ಬೆಂಗಳೂರು:ಪತಿ ಜತೆಗೆ ಸ್ಕೂಟರ್​ನಲ್ಲಿ ಹೋಗುತ್ತಿದ್ದ ಸ್ಕಿಡ್​​ ಆಗಿ ಮಹಿಳೆ ಕೆಳಗೆ ಬಿದ್ದ ವೇಳೆ ಶಾಲಾ ಬಸ್​​ ಆಕೆಯೆ ಮೇಲೆ ಹರಿದು ಪ್ರಾಣ ಬಿಟ್ಟ ಭೀಕರ ಅಪಘಾತ ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡದಿದೆ.
ಸುಮಂಗಲ (58) ಮೃತ ಮಹಿಳೆ. ಪತಿ ಶರಣಪ್ಪ ಜತೆಗೆ ಸ್ಕೂಟರ್​​ನಲ್ಲಿ ತೆರಳುವಾಗ ರಸ್ತೆಯಲ್ಲಿದ್ದ ಕಲ್ಲು ಟಯರ್ ಗೆ ಸಿಲುಕಿ ಸ್ಕೂಟರ್ ಸ್ಕಿಡ್ ಆಗಿ ಪತಿ ಮಹಿಳೆ ಕೆಳಗೆ ಬಿದ್ದಿದ್ದಾರೆ‌. ಈ ವೇಳೆ ಹಿಂದೆ ಬರ್ತಿದ್ದ ಖಾಸಗಿ ಸ್ಕೂಲ್ ಬಸ್ ಸುಮಮಂಗಲ ತಲೆ ಮೇಲೆ ಹರಿದಿದೆ. ಈ ಪರಿಣಾಮ ಸುಮಂಗಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಜರುಗುತ್ತಿದ್ದಂತೆ ಶಾಲೆಯ ಬಸ್ ಚಾಲಕ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಸತ್ತು ಬಿದ್ದ ಪತ್ನಿಯ ಮೃತದೇಹ ನೋಡಿದ ಪತಿ ಶವದ ಮೇಲೆ ಬಿದ್ದು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಹಲವು ತಿಂಗಳಿನಿಂದ ಚಿಕ್ಕಗೊಲ್ಲರಹಟ್ಟಿಯಲ್ಲಿ ರಸ್ತೆ ಕಾಮಗಾರಿ ನಿಂತುಹೋಗಿದೆ ರಸ್ತೆ ಗುಂಡಿಗಳಿಂದ ಕೂಡಿದೆ. ಸ್ಟೇಟ್ ಹೈವೆ ಆಗಿರುವುದರಿಂದ ವಾಹನ ಸಂಚಾರ ಹೆಚ್ಚಾಗಿದೆ. ಕಳೆದ ಶನಿವಾರವಷ್ಟೆ ಇದೇ ರಸ್ತೆಯಲ್ಲಿ ಯುವಕನೊಬ್ಬ ಲಾರಿಗೆ ಸಿಲುಕಿ ಪ್ರಾಣ ಬಿಟ್ಟಿದ್ದನು. ಇಂದು 58ವರ್ಷದ ಸುಮಂಗಲ ಮೃತರಾಗಿದ್ದಾರೆ.
ಮಾನವನಿಗೆ ಹಂದಿಯ ಕಿಡ್ನಿ ಅಳವಡಿಕೆ; ಹೊಸ ಸಂಶೋಧನೆ ಮಾಡಿದ ವೈದ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
