ಯಾದಗಿರಿ:ಇಲ್ಲೊಬ್ಬ ಶಿಕ್ಷಕ ಸುಳ್ಳು ಹೇಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂವರನ್ನು ಮದ್ವೆ ಆಗಿದ್ದಾನೆ. ಈ ವಿಚಾರ ಪರಸ್ಪರ ಪತ್ನಿಯರಿಗೂ ಗೊತ್ತಾಗದಂತೆ ಹಲವು ವರ್ಷ ಸಂಸಾರ ನಡೆಸಿದ ಇದೀಗ ಸಿಕ್ಕಿಬಿದ್ದಿದ್ದಾನೆ.
ಆ ಭೂಪನ ಹೆಸರು ಮೋಹನರೆಡ್ಡಿ ಪಾಟೀಲ್. ಯಾದಗಿರಿ ತಾಲೂಕಿನ ನಿಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮೂರು ಮದ್ವೆಯಾದ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಮೋಹನರೆಡ್ಡಿ ಪಾಟೀಲ್ 1988ರಲ್ಲಿ ಮದುವೆ ಆಗಿದ್ದ. 1992ರಲ್ಲಿ ಎರಡನೇ ಮದುವೆ ಆಗಿದ್ದ. ಎರಡು ಮದುವೆ ಆಗಿರುವ ವಿಚಾರ ಬಚ್ಚಿಟ್ಟು 2007ರಲ್ಲಿ ಮತ್ತೊಬ್ಬಳನ್ನ ಕೈಹಿಡಿದಿದ್ದ. ಮೊದಲ ಮತ್ತು ಎರಡನೇ ಹೆಂಡತಿಯರಿಗೆ ಕೈ ಕೊಟ್ಟು ಮೂರನೇ ಹೆಂಡ್ತಿ ಜತೆ ಸಂಸಾರ ನಡೆಸುತ್ತಿದ್ದ.
ತಮ್ಮ ಗಂಡ ಮೂರನೇ ಮದ್ವೆ ಆಗಿದ್ದಾನೆ ಎಂಬ ವಿಚಾರ ಮೊದಲ ಮತ್ತು 2ನೇ ಪತ್ನಿಯರಿಗೆ ತಿಳಿದಿದೆ. ಅವರಿಬ್ಬರೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಸರ್ಕಾರಿ ಶಾಲೆ ಶಿಕ್ಷಕ 3 ಮದ್ವೆ ಆಗಿದ್ದಾನೆ ಎಂಬ ವಿಚಾರ ತಿಳಿದು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಕಾನೂನು ಬಾಹಿರವಾಗಿ ಮದ್ವೆಯಾದ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಿ ಡಿಡಿಪಿಐ ಶಾಂತಗೌಡ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
