ಬೆಂಗಳೂರು:ಶೂ, ಡ್ರೆಸ್, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂ. ಮತ್ತು ಮನೆಯಲ್ಲಿ ಊಟಕ್ಕೆ 60,000 ರೂ. ಬೇಕು. ಜತೆಗೆ ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂ. ಅಗತ್ಯವಿದೆ. ತಿಂಗಳಿಗೆ 6,16,300 ಜೀವನಾಂಶ…..
ಪತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ಪತ್ನಿ, ತನಗೆ ಜೀವನಾಂಶ ಕೊಡಿಸುವಂತೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದು ಹೀಗೆ…..ಮಹಿಳೆ ಪರ ವಕೀಲರ ವಾದ ಹಾಗೂ ಮಹಿಳೆಗೆ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕ ಸದಸ್ಯ ಪೀಠ, ಏನಿದು ಒಬ್ಬ ವ್ಯಕ್ತಿಗೆ ಮಾಸಿಕವಾಗಿ ಇಷ್ಟು ಮೊತ್ತದ ಅನಿವಾರ್ಯತೆ ಇದೆಯೇ? ಅದು ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಹಣ ಖರ್ಚು ಮಾಡುತ್ತಾರೆಯೇ? ಅಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ ಅವಳೇ ದುಡಿದು ಸಂಪಾದಿಸಬಹುದು ಹೊರತಾಗಿ ಈ ರೀತಿಯಲ್ಲಿ ಅಲ್ಲ.
ಜತೆಗೆ ಅರ್ಜಿದಾರರ ಮಹಿಳೆ ಉದ್ದೇಶಿಸಿ, ನಿಮಗೆ ಕುಟುಂಬದ ಬೇರಾವ ಜವಾಬ್ದಾರಿ ಇಲ್ಲವೇ? ಮಕ್ಕಳನ್ನು ನೋಡಿಕೊಳಬೇಕಾಗಿಲ್ಲದೆ ಇದ್ದರೂ ಸ್ವತಃ ಖರ್ಚಿಗೆ ಈ ರೀತಿಯಲ್ಲಿ ದೊಡ್ಡ ಮೊತ್ತದ ನಿರೀಕ್ಷೆ. ದಯಮಾಡಿ ಓರ್ವ ವ್ಯಕ್ತಿಯ ಜೀವನ ನಿರ್ವಹಣೆಗೆ ಬೇಕಾಗಿರುವುದು ಇಷ್ಟೇ ಎಂದು ಹೇಳಬೇಡಿ. ನೀಡುವ ಕಾರಣವೂ ಸಮಂಜಸವಾಗಿರಬೇಕು. ಇಲ್ಲಿ ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:12 − 3 =
Remember me
