ಚಿತ್ರದುರ್ಗ:ರಾಜ್ಯದಲ್ಲಿ ಒಂದೊಂದೇ ಜಿಲ್ಲೆಗಳಿಗೆ ಕಾಲಿಡುತ್ತಿರುವ ಕರೊನಾ ವೈರಸ್​ ಸದ್ಯ ಕೋಟೆ ನಾಡು ಚಿತ್ರದುರ್ಗಕ್ಕೂ ಎಂಟ್ರಿಕೊಟ್ಟಿದೆ. ವಿದೇಶದಿಂದ ಬಂದಿದ್ದ ಮಹಿಳೆಯೋರ್ವರಿಗೆ ಕರೊನಾ ದೃಢಪಟ್ಟಿದೆ.
ಮಹಿಳೆಯೊಂದಿಗೆ ವಿದೇಶದಿಂದ ಆರು ಮಂದಿ ಬಂದಿದ್ದರು. ಸದ್ಯ ಅವರೆಲ್ಲರ ರಕ್ತದ ಮಾದರಿಯನ್ನೂ ತಪಾಸಣೆಗೆ ಕಳಿಸಲಾಗಿದ್ದು, ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕರೊನಾ ನೆಗೆಟಿವ್​ ಬಂದಿದೆ. ಇನ್ನೂ ಇಬ್ಬರ ವರದಿ ಬರಬೇಕಿದೆ.
ಮಹಿಳೆಯನ್ನು ಮನೆಯಲ್ಲೇ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಮನೆಯ ಸುತ್ತ 5ಕಿಮೀ ಅಂತರವನ್ನು ರೆಡ್​ ಝೋನ್​ ಎಂದು ಗುರುತಿಸಲಾಗಿದೆ. ಮನೆಯಿಂದ ಯಾರೂ ಹೊರಬರುವಂತಿಲ್ಲ. ರೆಡ್​ ಝೋನ್ ಒಳಗೂ ಯಾರೂ ಹೋಗುವಂತಿಲ್ಲ.
ಸೋಂಕಿತ ಮಹಿಳೆಯೊಂದಿಗೆ ಮಕ್ಕಳೂ ಕೂಡ ಇದ್ದರು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. (ದಿಗ್ವಿಜಯ ನ್ಯೂಸ್​)
ಕರೊನಾ ವೈರಸ್​ ಸೋಂಕು ತಡೆ ಸಂಪೂರ್ಣ ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​ಗೆ ವಹಿಸಿದ ಸಿಎಂ

ಮಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಕರೊನಾ ವೈರಸ್​: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
