ನಾನು ಒಪ್ಪದೇ ಇದ್ದಾಗ ಅವರು ಮಾತನಾಡಿದ ಆಡಿಯೋ ಇದ್ದ ನನ್ನ ಮೊಬೈಲ್​ ಫೋನ್​ ಹೊಡೆದು ಹಾಕಿ ದೌರ್ಜನ್ಯವೆಸಗಿದ್ದಾರೆ’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಆರೋಪ ತಳ್ಳಿಹಾಕಿದ ಇನ್​ಸ್ಪೆಕ್ಟರ್​:ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಇನ್​ಸ್ಪೆಕ್ಟರ್​ ವಸಂತ್​ ಕಮಾರ್​, ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಮಹಿಳೆಯ ಜತೆಗೆ ನಾನು ಅನುಚಿತವಾಗಿ ವರ್ತಿಸಿಲ್ಲ ಎಂದು ತಿಳಿಸಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ನಡೆಯುತ್ತಿತ್ತು… ಅಷ್ಟರಲ್ಲಿ ಆತ ಕಣ್ಣುಬಿಟ್ಟು ಉಸಿರಾಡಿದ!

ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ? ನನ್ನ ಹೊಟ್ಟೆಯಲ್ಲಿದ್ದ 7 ತಿಂಗಳ ಮಗುವನ್ನೂ ಕಿತ್ತುಕೊಂಡೆ.. ಈಗ ಗಂಡನ ಪ್ರಾಣವನ್ನೂ ತೆಗೆದೆ…

6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಕೊಟ್ಟ ಕಾಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
