ಶಿವಮೊಗ್ಗ:ಸಾಗರ ತಾಲೂಕು ಶರಾವತಿ ನದಿಯ ಸಿಗಂದೂರು ಲಾಂಚ್​ನಲ್ಲಿದ್ದ ಮಹಿಳೆಯೊಬ್ಬರು ಏಕಾಏಕಿ ಶರಾವತಿ ಹಿನ್ನೀರಿ‌ನ ಮಧ್ಯಭಾಗಕ್ಕೆ ಹಾರಿ ಸಾಯಲು ಯತ್ನಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ(46) ಆತ್ಮಹತ್ಯೆಗೆ ಯತ್ನಿಸಿದವರು. ಭಾನುವಾರ ಸಂಜೆ ನದಿಯಲ್ಲಿ ಲಾಂಚ್ ಸಂಚರಿಸುತ್ತಿತ್ತು. ಅದರಲ್ಲಿ ರೇಣುಕಾ ಕೂಡ ಇದ್ದರು. ಹಿನ್ನೀರಿನ ಮಧ್ಯೆ ಲಾಂಚ್​ ಬರುತ್ತಿದ್ದಂತೆ ಮಹಿಳೆ ನೀರಿಗೆ ಧುಮುಕಿದ್ದಾಳೆ.
ಕೂಡಲೇ ಲಾಂಚ್​ನಲ್ಲಿದ್ದ ಯುವಕರು ಲೈಫ್ ಜಾಕೇಟ್ ಸಹಾಯದಿಂದ ಹಿನ್ನೀರಿಗೆ ಧುಮುಕಿ ಮಹಿಳೆಯನ್ನು ರಕ್ಷಿಸಿದ್ದಾರೆ. ಕೌಟುಂಬಿಕ ಕಾರಣಗಳಿಂದ ನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಹಿನ್ನೀರು ಭಾಗದ ಸುಧಾಕರ್, ಪ್ರಕಾಶ್ ಬೆಳಮಕ್ಕಿ, ಪ್ರಶಾಂತ್ ಸಿಗಂದೂರು ಅವರು ಮಹಿಳೆಯನ್ನ ಕಾಪಾಡಿದವರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡಂದಿರ ಕಿರುಕುಳ: ತಂಗಿ ಸತ್ತ 17 ದಿನಕ್ಕೆ ಅಕ್ಕನೂ ಸಾವು! ಇವರಿಬ್ಬರ ದುರಂತ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

ಗಂಡನಿದ್ದರೂ ಪರಪುರುಷನ ಜತೆ ಮಹಿಳೆಯ ಕಾಮದಾಟ! ಬೇಡ ಬೇಡ ಎಂದವನ ಉಸಿರನ್ನೇ ನಿಲ್ಲಿಸಿದ್ಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
