ಯಾದಗಿರಿ:ಇಬ್ಬರು ಹೆಂಡತಿಯರಿಗೆ ಕೈಕೊಟ್ಟ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಮತ್ತೊಬ್ಬಳನ್ನು ಮದುವೆಯಾಗಿ ಸಿಕ್ಕಿಬಿದ್ದು, ಸೇವೆಯಿಂದ ಅಮಾನತು ಆಗಿದ್ದಾನೆ. ಅಷ್ಟೇ ಅಲ್ಲ ಇದೀಗ ಆತನ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಸೈದಾಪುರ ಹತ್ತಿರದ ನೀಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಮುಖ್ಯ ಶಿಕ್ಷಕ ಮೋಹನರಡ್ಡಿ ಸಂಗಾರಡ್ಡಿ ಮೂವರು ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿದ್ದಾನೆ. 1988ರಲ್ಲಿ ಸುರಪುರ ತಾಲೂಕಿನ ಬೋನಾಳ ಗ್ರಾಮದ ತಿಪ್ಪಮ್ಮಳನ್ನು ವರಿಸಿದ್ದ ಈತ, 1992ರಲ್ಲಿ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ದೇವಮ್ಮ ಜತೆ ಮದುವೆಯಾಗಿದ್ದಾನೆ. ಇಷ್ಟು ಸಾಲದೆಂಬಂತೆ 2007ರಲ್ಲಿ ವಿಜಯಪುರ ಜಿಲ್ಲೆಯ ತುಂಬಗಿ ಗ್ರಾಮದ ಗುರುಸಂಗಮ್ಮ ಎಂಬಾಕೆ ಕೈ ಹಿಡಿದಿದ್ದಾನೆ.
ಅಚ್ಚರಿ ಎಂದರೆ, ಮೊದಲ ಇಬ್ಬರು ಹೆಂಡತಿಯರಿಗೆ ಈತ ಮೂರನೇ ಮದುವೆಯಾಗಿದ್ದು ಗೊತ್ತೇ ಇರಲಿಲ್ಲ. ಇತ್ತೀಚೆಗಷ್ಟೇ ಎರಡನೇ ಪತ್ನಿ ದೇವಮ್ಮಗೆ ಕಿರುಕುಳ ನೀಡಿ ಮನೆಯಿಂದ ಆಚೆ ಹಾಕಲು ಮುಂದಾಗಿದ್ದ. ಆಕೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದೇ ತಡ ತಾನು ಮತ್ತೊಂದು ಮದುವೆಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಹೀಗಾಗಿ ಮೊದಲ ಇಬ್ಬರು ಪತ್ನಿಯರು ಪತಿ ಮೋಸ ಮಾಡಿದ್ದು, ನ್ಯಾಯ ದೊರಕಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ವಿಚಾರಣೆ ನಡೆಸಿದ ಡಿಡಿಪಿಐ ಶಾಂತಗೌಡ ಪಾಟೀಲ್​, ಶಿಕ್ಷಕ ಮೋಹನರೆಡ್ಡಿ ಮೂರು ಮದುವೆಯಾಗಿದ್ದನ್ನು ಖಚಿತಪಡಿಸಿಕೊಂಡು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಪತ್ನಿಯರು ಪತಿಯಿಂದಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ನ್ಯಾಯ ಕೊಡಿಸುವಂತೆ ಇಬ್ಬರು ಪತ್ನಿಯರು ಹಾಗೂ ಅವರ ಮಕ್ಕಳು ನಿನ್ನೆ(ಸೋಮವಾರ) ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಬಳಿ ಮನವಿ ಮಾಡಿದ್ದರು. ಸೈದಾಪೂರ ಪೊಲೀಸ್ ಠಾಣೆಯಲ್ಲಿ ಮೋಹನರೆಡ್ಡಿ ಪಾಟೀಲ್ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕ ಮದುವೆ ಆಗುವುದನ್ನೇ ಖಯಾಲಿ ಮಾಡಿಕೊಂಡಿದ್ದು ವರ್ತಮಾನದ ದುರಂತ.
ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seven =
Remember me
